ಮಾರುಕಟ್ಟೆಯಲ್ಲಿ ನಿತ್ಯ ನಿರಂತರವಾಗಿ ಏನಾದರೂ ಒಂದು ಹೊಸ ಉತ್ಪನ್ನಗಳು ಬರುತ್ತಿರುತ್ತವೆ. ಆ ಹೊಸ ಮಾದರಿಯ ಉತ್ಪನ್ನಗಳ ಬಗ್ಗೆ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಅದರ ವಿಶೇಷತೆ ತಿಳಿಸುವುದರ ಜತೆಗೆ ಮಾದರಿ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಇದರಿಂದಾಗಿ ಕಾರು ಮಾರು ಕಟ್ಟೆಯಲ್ಲಿ ಕಾನ್ಸೆಫ್ಟ್ ಕಾರು ಪ್ರದರ್ಶನ ಇತ್ತೀಚೆಗೆ ಹೆಚ್ಚು ಪ್ರಸಿದ್ಧಿಗೊಂಡಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಅಟೋಮೊಬೈಲ್ ಕ್ಷೇತ್ರ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ತಂತ್ರಜ್ಞಾನ ಕ್ಷೇತ್ರದತ್ತ ಮಹತ್ತರ ಮೈಲುಗಲ್ಲು ಸಾಧಿಸುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕಾರು ಉತ್ಪಾದನೆಯ ವಿವಿಧ ಕಂಪೆನಿಗಳು “ಕಾನ್ಸೆಪ್ಟ್ ಕಾರುಗಳು’ ಎಂಬ ಮಾದರಿಯನ್ನು ಗ್ರಾಹಕರಿಗೆ ಪರಿಚಯ ಮಾಡುತ್ತಿದ್ದಾರೆ.
ಯಾವುದಾರರೂ ಹೊಸ ಶೈಲಿ ಅಥವಾ ಹೊಸ ತಂತ್ರಜ್ಞಾನಗಳನ್ನು ಕಾರುಗಳಿಗೆ ಅಳವಡಿಸಿದರೆ ಅದನ್ನು ಗ್ರಾಹಕರಿಗೆ ತಿಳಿಯಪಡಿಸುವ ಮಾದರಿ ಪ್ರದರ್ಶನವೇ ಕಾನ್ಸೆಪ್ಟ್ ಕಾರುಗಳು. ಈ ರೀತಿಯ ಪ್ರದರ್ಶನದಿಂದಾಗಿ ಜನರ ಅಭಿರುಚಿಗೆ ತಕ್ಕಂತೆ ಕಾರುಗಳು ಯಾವ ರೀತಿ ವೈಶಿಷ್ಟéಪೂರ್ಣವಾಗಿ ವಿನ್ಯಾಸಗೊಳಿಸಬಹುದು ಎಂಬುವುದನ್ನು ಕಂಪೆನಿಗಳು ಅರಿಯಲು ಸಹಕಾರಿಯಾಗುತ್ತದೆ. ಮಟೊರೋಮ ಸಂಸ್ಥೆಯು ಮೊದಲ ಬಾರಿ 1950ರ ಸುಮಾರಿಗೆ ಕಾನ್ಸೆಪ್ಟ್ ಕಾರುಗಳ ಪ್ರದರ್ಶನವನ್ನು ಆಯೋಜನೆ ಮಾಡಿತ್ತು. ಪ್ರದರ್ಶನಕ್ಕಿಟ್ಟ ಕಾನ್ಸೆಪ್ಟ್ ಕಾರುಗಳು ನೇರವಾಗಿ ಉತ್ಪಾದನೆಯಾಗುವುದಿಲ್ಲ. ಬದಲಾಗಿ, ಈಗಿನ ಜಾಯಮಾನಕ್ಕೆ ಹೊಂದಿಕೊಂಡಿರುವಂತೆ ಸುರಕ್ಷತೆ, ವಿನ್ಯಾಸಕ್ಕೆ ಹೊಂದಿಕೊಳ್ಳುವಂತೆ ಉತ್ಪಾದನೆಗೊಳ್ಳುತ್ತದೆ.
