ಹಾಸನ: ದಕ್ಷ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಹಾಸನ ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜು ವರ್ಗಾವಣೆ ರದ್ದುಪಡಿಸ ಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಶಿಕ್ಷೆ ಸರಿಯೇ?: ಎಚ್.ಎಲ್. ನಾಗರಾಜು ಅವರನ್ನು ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದು ಅಚ್ಚರಿ ಬೆಳವಣಿಗೆ. ಇವರಿಗೆ ಜಾಗ ತೋರಿಸದೆ ವರ್ಗಾವಣೆ ಮಾಡಿರುವುದು ಜಿಲ್ಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ವರ್ಗಾವಣೆ ಮಾಡುವುದು ಶಿಕ್ಷೆಯ ಒಂದು ವಿಧಾನ ಎಂಬ ಮಾತು ಚಾಲ್ತಿಯಲ್ಲಿದೆ. ಪ್ರಾಮಾಣಿಕ ಅಧಿಕಾರಿ ಡಾ. ನಾಗರಾಜ್‌ರಿಗೆ ಇಂತಹ ಶಿಕ್ಷೆ ನೀಡಿರುವುದು ಸರಿಯೇ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಪರಿಸರ ಜಾಗೃತಿ: ಉಪವಿಭಾಗಾಧಿ ಕಾರಿಗಳಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಕಂದಾಯ ಅದಾಲತ್‌ನಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಪ್ರಕರಣ ಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ, ಬಡವರಿಗೆ ನೆರವಾಗಿದ್ದಾರೆ. ಇಲಾಖೆ ಕೆಲಸದ ಜೊತೆಗೆ ಹತ್ತಾರು ಕೆರೆ, ಕಲ್ಯಾಣಿಗಳ ಪುನರುಜ್ಜೀವನಕ್ಕೆ ಕಾರಣ ವಾಗಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟು ಅರಣ್ಯೀಕರಣಕ್ಕೆ ಪ್ರೋತ್ಸಾಹಿಸಿದ್ದಾರೆ. ಹಲವಾರು ಪರಿಸರ ಜಾಗೃತಿಕೆಲಸಗಳನ್ನು ಎರಡೂವರೆ ವರ್ಷ ಗಳಿಂದ ಮಾಡುತ್ತಿದ್ದಾರೆಂದರು. ಇಲಾಖೆ ನೌಕರರ ಜೊತೆಗೆ ಸಾರ್ವಜನಿಕ ವಲಯದಲ್ಲೂ ವಿಶ್ವಾಸಗಳಿಸಿ ಕೊಂಡಿರುವ ನಾಗರಾಜ್ ಅವರ ವರ್ಗಾವಣೆ ರದ್ದುಗೊಳಿಸಿ ಮತ್ತೆ ಹಾಸನ ಉಪ ವಿಭಾಗಾಧಿಕಾರಿಗಳಾಗಿ ನಿಯುಕ್ತಿ ಗೊಳಿಸಬೇಕೆಂದರು.
ವರ್ಗಾವಣೆ ರದ್ದುಗೊಳಿಸಿ: ಹಾಸನ ಜಿಲ್ಲೆಯ ಹಿತದೃಷ್ಟಿಯಿಂದ ಹಾಸನ ಉಪವಿಭಾಗಾಧಿಕಾರಿ ಎಚ್.ಎಲ್. ನಾಗರಾಜು ಅವರ ವರ್ಗಾವಣೆ ರದ್ದು ಪಡಿಸಿ, ಮತ್ತೆ ಅದೇ ಹುದ್ದೆಯಲ್ಲಿ ಕನಿಷ್ಠ ಇನ್ನೆರಡು ವರ್ಷದವರೆಗಾದರೂ ಮುಂದುವರಿಸಲು ಆಗ್ರಹಿಸಿದರು. ಈ ವೇಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಹಸಿರುಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳಾದ ವೈ.ಎನ್.ಸುಬ್ಬಸ್ವಾಮಿ, ಆರ್.ಪಿ. ವೆಂಕಟೇಶಮೂರ್ತಿ, ಟಿ.ಎಚ್. ಅಪ್ಪಾಜಿಗೌಡ, ರಾಜೀ ವೇಗೌಡ, ಟಿ.ಎಂ. ಶಿವಶಂಕರಪ್ಪ, ಹಿರಿಯ ಸಾಹಿತಿ ರೂಪಾಹಾಸನ್, ಮಂಜುನಾಥ್ ಮೊರೆ, ಪರಿಸರವಾದಿಕಿಶೋರ್ ಕುಮಾರ್, ಸುರೇಶ್ ಗುರೂಜಿ, ಡಾ.ಸಾವಿತ್ರಿ, ಡಾ.ಅಬೂಲ್ ಬಷೀರ್, ಡಾ.ಅನೂಪ್, ವೈ.ಎಸ್. ವೀರಭದ್ರಪ್ಪ, ಅಶೋಕ್, ದೊಡ್ಡ ಕೊಂಡಗುಳದ ರೂಪಾ, ರೈತ ಮುಖಂಡ ಲಕ್ಕಪ್ಪ, ಪತಂಜಲಿ ಪರಿವಾರದ ರಾಧಾ ತಿವಾರಿ ಮತ್ತಿತರರಿದ್ದರು.