Advertisement

ಮಂಕಿ –ಶೆಟ್ಟರಕೇರಿ ಮಣ್ಣಿನ ರಸ್ತೆಗೆ ಕಾಂಕ್ರೀಟ್‌ ಭಾಗ್ಯ

10:56 PM Mar 25, 2021 | Team Udayavani |

ಮುಳ್ಳಿಕಟ್ಟೆ: ಗುಜ್ಜಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಳ್ಳಿಕಟ್ಟೆ ಸಮೀಪದ ಕೆಸಿಡಿಸಿ ಕಚೇರಿ ರಸ್ತೆಯಿಂದ ಮಂಕಿ ಹೂವನ ಮನೆ ಪರಿ ಸರದ ಶೆಟ್ಟರಕೇರಿ ಮೂಲಕ ಒಳನಾಡು ಸಂಪರ್ಕಿಸುವ ಮಣ್ಣಿನ ರಸ್ತೆಗೆ ಅಂತೂ ಕಾಂಕ್ರೀಟ್‌ ಭಾಗ್ಯ ಒದಗಿ ಬಂದಿದೆ.

Advertisement

ಈ ಭಾಗದ ಜನರು ಈ ರಸ್ತೆಯ ಅಭಿವೃದ್ಧಿಯಾಗಬೇಕು ಎನ್ನುವುದಾಗಿ ದಶಕಕ್ಕೂ ಹೆಚ್ಚು ಕಾಲದಿಂದಲೂ ಒತ್ತಾಯಿಸುತ್ತಿದ್ದರು. ಇದೀಗ ಅವರ ಅವರ ಆಗ್ರ ಹ ಫ‌ಲಪ್ರದವಾಗುವ ಕಾಲ ಸನ್ನಿಹಿತವಾಗಿದೆ.

ಮುಳ್ಳಿಕಟ್ಟೆ – ಗಂಗೊಳ್ಳಿ ಮುಖ್ಯ ರಸ್ತೆಯಿಂದ ಕರ್ನಾಟಕ ರಾಜ್ಯ ರಸ್ತೆ ಗೇರು ಅಭಿವೃದ್ಧಿ ನಿಗಮದ ಕಚೇರಿಗೆ ಹೋಗುವ ರಸ್ತೆಯಿದ್ದು, ಅಲ್ಲಿಂದ ಮುಂದಕ್ಕೆ ಸ್ವಲ್ಪ ದೂರದವರೆಗೆ ಮಾತ್ರ ಈ ಹಿಂದೆ ಕಾಂಕ್ರೀಟ್‌ ಕಾಮಗಾರಿ ಆಗಿತ್ತು. ಅದರ ಆಚೆ ಮುಂದಕ್ಕೆ ಮಣ್ಣಿನ ರಸ್ತೆಯಾಗಿಯೇ ಇದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದರು.

50ಕ್ಕೂ ಹೆಚ್ಚು ಮನೆ :

ಗುಜ್ಜಾಡಿ ಗ್ರಾಮದ ಮಂಕಿ ಹೂವನ ಮನೆ ಪರಿಸರ, ಶೆಟ್ಟರಕೇರಿ, ಒಳನಾಡು ಸೇರಿದಂತೆ ಇನ್ನಿತರ ಹಲವು ಕಡೆಗಳ 50 -60ಕ್ಕೂ ಹೆಚ್ಚು ಮನೆಗಳಿದ್ದು, ನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ.

Advertisement

ಧೂಳು – ಕೆಸರಿಗೆ ಮುಕ್ತಿ  :

ಈ ಶೆಟ್ಟರಕೇರಿ – ಒಳನಾಡು ಸಂಪರ್ಕಿಸುವ ರಸ್ತೆಯಲ್ಲಿ ಮಳೆಗಾಲದಲ್ಲಾದರೆ ಕೆಸರುಮಯವಾಗಿದ್ದು, ಬೇಸಗೆಯಲ್ಲಿ ಧೂಳುಮಯವಾಗಿದ್ದು, ಸಂಚಾರವೇ ದುಸ್ತರವಾಗಿತ್ತು. ವಾಹನ ಸವಾರರು ಮಾತ್ರವಲ್ಲದೆ ಪಾದ ಚಾರಿಗಳು ನಿತ್ಯ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈಗ ಕಾಂಕ್ರೀಟ್‌ ಕಾಮಗಾರಿಗೆ ಅನುದಾನ ಮಂಜೂ ರಾಗಿದ್ದು, ಈ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.

50 ಲಕ್ಷ ರೂ. ಅನುದಾನ : ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಲ್ಲಿ ಗುಜ್ಜಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಹರೀಶ್‌ ಮೇಸ್ತ ಹಾಗೂ ಇತರೆ ಸ್ಥಳೀಯ ನಾಯಕರ ಪರಿಶ್ರಮದಿಂದ ಈ ರಸ್ತೆ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದೆ. ಪ್ರಸ್ತುತ ಕಾಮಗಾರಿಯ ಕುರಿತಂತೆ ರೂಪುರೇಷೆಗಳನ್ನು ತಯಾರಿಸ ಲಾಗುತ್ತಿದ್ದು, ಸದ್ಯದಲ್ಲಿಯೇ ಟೆಂಡರ್‌ ಕರೆಯುವ ಸಾಧ್ಯತೆಗಳಿವೆ. ಒಟ್ಟಾರೆ 550ರಿಂದ 600 ಮೀಟರ್‌ ದೂರದವರೆಗೆ ಕಾಂಕ್ರೀಟ್‌  ಕಾಮಗಾರಿ ಆಗಲಿದೆ.

ಗುಜ್ಜಾಡಿ ಗ್ರಾಮದ ಈ ಶೆಟ್ಟರಕೇರಿ ರಸ್ತೆಯ ಅಭಿವೃದ್ಧಿಗೆ ವಾರಾಹಿ ನೀರಾವರಿ ನಿಗಮದಿಂದ 50 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಈಗ ಕಾಮಗಾರಿಯ ಯೋಜನೆಯನ್ನು ತಯಾರಿಸಲಾಗುತ್ತಿದ್ದು, ಆ ಬಳಿಕ ಅಂದರೆ ಎಪ್ರಿಲ್‌ನಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದ್ದು, ಮೇನಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.  ಪ್ರಶಾಂತ್‌ ಕುಮಾರ್‌, ಎಂಜಿನಿಯರ್‌, ವಾರಾಹಿ  ನೀರಾವರಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next