Advertisement

RBI: ಸಾಲ ವಸೂಲಾತಿ ಏಜೆಂಟ್‌ಗಳಿಗೆ ಷರತ್ತು

09:55 PM Oct 26, 2023 | Pranav MS |

ಮುಂಬೈ: ಬಾಕಿಯಿರುವ ಸಾಲ ವಸೂಲಾತಿಗೆ ಸಂಬಂಧಿಸಿ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ. ರಿಕವರಿ ಏಜೆಂಟ್‌ಗಳು ಸಾಲಗಾರರಿಗೆ ಬೆಳಗ್ಗೆ 8 ಗಂಟೆಯೊಳಗೆ ಮತ್ತು ರಾತ್ರಿ 7 ಗಂಟೆಯ ನಂತರ ಕರೆ ಮಾಡಬಾರದು ಎಂಬ ನಿಯಮವೂ ಇದರಲ್ಲಿ ಇರಲಿದೆ.

Advertisement

ಸಾಲ ವಸೂಲಾತಿ ಏಜೆಂಟ್‌ಗಳು ಗ್ರಾಹಕರೊಂದಿಗೆ ಸಂವೇದನೆಯೊಂದಿಗೆ ಮಾತನಾಡಬೇಕು, ಖಾಸಗಿತನಕ್ಕೆ ಧಕ್ಕೆ ತರಬಾರದು, ಯಾವುದೇ ರೀತಿ ದೌರ್ಜನ್ಯ ಎಸಗಬಾರದು, ಸಾರ್ವಜನಿಕವಾಗಿ ಅವಹೇಳನ ಮಾಡಬಾರದು, ಬೆದರಿಕೆ ಹಾಕಬಾರದು, ಅನಪೇಕ್ಷಿತ ಸಂದೇಶ ಕಳುಹಿಸಬಾರದು, ಸುಳ್ಳು ಮಾಹಿತಿ ನೀಡಬಾರದು ಸೇರಿದಂತೆ ಅನೇಕ ನಿಯಮಗಳನ್ನು ಪ್ರಸ್ತಾಪಿತ ಕರಡುವಿನಲ್ಲಿ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next