Advertisement

ಅಂಗನವಾಡಿ ದಾರಿಗೆ ಕಾಂಕ್ರೀಟ್‌: ಸಮಸ್ಯೆಗೆ ಸ್ಪಂದಿಸಿದ ಗುತ್ತಿಗೆದಾರ

11:20 AM Aug 01, 2018 | Team Udayavani |

ಉಪ್ಪಿನಂಗಡಿ: ಅಂಗನವಾಡಿ ಆವರಣದಲ್ಲಿ ಜಲ್ಲಿ ಹಾಗೂ ಮರಳು ಸಂಗ್ರಹಿಸಿಟ್ಟು, ನಡೆದಾಡುವ ರಸ್ತೆ ಹೊಂಡಗಳು ನಿರ್ಮಾಣವಾಗಿದ್ದು, ಮಳೆ ನೀರು ನಿಲ್ಲುತ್ತಿತ್ತು. ಇದೀಗ ಕಾಂಕ್ರೀಟ್‌ ಕಾಮಗಾರಿ ಮೂಲಕ ಶಾಶ್ವತ ವ್ಯವಸ್ಥೆ ಮಾಡಿದ್ದು, ಸ್ಥಳೀಯರಿಂದ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. 

Advertisement

ತಿಂಗಳ ಹಿಂದೆ ಕರಾಯ ಗ್ರಾಮದ ಶಿವಗಿರಿ ಅಂಗನವಾಡಿ ಆವರಣದಲ್ಲಿ ಕೆ.ಆರ್‌.ಐ.ಡಿ.ಎಲ್‌. ನಿಗಮ ವತಿಯಿಂದ ಮಜ್ಜಿಕುಡೇಲು ರಸ್ತೆಯ ಕಾಂಕ್ರೀಟ್‌ ಕಾಮಗಾರಿಯ ಗುತ್ತಿಗೆದಾರರು ಅಂಗನವಾಡಿ ಆವರಣದಲ್ಲಿ ಏಕಾಏಕಿ ಜಲ್ಲಿ, ಕಲ್ಲು ಹಾಗೂ ಮರಳು ಶೇಖರಿಸಿದ್ದರು. ಅಂಗನವಾಡಿಯ ಮುಂಭಾಗ ಲಾರಿ, ಟಿಪ್ಪರ್‌ ಸಂಚರಿಸಿ, ದಾರಿಯಲ್ಲಿ ಹೊಂಡಗಳಾಗಿದ್ದವು. ಪುಟ್ಟ ಮಕ್ಕಳು ಹಿಂಬಾಗಿಲಿನಿಂದ ಪ್ರವೇಶಿಸುವ ಅನಿವಾರ್ಯತೆ ಮೂಡಿತ್ತು.

ಈ ಕುರಿತು ಉದಯವಾಣಿ ಸುದಿನ ಎರಡು ಸಚಿತ್ರ ವರದಿಗಳನ್ನು ಪ್ರಕಟಿಸಿತ್ತು. ಕರಾಯ ಗ್ರಾ.ಪಂ. ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಅವರು, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ, ಗುತ್ತಿಗೆದಾರರಿಗೆ ಸಮಸ್ಯೆಯ ಮನವರಿಕೆ ಮಾಡಿಕೊಟ್ಟಿದ್ದರು. ಆ ಬಳಿಕ ಗುತ್ತಿಗೆದಾರರು ಉಪ್ಪಿನಂಗಡಿ – ಬೆಳ್ತಂಗಡಿ ರಾಜ್ಯ ಹೆದ್ದಾರಿ ಸನಿಹದ ಅಂಗನವಾಡಿ ಕಟ್ಟಡದ ಮೆಟ್ಟಿಲ ತನಕ 20 ಮೀ. ದಾರಿಯ ಹೊಂಡಗಳನ್ನು ಮುಚ್ಚಿ, ಕಾಂಕ್ರೀಟ್‌ ಹಾಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next