Advertisement

ಟಿಪ್ಪು ಜಯಂತಿ ರದ್ದತಿಗೆ ಖಂಡನೆ

03:16 PM Aug 03, 2019 | Team Udayavani |

ಬಾಗಲಕೋಟೆ: ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದುಪಡಿಸಿದ್ದನ್ನು ವಿರೋಧಿಸಿ ನಗರದ ವಿವಿಧ ಪ್ರಗತಿಪರ ಸಂಘಟನೆಗಳು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದವು.

Advertisement

ನವನಗರದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಿಂದ ಪ್ರಗತಿಪರ ಸಂಘಟನೆಗಳ ಹಲವು ಪ್ರಮುಖರು ಡಿಸಿ ಕಚೇರಿ ವರೆಗೆ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ರಮೇಶ ಆರ್‌. ಬದ್ನೂರ ಮಾತನಾಡಿ, ದೇಶದಲ್ಲಿ ನೂರಾರು ಧರ್ಮಗಳು ಹಾಗೂ ಲಕ್ಷಾಂತರ ಜಾತಿಗಳು ಇವೆ. ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ ನಾಗರಿಕ ಹಿತಾಸಕ್ತಿ ಕಾಪಾಡಲು ಜಗತ್ತಿನಲ್ಲಿ ಅತ್ಯಂತ ದೊಡ್ಡ ಲಿಖೀತ ಸಂವಿಧಾನ ಹೊಂದಿದ್ದೇವೆ. ಆದ್ದರಿಂದ, ನಾಗರಿಕ ಹಿತಾಸಕ್ತಿ ಉಳಿಸಿಕೊಂಡು ಹೋಗಬೇಕು. ಆದರೆ, ರಾಜ್ಯ ಸರ್ಕಾರ ಅದನ್ನು ತುಳಿಯುವ ಕೆಲಸ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಆದರ ಈಗ ಅದನ್ನು ಬದಿಗಿಟ್ಟು ಧರ್ಮ, ಜಾತಿಗಳ ಮೇಲೆ ತಾರತಮ್ಯ ಮಾಡುತ್ತಿದೆ. ಕರ್ನಾಟಕವನ್ನು ಲೂಟಿ ಮಾಡಿ ಸಾಮ್ರಾಜ್ಯವನ್ನು ಕಟ್ಟಿಕೊಂಡ ಮರಾಠರು, ಮೊಗಲರು, ಪೇಶ್ವೆಗಳ ಇತಿಹಾಸವನ್ನು ಆರಾಧಿಸುವ ಬಿಜೆಪಿಗರಿಗೆ ಟಿಪ್ಪು ದ್ರೋಹಿಯಂತೆ ಕಾಣುತ್ತಾನೆ. ಟಿಪ್ಪು, ಮತಾಂಧ ಎಂದು ಕರೆಯುತ್ತಿರುವುದಕ್ಕೆ ಅರ್ಥವೇ ಇಲ್ಲ ಎಂದರು.

ಉತ್ತರ ಭಾರತದ ಅನೇಕ ರಾಜರು ಮಾಡಿದ್ದ ಲೂಟಿ, ಮತಾಂತರ, ಹತ್ಯೆ ಯಾವುದು ನಿಮ್ಮ ಕಣ್ಣಿಗೆ ಕಾನಿಸುತ್ತಿಲ್ಲ. ನಿಮ್ಮಗಳ ರಾಷ್ಟ್ರೀಯತೆಯ ಆಕ್ರಮಣಕ್ಕೆ ಕರ್ನಾಟಕ ಇತಿಹಾಸ ಮತ್ತು ಇತಿಹಾಸ ಪುರುಷರನ್ನು ಬಲಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಟಿಪ್ಪು ಇರದಿದ್ದರೆ ಮೈಸೂರು ರಾಜ್ಯ ಯಾವತ್ತೋ ಮರಾಠರ ರಾಜ್ಯವಾಗುತ್ತಿತ್ತು. ತನ್ನ ಸಾಮ್ರಾಜ್ಯದ ಮೇಲೆ ದಂಡೆತ್ತಿ ಬಂದ ವೈರಿಗಳಿಗೆ ನೆಲೆ ನೀಡಿದವರನ್ನು ಸಂಹರಿಸಿ ತನ್ನ ರಾಜ್ಯ ರಕ್ಷಣೆ ಮಾಡಿಕೊಂಡಿದ್ದಾನೆ ಹೊರತು, ಕೊಡಗಿನ ಜನರನ್ನು ಹಿಂದುಗಳು ಎನ್ನುವ ದ್ವೇಷದಿಂದಾಗಲಿ ಉದ್ದೇಶಪೂರ್ವಕವಾಗಿ ಸಂವರಿಸುವ ಕೆಲಸ ಟಿಪ್ಪು ಮಾಡಿಲ್ಲ. ಇದಕ್ಕೆ ಸಾಕಷ್ಟು ದಾಖಲೆಗಳಿವೆ ಎಂದರು.

ವಕೀಲ ಎನ್‌.ಬಿ. ಗಸ್ತಿ, ಪರಶುರಾಮ ಮಹಾರಾಜನವರ, ನೂರಅಹಮದ್‌ ಪಟ್ಟೆವಾಲ, ಸಲೀಂ ಮೊಮಿನ, ಬಸವರಾಜ ನೀಲನಾಯಕ, ನಾಗರಾಜ ಹೊಂಗಲ್, ಬಸವರಾಜ ದರ್ಮಂತಿ, ಆತ್ಮಾರಾಮ ನೀಲನಾಯಕ, ಮಲ್ಲು ಕಟ್ಟಿಮನಿ, ಬಸವರಾಜ ಅಂಬಿಗೇರ, ರಾಜು ಮನ್ನಿಕೇರಿ, ನಬೀಸಾಬ ಟಂಕಸಾಲೆ, ಗೌಫ್‌ ಚೌಹಾರಿ, ಸಿಖಂದರ ಅಥಣಿ, ಜಾಫರ್‌ ಬೇಪಾರಿ, ವಿರುಪಾಕ್ಷ ನೀಲನಾಯಕ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಪ್ರತಿಭಟನೆಯಲ್ಲಿ ಭಾಗವಹಿಸಿ, ಬೆಂಬಲ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next