ಜಗತ್ತಿನಲ್ಲೇ ಅತೀ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ತನ್ನ ಯೋಜನೆಯನ್ನು ಆರಂಭಿಸುವ ವೇಳೆ ಎಸ್‌ಪಿ ಕಾನ್ಸೆಪ್ಟ್ ಕಾರುಗಳನ್ನು ಇದೇ ವರ್ಷ ಅನುಷ್ಠಾನಗೊಳಿಸಿತ್ತು. 1.6 ಲೀಟರ್ ಡಿಸೇಲ್ ಎಂಜಿನ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಉತ್ತಮ ಚಾಲನಾ ಸೌಲಭ್ಯವನ್ನು ಈ ಕಾರು ಪಡೆದುಕೊಳ್ಳಲಿದೆ. ಇದಾದಾ ಬಳಿಕ ಸೊರೆಂಟೊ, ಸ್ಟೋನಿಕ್ ಕ್ರಾಸ್ ಓವರ್ ಎಸ್‌ಯುವಿ, ನಿಯೊ ಎಲೆಕ್ಟ್ರಿಕ್ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ. ಇನ್ನು, ಹೊಸ ಕಾನ್ಸೆಪ್ಟ್ ಕಾರಿನ ಬೆಲೆಯು 11 ಲಕ್ಷ ರೂ.ನಿಂದ 14 ಲಕ್ಷ ರೂ.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
ಹೊಸ ವಿನ್ಯಾಸದ ಜನರ ತುಡಿತಕ್ಕೆ ತಕ್ಕಂತೆ ಕಾರುಗಳನ್ನು ಬಿಡುಗಡೆ ಮಾಡುವಲ್ಲಿ ಸುಜಿಕಿ ಸಂಸ್ಥೆಯು ಮುಂಚೂಣಿಯಲ್ಲಿದೆ. ಇತ್ತೀಚೆಗೆಯಷ್ಟೇ ಸುಜಿಯು ನ್ಪೋ ಕಾನ್ಸೆಪ್ಟ್ ಕಾರನ್ನು ಅನಾವರಣ ಮಾಡಿದೆ. ರೆಟ್ರೋ ಸ್ಟೆ çಲ್ ಹೊಂದಿರುವ ಈ ಕಾರು ತನ್ನ ಲುಕ್‌ನಿಂದಲೇ ಎಲ್ಲರನ್ನು ಆಕರ್ಷಿಸುತ್ತಿದೆ. ಇದು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, 1960ರಲ್ಲಿ ಸುಜುಕಿ ಫ್ರಂಟೆ ಕಾರಿಗೆ ಸ್ವಲ್ಪ ಮಾಡಿಫಿಕೇಶನ್ ಮಾಡಿ ಹೊಸ ವಿನ್ಯಾಸ ಮಾಡಲಾಗಿದೆ. ಇದು ಹೈಬ್ರಿಡ್ ಕಾರ್ ಆಗಿದ್ದು, ಸೈಡ್ ಮಿರರ್ ಬದಲು ಕ್ಯಾಮರ ಬಳಸಲಾಗಿದೆ. ಒಳಾಂಗಣ ಟಚ್ ವ್ಯವಸ್ಥೆ ಇದೆ.
ಇನ್ನು, ಮಾರುತಿ ಸುಜುಕಿ ಕಂಪೆನಿಯು ಕಳೆದ ಬಾರಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಸ್ವಿಫ್ಟ್ ಮಾದರಿಯ ಆಕರ್ಷಕ ಫ್ಯೂಚರ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು. ಸಣ್ಣ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಅದಕ್ಕೆ ಅನುಗುಣವಾಗಿ ರೆನಾಲ್ಟ್, ಕ್ವಿಡ್, ಟಾಟಾ ಟಿಯಾಗೊ ಮತ್ತು ಮಹೀಂದ್ರ ಕೆಯುವಿ 100 ಕಾರುಗಳಿಗೆ ಬೇಡಿಕೆ ಇದೆ.
ಅದೇ ರೀತಿ ಮಾರುತಿ ವಿಟಾರ ಬ್ರೆಜಾ ಕಾರಿನ ಮಾಡೆಲ್ ರೀತಿಯಲ್ಲೇ ಹೊಸ ಮಾಡೆಲ್ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ. ಕಾರಿನ ಹೊರ ಭಾಗ, ಒಳಭಾಗದಲ್ಲಿ ಹೊಸ ವಿನ್ಯಾಸ ಇರಲಿದೆ. ಇನ್ನು, ಕಾನ್ಸೆಪ್ಟ್ ಪ್ಯುಚರ್ ಎಸ್(ವೈ1ಕೆ) ಸಣ್ಣ ಗಾತ್ರದ ಎಸ್‌ಯುವಿ ಕಾರಿನತ್ತ ಚಿತ್ತ ಹರಿಸಿದೆ. ಶೀಘ್ರದಲ್ಲೇ ಈ ಕಾರು ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದು, ಜೆನ್ ಎಂದು ಹೆಸರಿಡಲು ಮಾರುತಿ ಮುಂದಾಗಿದೆ. ಇನ್ನು, ಹೋಂಡಾ ಕಾರು ಉತ್ಪಾದನಾ ಸಂಸ್ಥೆಯು ಎಲೆಕ್ಟ್ರಿಕ್ ಕಾರ್‌ನತ್ತ ಒಲವು ತೋರಿಸಿದ್ದು, ಶಾಂಫೈ ಆಟೋ ಮೋಟಾರ್ಸ್‌ನಲ್ಲಿ ಹೋಂಡಾ ಎಸ್‌ಯುವಿ ಕಾನ್ಸೆಪ್ಟ್ ಕಾರುಗಳನ್ನು ಅನಾವರಣ ಮಾಡಿದೆ. ಈ ಕಾರು ಒಂದು ಬಾರಿ ಜಾರ್ಚ್ ಮಾಡಿದರೆ 340 ಕಿ.ಮೀ. ಪ್ರಯಾಣದ ರೇಂಜ್ ನೀಡಲಿದೆ. ಎಸ್‌ಯುವಿ ಕಾರು ಇದಾಗಿದ್ದು, ಇತರೆ ಎಲೆಕ್ಟ್ರಾನಿಕ್ ಕಾರುಗಳಿಗೆ ಪೈಪೋಟೊ ನೀಡಲು ಹೋಂಡಾ ಮುಂದಾಗಿದೆ. ಈ ಕಾರನ್ನು ಚೀನಾ ಕಂಪೆನಿ ತಯಾರಿಸಿದ್ದು, ಈ ವರ್ಷಾಂತ್ಯಕ್ಕೆ ಚೀನಾದಲ್ಲಿ ಕಾರು ಬಿಡುಗಡೆಗೊಳ್ಳಲಿದೆ. ಬಳಿಕ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ.
- ನವೀನ್ ಭಟ್ ಇಳಂತಿಲ