Advertisement

‘ವಿಶೇಷ ಪ್ರತಿಭೆ ಹೊರತರಲು ಶಿಬಿರ ಸಹಕಾರಿ’

04:04 PM May 20, 2018 | Team Udayavani |

ಬೆಳ್ತಂಗಡಿ: ಮಕ್ಕಳಲ್ಲಿನ ವಿಶೇಷ ಪ್ರತಿಭೆ ಹೊರ ತರಲು ಬೇಸಗೆ ಶಿಬಿರ ಸಹಕಾರಿಯಾಗಲಿದೆ. ಧನಾತ್ಮಕ ಚಿಂತನೆಯಿಂದ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ತಾಲೂಕು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರಿಯಾ ಚಾಕೋ ಹೇಳಿದರು.

Advertisement

ಅವರು ಸಾನ್‌ತೋಮ್‌ ಟವರ್‌ ಆವರಣದಲ್ಲಿ ದ.ಕ. ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿ, ಎಸ್‌. ಎಂ.ಎಚ್‌.ಐ.ಸಿ. ಸುರಕ್ಷಾ ಕಾರ್ಯಕ್ರಮ ಸಹಯೋಗದಲ್ಲಿ ಎಚ್‌.ಐ.ವಿ., ಏಡ್ಸ್‌ ಸೋಂಕಿತ ಹಾಗೂ ಬಾಧಿತ ಮಕ್ಕಳ ರಜಾ ಶಿಬಿರದ ಸಮಾರೋಪ ಸಮಾರಂಭ ಹಾಗೂ ಉಚಿತ ಪುಸ್ತಕ ಮತ್ತು ಬ್ಯಾಗ್‌ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರಲ್ಲಿಯೂ ನ್ಯೂನತೆಗಳಿರುತ್ತವೆ. ಆದರೆ ಅದನ್ನು ಮೆಟ್ಟಿನಿಂತು ನಮ್ಮ ಕೌಶಲಗಳನ್ನು ಪ್ರದರ್ಶಿಸಿದಾಗ ಸಮಾಜದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.

ಬೆಳ್ತಂಗಡಿ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಧರಣೇಂದ್ರ ಕೆ. ಜೈನ್‌ ಮಾತನಾಡಿದರು. ವೇಣೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸಯ್ಯದ್‌ ಹಸನ್‌ ಉಳೂ¤ರು, ನಮ್ಮಲ್ಲಿರುವ ನ್ಯೂನತೆಗಳನ್ನು ಎದುರಿಸುವ ಛಲ ಮೂಡಬೇಕು. ಎಚ್‌ ಐವಿ ಹಾಗೂ ಏಡ್ಸ್‌ಗಿಂತಲೂ ಮಾದಕ ದ್ರವ್ಯ ಸೇವನೆ ಆತ್ಯಾಂತ ಅಪಾಯಕರ. ಇದು ಚಕ್ರವ್ಯೂಹ ಪ್ರವೇಶಿಸಿದಂತೆ. ಇದರಿಂದ ಹೊರಬರಲು ಆಗುವುದಿಲ್ಲ. ಜತೆಗೆ ಕುಟುಂಬವನ್ನೂ ಇದು ನಾಶ ಮಾಡುತ್ತದೆ ಎಂದು ಹೇಳಿದರು. ಮಕ್ಕಳು ಶಿಬಿರದ ಅನುಭವ ಹಂಚಿಕೊಂಡರು. ಮಕ್ಕಳಿಗೆ ಬ್ಯಾಗ್‌ ವಿತರಣೆ ಮಾಡಲಾಯಿತು.

ಸೌಲಭ್ಯ ಬಳಸಿಕೊಳ್ಳಿ
ಮನುಷ್ಯ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ. ಎಲ್ಲರಿಗೂ ಜೀವಿಸುವ ಹಕ್ಕು ನೀಡಲಾಗಿದೆ. ಆದರೆ ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಅಗತ್ಯ. ವಿಶೇಷ ಮಕ್ಕಳಿಗೆ ಸರಕಾರದಿಂದ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಮಕ್ಕಳು ಬಳಸಿಕೊಳ್ಳಬೇಕು. ಇದರಿಂದ ಮಕ್ಕಳು ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ.
– ಪ್ರಿಯಾ ಚಾಕೋ
ತಾ| ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next