Advertisement

ಫ‌ಸ್ಟ್‌ನೈಟ್‌ಗೆ ಕಾಂಡೋಮ್‌ ಗಿಫ್ಟ್!

03:45 AM Jul 05, 2017 | Team Udayavani |

ಭೋಪಾಲ್‌: “ನೀವು ನವವಿವಾಹಿತರಾ? ಹಾಗಾದ್ರೆ ದಯವಿಟ್ಟು ಕಾಂಡೋಮ್‌ ಬಳಸಿ. ಇದರಿಂದ ದಂಪತಿಗಳಿಬ್ಬರಿಗೂ ಅನುಕೂಲ.’

Advertisement

ಮಧ್ಯಪ್ರದೇಶದ ಯಾವುದೇ ನಗರ ಅಥವಾ ಗ್ರಾಮಕ್ಕೆ ಹೋದರೆ, ನವವಿವಾಹಿತರ ಕೈಗೆ ಕಾಂಡೋಮ್‌ ಕೊಟ್ಟು, ಅದನ್ನು ಬಳಸು ವಂತೆ ಸಲಹೆ ನೀಡುವ ಮಂದಿ ಸಿಗುತ್ತಾರೆ. ಆದರೆ ಇವರಾರೂ ಕಾಂಡೋಮ್‌ ಕಂಪನಿಯ ಸೇಲ್ಸ್‌ಮನ್‌ಗಳಲ್ಲ, ಬದಲಿಗೆ ಸರ್ಕಾರವೇ ನೇಮಿಸಿರುವ ಆರೋಗ್ಯ ಕಾರ್ಯಕರ್ತರು.

“ಪುರುಷರು ಕಾಂಡೋಮ್‌ ಬಳಸಲು ಹಿಂದೇಟು ಹಾಕುತ್ತಿದ್ದು, ಮಹಿಳೆಯರು ವಿವಿಧ ರೀತಿಯ ಗರ್ಭನಿರೋಧಕ ಕ್ರಮಗಳ ಮೊರೆ ಹೋಗುವುದು ಹೆಚ್ಚಾಗಿದೆ. ಇದರಿಂದ ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಸಿಯುತ್ತಿರುವ ಜತೆಗೆ ಗರ್ಭಪಾತ ಹೆಚ್ಚಾಗುತ್ತಿದೆ. ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ,’ ಎಂಬ ಅಂಶವನ್ನು ಸರ್ವೇ ಮೂಲಕ ಕಂಡುಕೊಂಡ ಮಧ್ಯಪ್ರದೇಶದ ಆರೋಗ್ಯ ಇಲಾಖೆ ಕಾಂ ಡೋಮ್‌ ಜಾಗೃತಿ ಅಭಿಯಾನ ನಡೆಸುತ್ತಿದೆ.
ಸಮೀಕ್ಷೆಯೊಂದರ ಪ್ರಕಾರ, 2008-09ರಲ್ಲಿ ಮಧ್ಯಪ್ರದೇಶದ 11.8 ಲಕ್ಷ ಪುರುಷರು ಕಾಂಡೋಮ್‌ ಬಳಸುತ್ತಿದ್ದರು.

ಆದರೆ 2016-17ರಲ್ಲಿ ಇದನ್ನು ಬಳಸುವ ಪುರುಷರ ಸಂಖ್ಯೆ 2.79 ಲಕ್ಷಕ್ಕೆ ಕುಸಿದಿದೆ. ಜತೆಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾ ಗುವವರ ಸಂಖ್ಯೆಯಲ್ಲೂ ಶೇ.74ರಷ್ಟು ಕುಸಿತ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಆರೋಗ್ಯ ಕಾರ್ಯಕರ್ತರ ಮೂಲಕ ಪುರುಷರಲ್ಲಿ, ಮುಖ್ಯವಾಗಿ ನವವಿವಾಹಿತರಲ್ಲಿ ಜಾಗೃತಿ ಮೂಡಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next