Advertisement
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಚುನಾವಣ ಆಯುಕ್ತ ಜಿ.ಎಸ್. ಸಂಗ್ರೇಶಿ ಈ ವಿಷಯ ತಿಳಿಸಿದರು.
Related Articles
ಕಾಲಮಿತಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ 2006ರಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.
ಅವಧಿ ಮುಗಿಯುವ ಸ್ಥಳೀಯ ಸಂಸ್ಥೆಗಳಿಗೆ ಕಾಲಮಿತಿಯೊಳಗೆ ಚುನಾವಣೆ ನಡೆಸುವುದು ರಾಜ್ಯ ಚುನಾವಣ ಆಯೋಗದ ಸಂವಿಧಾನಬದ್ಧ ಹೊಣೆಗಾರಿ ಕೆಯಾಗಿದೆ. ವಾರ್ಡ್ ಕ್ಷೇತ್ರ ಪುನರ್‌ವಿಂಗಡಣೆ, ಮೀಸಲಾತಿ ಮತ್ತಿತರ ವಿಚಾರಗಳಿಂದ ಚುನಾವಣೆಗಳು ವಿಳಂಬವಾಗಿವೆ. ಕಾಲಮಿತಿ ಯೊಳಗೆ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಲು ಸರಕಾರಕ್ಕೆ ನಿರ್ದೇಶನ ನೀಡುವಂತೆ ಸ್ವತಃ ಚುನಾವಣ ಆಯೋಗ ನ್ಯಾಯಾಲಯದ ಮೊರೆ ಹೋಗಿದೆ. ಬಿಬಿಎಂಪಿ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಆ. 20ರಂದು ವಿಚಾರಣೆಗೆ ಬರಲಿದೆ. ತಾ.ಪಂ. ಜಿ.ಪಂ. ಮೀಸಲಾತಿ ನಿಗದಿಪಡಿಸುವ ವಿಚಾರದಲ್ಲಿ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ನಡೆದುಕೊಂಡಿಲ್ಲ ಎಂದು ಸರಕಾರದ ವಿರುದ್ಧ ಚುನಾವಣ ಆಯೋಗವು ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದೆ. ಇದರ ವಿಚಾರಣೆ ಆ. 12ರಂದು ನಡೆಯಲಿದೆ. ನ್ಯಾಯಾಲಯದಲ್ಲಿ ಆಗುವ ಬೆಳವಣಿಗೆಗಳನ್ನು ಆಧರಿಸಿ ಆಯೋಗ ಮುಂದಿನ ಹೆಜ್ಜೆ ಇರಿಸಲಿದೆ. ಈ ವಿಚಾರದಲ್ಲಿ ಸರಕಾರ ಸಹಕಾರ ನೀಡದಿದ್ದರೆ ಆಯೋಗವು ಮತ್ತೆ ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಎಸ್.ಜಿ. ಸಂಗ್ರೇಶಿ ತಿಳಿಸಿದರು.
Advertisement
ಆಯೋಗದ ಕಾರ್ಯದರ್ಶಿ ಎಸ್. ಹೊನ್ನಾಂಬ ಮತ್ತಿತರ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.