ಬೆಂಗಳೂರು: ಸರಕಾರಿ ಶಾಲೆಗಳ ಮಕ್ಕಳಿಗೆ ಶೂ, ಸಾಕ್ಸ್ ಅಥವಾ ಸ್ಯಾಂಡಲ್ಸ್ ಖರೀದಿಗೆ ಕೆಲವು ಷರತ್ತು ವಿಧಿಸಲಾಗಿದೆ.
ಎಸ್‌ಡಿಎಂಸಿ ಅಧ್ಯಕ್ಷರು ಸಮಿತಿ ಅಧ್ಯಕ್ಷರಾಗಿ, ಶಾಲಾ ಮುಖ್ಯೋಪಾಧ್ಯಾಯ ಸದಸ್ಯ ಕಾರ್ಯದರ್ಶಿ, ಎಸ್‌ಡಿಎಂಸಿ ನಾಮನಿರ್ದೇಶಿತ ಮೂವರು ಸದಸ್ಯರ (ಇಬ್ಬರು ಮಹಿಳೆಯರು ಕಡ್ಡಾಯ) ಸಮಿತಿ ಮೂಲಕವೇ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ಖರೀದಿಸಿ ವಿತರಿಸಲು ಸೂಚಿಸಲಾಗಿದೆ.
ಶೂ, ಸಾಕ್ಸ್ ಅಥವಾ ಸ್ಯಾಂಡಲ್ ಖರೀದಿಗೆ 1ರಿಂದ 5ನೇ ತರಗತಿ ವರೆಗಿನ ಪ್ರತಿ ವಿದ್ಯಾರ್ಥಿ 265 ರೂ., 6ರಿಂದ 8ನೇ ತರಗತಿ ವರೆಗೆ 295ರೂ., 9ರಿಂದ 10 ತರಗತಿ ವಿದ್ಯಾರ್ಥಿಗಳಿಗೆ 325ರೂ. ನಿಗದಿಪಡಿಸಲಾಗಿದೆ. ಒಂದು ವೇಳೆ ದಾನಿಗಳು, ಖಾಸಗಿ ವ್ಯಕ್ತಿಗಳು ಹೆಚ್ಚುವರಿ ಹಣ ನೀಡಿದಲ್ಲಿ ಅದನ್ನು ಬಳಸಿಕೊಂಡು ಇನ್ನಷ್ಟು ಉತ್ತಮ ಗುಣಮಟ್ಟದ ಶೂಗಳನ್ನು ಖರೀದಿಸಲು ಆದೇಶಿಸಲಾಗಿದೆ.
ಯಾವುದೇ ಕಾರಣಕ್ಕೆ ಖರೀದಿ ಪ್ರಕ್ರಿಯೆ ವಿಳಂಬಗೊಳಿಸದಂತೆ ತಿಳಿಸಲಾಗಿದೆ.
ಒಂದು ಜೋಡಿ ಕಪ್ಪು ಬಣ್ಣ ಶೂ ಜತೆಗೆ ಬಿಳಿ ಬಣ್ಣದ ಸಾಕ್ಸ್ ವಿತರಿಸಬೇಕು. ಜತೆಗೆ ಸ್ಥಳೀಯ ವಾತಾವರಣವನ್ನು ಗಮನಿಸಿ ಸ್ಥಳೀಯ ಅಗತ್ಯ ಪರಿಗಣಿಸಿ ಶೂ ಖರೀದಿಸಬೇಕು.