Advertisement

ವಕೀಲರ ಮೇಲೆ ಪೊಲೀಸ್‌ ಹಲ್ಲೆಗೆ ಖಂಡನೆ

04:39 PM Nov 05, 2019 | Suhan S |

ಹೊಳಲ್ಕೆರೆ: ದೆಹಲಿ ನ್ಯಾಯಾಲಯ ಆವರಣದಲ್ಲಿ ನ್ಯಾಯವಾದಿಗಳ ಮೇಲೆ ಪೊಲೀಸರ ಹಲ್ಲೆ ಹಾಗೂ ದೌರ್ಜನ್ಯ ಖಂಡಿಸಿದ ಇಲ್ಲಿನ ವಕೀಲರ ಸಂಘದ ಸದಸ್ಯರು, ಸೋಮವಾರ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.

Advertisement

ವಕೀಲರ ಸಂಘದ ಅಧ್ಯಕ್ಷ ಜಿ.ಈ. ರಂಗಸ್ವಾಮಿ ಮಾತನಾಡಿ, ರಾಜ್ಯ ಹಾಗೂ ದೇಶದಲ್ಲಿ ಪೊಲೀಸರ ಗುಂಡಾ ವರ್ತನೆ ಹೆಚ್ಚಾಗಿದೆ. ನೊಂದಿರುವ ನಾಗರಿಕ ಸಮುದಾಯಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುವ ನ್ಯಾಯವಾದಿಗಳ ಸಮುದಾಯವನ್ನು ಗುರಿಯಾಗಿಸಿಕೊಂಡು ಪೊಲೀಸರು ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್‌ ಎಂದರೇ ಅವರೇನ್ನು ಎಲ್ಲರಿಗಿಂತ ಸುಪ್ರೀಮ್‌ ಅಲ್ಲ. ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸುವ ಮಟ್ಟಕ್ಕೆ ಕಾನೂನು ಸುವ್ಯವಸ್ಥೆ ಕೆಟ್ಟು ಹೋಗಿರುವುದು ಈ ದೇಶದ ದೊಡ್ಡ ದುರಂತರ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಆರ್‌.ಜಗದೀಶ್‌, ಕಾರ್ಯದರ್ಶಿ ಪ್ರದೀಪ್‌ ಕುಮಾರ್‌, ವಕೀಲರಾದ ಎಂ.ಶಿವಶಂಕರ್‌, ಜಿ.ಎಚ್‌. ಶಿವಕುಮಾರ್‌,ಆರ್‌.ಎಂ. ಓಂಕಾರಮೂರ್ತಿ, ನಿರಂಜನ್‌, ಕೆ.ಬಿ. ರಾಜಪ್ಪ, ಎಸ್‌. ಜಗದೀಶ್‌, ಬಿ.ಎನ್‌. ಪ್ರಶಾಂತ್‌, ಎಸ್‌.ಜಿ. ರಂಗಸ್ವಾಮಿ, ಎಸ್‌. ವೇದಮೂರ್ತಿ, ಕೆ.ಈ. ಚಂದ್ರಶೇಖರ್‌, ಎಂ.ಬಿ. ಅರುಣಕುಮಾರ್‌, ದಿನಕರ್‌, ಎಂ.ಪ್ರಸನ್ನಕುಮಾರ್‌, ಮಲ್ಲಿಕಾರ್ಜುನ್‌, ಪಿ.ನಂಜುಂಡಪ್ಪ, ಕೆ.ಎಸ್‌. ಜಯದೇವ್‌, ಡಿ.ಜಯಣ್ಣ, ಆರ್‌.ಹನುಮಂತಪ್ಪ, ಹೇಮಂತಕುಮಾರ್‌, ರವಿಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next