Advertisement
ದೇವಸ್ಥಾನದ ಅರ್ಚಕ ಸಂಜೀವ ಭಟ್ ಕುಡುಪು ಮಾತಾಡಿ, ದೇವಸ್ಥಾನಗಳಲ್ಲಿ ಯಕ್ಷಗಾನವನ್ನು ಆಯೋಜಿಸುವುದರಿಂದ ಕಲೆ ಇನ್ನಷ್ಟು ಬೆಳಗುತ್ತದೆ. ಕ್ಷೇತ್ರವೂ ಇನ್ನಷ್ಟು ಬೆಳಗಲಿ ಎಂದು ಹಾರೈಸಿದರು. ಬ್ರಹ್ಮಕಲಶ ಸಮಿತಿಯ ಸುದರ್ಶನ ಕುಡುಪು ಮಾತಾಡಿ, ಕುಡುಪಿನಲ್ಲಿ ಯಕ್ಷಗಾನವು ಉತ್ತಮವಾಗಿ ಮೂಡಿಬಂದಿದೆ. ಕಡಿಮೆ ವಿದ್ಯೆ ಇದ್ದವರೂ ಯಕ್ಷಗಾನದಲ್ಲಿ ಉತ್ತಮ ಕಲಾವಿದರಾಗಿ ಮೆರೆಯುವುದು ಯಕ್ಷಗಾನದ ಹೆಚ್ಚುಗಾರಿಕೆ. ಯಕ್ಷಗಾನದ ಉಡುಗೆ ತೊಡುಗೆ ಯನ್ನು ಮ್ಯೂಸಿಯಂನಲ್ಲಿ ನೋಡುವಂತಾಗಿರದೆ ಈ ಕಲೆ ಇನ್ನಷ್ಟು ಬೆಳಗಲಿ ಎಂದು ಆಶಿಸಿದರು. ಯಕ್ಷಗಾನ ಕಲಾವಿದ ಎಡನೀರು ಹರಿನಾರಾಯಣ ಭಟ್ ಅವರನ್ನು ಕಮಲಾದೇವಿ ಆಸ್ರಣ್ಣ ಅವರು ಸಮ್ಮಾನಿಸಿದರು.ಸುಜನ್‌ದಾಸ್ ಕುಡುಪು, ಹರಿಕೃಷ್ಣ ಪುನರೂರು, ಇಸ್ಕಾನ್‌ನ ಕಾರುಣ್ಯ ಸಾಗರ್ ಸ್ವಾಮಿ, ಪದ್ಮನಾಭ ಕೋಟ್ಯಾನ್, ಬಾಲಕೃಷ್ಣ ಭಟ್, ಕುಡುಪು ಸಂಜೀವ ಭಟ್, ಜತ್ತಪ್ಪ ಆಳ್ವ, ಹರಿರಾವ್ ಕೈಕಂಬ, ಕೆ.ಎಸ್. ಕಲ್ಲೂರಾಯ, ಜಯಂತ್ ಭಟ್, ಕಿಶೋರ್ ಶೆಟ್ಟಿ, ಗೋಪಾಲ ಕೃಷ್ಣ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ವಾಸುದೇವ ಕುಡುಪು ಸಮ್ಮಾನ ಪತ್ರ ವಾಚಿಸಿ ನೆರವಾದ ಎಲ್ಲರನ್ನೂ ಸ್ಮರಿಸಿ, ವಂದಿಸಿದರು. ಸುಧಾಕರ ರಾವ್ ಪೇಜಾವರ ಅವರು ಸ್ವಾಗತಿಸಿದರು. ನರಕಾಸುರ ಮೋಕ್ಷ- ಗರುಡ ಗರ್ವಭಂಗ ಎನ್ನುವ ಯಕ್ಷಗಾನ ನಡೆಯಿತು.