Advertisement

ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಬಗ್ಗೆ ಕಳವಳ

12:36 PM Nov 03, 2019 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ಕಳವಳಕಾರಿಯಾಗಿಯೇ ಇದೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ವಿಶೇಷವಾಗಿ ಭಯೋತ್ಪಾದಕರ ನೇಮಕ ಮತ್ತು ತೀವ್ರಗಾಮಿ ಧೋರಣೆಗಳ ಪ್ರಚಾರಕ್ಕೆ ಇವುಗಳನ್ನು ಬಳಸಲಾಗುತ್ತಿವೆ ಎಂದು ಅದರಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಭಾರತವೂ ಸೇರಿದಂತೆ ವಿಶ್ವದ 20 ರಾಷ್ಟ್ರಗಳಲ್ಲಿ ವಾಟ್ಸ್‌ಆ್ಯಪ್‌ ಬಳಕೆ ಮಾಡುವವರ ಪ್ರಮುಖರ ಮೇಲೆ ಸ್ಪೈವೇರ್‌ ಮೂಲಕ ಕನ್ನ ಹಾಕಿದ ವಿಚಾರ ಬಹಿರಂಗವಾಗಿರುವಾಗಲೇ ಈ ವರದಿ ಮಹತ್ವ ಪಡೆದಿದೆ. ಪಾಕ್‌ ಪ್ರೇರಿತ ಉಗ್ರರು, ನಕ್ಸಲರು ಭಾರತದಲ್ಲಿ ದಾಳಿ ನಡೆಸುತ್ತಿದ್ದಾರೆ. ಇವುಗಳನ್ನು ಮಟ್ಟಹಾಕುವ ಕೆಲಸ ನಡೆಯುತ್ತಿದೆ ಎಂದು ವರದಿ ಹೇಳಿದೆ. ಇದೇ ವೇಳೆ ಉಗ್ರ ಸಂಘಟನೆಗಳು ವಿತ್ತೀಯ ನೆರವು ಪಡೆಯುವುದರ ಮೇಲೆ ನಿಯಂತ್ರಣ ಹೇರುವಲ್ಲಿ ಪಾಕ್‌ ವಿಫ‌ಲವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next