Advertisement

ನೋಡಲ್‌ ಅಧಿಕಾರಿ ಬದಲಾವಣೆಗೆ ಖಂಡನೆ

03:00 PM Jun 05, 2021 | Suhan S |

ಶಿವಮೊಗ್ಗ: ನಗರದ ಮೆಗ್ಗಾನ್‌ ಬೋಧನಾ ಆಸ್ಪತ್ರೆ ಕೋವಿಡ್‌ ಲಸಿಕಾ ಕೇಂದ್ರದಲ್ಲಿ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೋಡಲ್‌ ಅಧಿ  ಕಾರಿಯಾದ ಡಾ.ಪ್ರವೀಣಕುಮಾರ್‌ ಅವರನ್ನು ಏಕಾಏಕಿ ಬದಲಾವಣೆ ಮಾಡಿರುವುದನ್ನು ಖಂಡಿಸಿ ಸಿಮ್ಸ್‌ ನಿರ್ದೇಶಕರಿಗೆ ಮತ್ತು ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವ ಕುಮಾರ್‌ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್‌ ಮನವಿ ಸಲ್ಲಿಸಿತು.

Advertisement

ನಿತ್ಯ ಕೋವಿಡ್‌ ಲಸಿಕೆಗಾಗಿ ಜನ ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿಬಂದು ಟೋಕನ್‌ಗಳನ್ನು ಪಡೆದುಲಸಿಕೆ ಪಡೆಯುತ್ತಿದ್ದರು. ಇಂತಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿಸಾರ್ವಜನಿಕರಿಗೆ ಅನುಕೂಲವಾಗುವರೀತಿಯಲ್ಲಿ ಯಾವುದೇ ಒತ್ತಡಗಳಿಗೆಮಣಿಯದೆ ನಿತ್ಯ ಸಾರ್ವಜನಿಕರಿಗೆ ಲಸಿಕೆ ಕೊಡುವುದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ನೋಡಲ್‌ ಅಧಿಕಾರಿಯನ್ನು ಏಕಾಏಕಿ ಬದಲಾವಣೆಯ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದೆ.

ಜನಪ್ರತಿನಿಧಿಗಳು ಹಾಗೂ ಸಿಮ್ಸ್ ನ ಕೆಲವು ಅಧಿಕಾರಿಗಳು ತಮ್ಮಬೆಂಬಲಿಗರಿಗೆ ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ಟೋಕನ್‌ ಕೊಡಲಿಲ್ಲ ಎಂಬ ಕಾರಣಕ್ಕೆರಾಜಕೀಯ ಹಾಗೂ ಮೇಲಾಧಿಕಾರಿಗಳ ಪ್ರಭಾವವನ್ನು ಬಳಸಿ ತಮಗೆ ಬೇಕಾದಂತಹ ಅಧಿಕಾರಿಯನ್ನು ನೇಮಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಬಡವರು ಮಧ್ಯಮ ವರ್ಗದವರು,ವಯೋವೃದ್ಧರು ಬೆಳಗಿನಿಂದಲೇಸರತಿ ಸಾಲಿನಲ್ಲಿ ನಿಂತರೂ ಸಹ ಟೋಕನ್‌ ಪಡೆಯುವುದು ಅಸಾಧ್ಯವಾಗಿರುತ್ತದೆ. ಪ್ರಭಾವಿಗಳು ಒಬ್ಬೊಬ್ಬರೂ ಹತ್ತರಿಂದ ಹದಿನೈದುಟೋಕನ್‌ಗಳನ್ನು ಒಳಗಿಂದೊಳಗೆ ಪಡೆದು ಲಸಿಕೆ ಹಾಕಿಸಿಕೊಳ್ಳುವುದರಲ್ಲಿಸಫಲರಾಗುತ್ತಾರೆ. ಇದರಿಂದ ಸರತಿಸಾಲಿನಲ್ಲಿ ನಿಂತವರಿಗೆ ದೈಹಿಕ ಹಾಗೂಮಾನಸಿಕವಾಗಿ ಕುಗ್ಗು ಹೋಗುವಸಂಭವವೇ ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೂಡಲೇ ನೋಡಲ್‌ ಅಧಿಕಾರಿಯ ಬದಲಾವಣೆ ಮಾಡಿರುವಆದೇಶವನ್ನು ಹಿಂಪಡೆದು ಈಗಿರುವ ನೋಡಲ್‌ ಅಧಿಕಾರಿಯುಯಥಾಸ್ಥಿತಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕೆಂದು ಈ ಮೂಲಕ ಯುವ ಕಾಂಗ್ರೆಸ್‌ಆಗ್ರಹಿಸಿದೆ.

ಯುವ ಕಾಂಗ್ರೆಸ್‌ ಮನವಿಗೆ ಸ್ಪಂದಿಸಿ ಅಧಿಕಾರಿಯವರ ಬದಲಾವಣೆ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಹೋರಾಟ ಅನಿವಾರ್ಯ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಈ ಮೂಲಕಎಚ್ಚರಿಸಿದೆ. ಜಿಲ್ಲಾ ಕಾಂಗ್ರೆಸ್‌ ಪ್ರಧಾನಕಾರ್ಯದರ್ಶಿ ಕೆ.ರಂಗನಾಥ್‌, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಪಿ. ಗಿರೀಶ್‌, ಉತ್ತರ ಬ್ಲಾಕ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ಲೋಕೇಶ್‌ ಗ್ರಾಮಾಂತರ ಅಧ್ಯಕ್ಷಈ.ಟಿ. ನಿತಿನ್‌, ದಕ್ಷಿಣ ಬ್ಲಾಕ್‌ ಯುವಕಾಂಗ್ರೆಸ್‌ ಎಸ್‌. ಕುಮರೇಶ್‌, ಪದಾಧಿ  ಕಾರಿಗಳಾದ ವೆಂಕಟೇಶ್‌ ಕಲ್ಲೂರು,ಕೆ.ಎಲ್‌. ಪವನ್‌, ರಾಹುಲ್‌, ಗಗನ್‌ ಗೌಡ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next