Advertisement

ಉದಯವಾಣಿ ಚೇತನ ಮೋಹನ್ ದಾಸ್ ಪೈ ನಿಧನಕ್ಕೆ ಕಲ್ಪತರು ನಾಡಿನಲ್ಲಿ ಸಂತಾಪ ಸಭೆ

03:54 PM Aug 01, 2022 | Team Udayavani |

ತುಮಕೂರು :  ನಾಡಿನ ಹೆಸರಾಂತ ದಿನ ಪತ್ರಿಕೆ ಉದಯವಾಣಿಯ ಸ್ಥಾಪಕರೂ ಹಿರಿಯ ಚೇತನರಾದ ಮೋಹನ್ ದಾಸ್ ಪೈ ನಿಧನಕ್ಕೆ ಕಲ್ಪತರು ನಾಡು ತುಮಕೂರಿನಲ್ಲಿ ಸೋಮವಾರ  ಸಂತಾಪ ಸಭೆ ನಡೆಯಿತು.

Advertisement

ತುಮಕೂರಿನ ಉದಯವಾಣಿ ಓದುಗರ ಬಳಗ  ಮತ್ತು ತುಮಕೂರು ಜಿಲ್ಲಾ ದಕ್ಷಿಣ ಕನ್ನಡ ಮಿತ್ರವೃಂದ ದ ವತಿಯಿಂದ  ಉದಯವಾಣಿ ಪತ್ರಿಕೆಯ ಸಂಸ್ಥಾಪಕರಾದ ಮೋಹನ್ ದಾಸ್  ಪೈ ಅವರು  ಅಗಲಿರುವುದಕ್ಕೆ  ಸಂತಾಪ ಸೂಚಿಸಿದರು.

ಸರಳ ಸಮಾರಂಭದಲ್ಲಿ ಮೋಹನ್ ದಾಸ್ ಪೈ ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿ ಎರಡು ನಿಮಿಷ  ಮೌನ ಆಚರಿಸಿ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

ದಕ್ಷಿಣ ಕನ್ನಡ ಮಿತ್ರ ವೃಂದದ ಜಿಲ್ಲಾದ್ಯಕ್ಷರಾದ ಅಮರನಾಥ ಶೆಟ್ಟಿ ಈ ವೇಳೆ ಮಾತನಾಡಿ, ಮೋಹನ್ ದಾಸ್ ಪೈ ಅವರು  ಹೆಸರಾಂತ  ಉದ್ಯಮಿಗಳಾಗಿ ನೂರಾರು ಜನರಿಗೆ ಉದ್ಯೋಗ ನೀಡಿ ಆಶ್ರಯ ನೀಡಿದ್ದರು. ಉದಯವಾಣಿ ದಿನ ಪತ್ರಿಕೆಯನ್ನು ನಾಡಿನ ಹೆಮ್ಮೆಯ ದಿನಪತ್ರಿಕೆಯಾಗಿ ಬೆಳೆಸಿದ್ದಾರೆ ಅವರ ಅಗಲಿಕೆ ನೋವು ತಂದಿದೆ ಎಂದರು.

ಈ ಸಂತಾಪ ಸಭೆಯಲ್ಲಿ ದಕ್ಷಿಣ ಕನ್ನಡ ಮಿತ್ರವೃಂದ   ಕಾರ್ಯದರ್ಶಿ ವೆಂಕಟೇಶ್ , ಸಂಘಟನಾ ಕಾರ್ಯದರ್ಶಿ ಜಯಪೂಜಾರ್, ಓದುಗರ ಬಳಗದ ಗುರುರಾಜ್ ನೇರಂಬಳ್ಳಿ ಮಹಾ ಬಲೇಶ್ವರ್  ಜಿಲ್ಲಾ ಭಂಟರ ಸಂಘದ ಅಧ್ಯಕ್ಷರಾದ ಜಯರಾಮ ಶೆಟ್ಟಿ , ನವಿನ್ ಕುಮಾರ್ ಶೆಟ್ಟಿ , ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರೂ ಉದಯವಾಣಿ ಓದುಗರ ಬಳಗದ  ಪ್ರೇಮಾ ಹೆಗಡೆ, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗದ ಮೋರ್ಚಾದ  ಪ್ರಧಾನ ಕಾರ್ಯದರ್ಶಿ ಕೆ .ವೇದ ಮೂರ್ತಿ, ಸುರೇಶ್ ಹೊಳ್ಳ ಗುರುರಾಜ್ ಬಳುಕರಾಯ ಉದಯವಾಣಿ ಜಿಲ್ಲಾ ಹಿರಿಯ ವರದಿಗಾರ ಚಿ.ನಿ ಪುರುಷೋತ್ತಮ್ .ಪ್ರಸರಣ ವಿಭಾಗದ ಹರೀಶ್ .ಸುರೇಶ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next