ಅನಗೊಂಡನಹಳ್ಳಿ: ರಾಷ್ಟ್ರೀಯ ಹೆದ್ದಾರಿ 207ರಿಂದ ಭಕ್ತರಹಳ್ಳಿ ಗ್ರಾಮಕ್ಕೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಕೊಳತೂರು ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಸಂಸದಬಿ.ಎನ್.ಬಚ್ಚೇಗೌಡ, ಶಾಸಕ ಶರತ್‌ಬಚ್ಚೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್‌ಇಲಾಖೆ ವತಿಯಿಂದ ಎಸ್‌ಡಿಪಿ ಯೋಜನೆಯಡಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಬೆಂಗಳೂರುಹಾಲು ಒಕ್ಕೂಟದ ನಿರ್ದೇಶಕರಾದಹುಲ್ಲೂರು ಮಂಜುನಾಥ್, ಜಡಿಗೇ ನಹಳ್ಳಿ ಎಸ್‌ಎಫ್ಸಿಎಸ್ ನಿರ್ದೇಶಕರಾದ ಸುರೇಶ್, ಬಿಎಂಆರ್‌ಡಿ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತಿ, ಸದಸ್ಯರಾದ ಕೆ.ಕೃಷ್ಣ ಮೂರ್ತಿ, ಜಿಪಂ ಮಾಜಿ ಅಧ್ಯಕ್ಷರಾದ ಸಿ. ಮುನಿಯಪ್ಪ, ಬ್ಯಾಂಕ್ ಮಾಜಿ ಅಧ್ಯಕ್ಷ ರಾದ ಸುನೀಲ್, ಮುಖಂಡರಾದ ಶೇಷಪ್ಪ ಮತ್ತಿತರರು ಉಪಸ್ಥಿತರಿದ್ದರು.
……………………………………………………………………………………………………………………………………………………..
ರಸ್ತೆ ಕಾಮಗಾರಿ ಆರಂಭಕ್ಕೆ ಸೂಚನೆ : ವಿಜಯಪುರ: ಹೋಬಳಿಗೊಡ್ಲಮುದ್ದೇನ ಹಳ್ಳಿ ಗ್ರಾಮದಲ್ಲಿ ಸಮರ್ಪಕವಾಗಿ ರಸ್ತೆಯಿಲ್ಲದ ಕಾರಣ, ಸಾರ್ವಜನಿಕರ ದೂರುಗಳನ್ನಾಧರಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ತಾಪಂ ಇಒ ವಸಂತ್ ಕುಮಾರ್, ಕಾಮಗಾರಿ ಆರಂಭಿಸಿ ಅನುಕೂಲ ಮಾಡಿಕೊಡುವ ಭರವಸೆ ನೀಡಿದರು.
5 ವರ್ಷಗಳ ಹಿಂದೆ ನರೇಗಾ ಯೋಜನೆಯಡಿ ಕಾಮಗಾರಿ ಆರಂಭ ಮಾಡಿದ್ದರು. ಸ್ಥಳೀಯ ಸಮಸ್ಯೆಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಗೊಂಡಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಈ ಸಂಬಂಧ ಸ್ಥಳ ಪರಿಶೀಲನೆ ನಡೆಸಿದ್ದು, ನರೇಗಾ ಯೋಜನೆಯಡಿ ಚರಂಡಿ ಕಾಮಗಾರಿ ನಡೆಸಿದ ನಂತರ ರಸ್ತೆ ನಿರ್ಮಾಣಕ್ಕೆ ತಾಪಂ ಸದಸ್ಯರ ಅನುದಾನದಲ್ಲಿ 2 ಲಕ್ಷ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ,ಸದಸ್ಯೆಚೈತ್ರಾ,ಮುಖಂಡರಾದವೀರೇಗೌಡ, ಮುನಿನಾರಾಯಣಪ್ಪ ಮತ್ತಿತರರಿದ್ದರು.