Advertisement

ಏಕಾಗ್ರತೆ-ಸೂಕ್ಷ್ಮ ಸಂವೇದನೆ ಯಶಸ್ಸಿನ ಮೆಟ್ಟಿಲು

03:07 PM May 05, 2019 | pallavi |

ರಾಣಿಬೆನ್ನೂರ: ಮಕ್ಕಳು ತಾವು ಕೈಗೊಂಡ ಕೆಲಸದಲ್ಲಿ ಯಶಸ್ಸು ಗಳಿಸಬೇಕಾದರೆ ಏಕಾಗ್ರತೆ, ಸೂಕ್ಷ ್ಮ ಸಂವೇದನಾ ಶೀಲತೆ, ತಾಳ್ಮೆಯಂತಹ ಗುಣಗಳು ಇರಬೇಕಾಗುತ್ತದೆ ಎಂದು ಭಾರತೀಯ ಜೀವ ವಿಮಾ ನಿಗಮದ ಅಧಿಕಾರಿ ರಾಘವೇಂದ್ರಾಚಾರಿ ನವರತ್ನ ಹೇಳಿದರು.

Advertisement

ಇಲ್ಲಿನ ವಾಗೀಶ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ, ರಾಜ್ಯ ರಂಗ ಕುಸುಮ ಕಲಾಕೇಂದ್ರದ ಆಶ್ರಯದಲ್ಲಿ ನಡೆದ ರಂಗ ತರಬೇತಿ ಹಾಗೂ ರಂಗ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸದೃಢ ದೇಹ, ಸಹೃದಯತೆಯ ಗುಣಗಳನ್ನು ರಂಗಭೂಮಿ ಚಟುವಟಿಕೆಗಳು ನೀಡುತ್ತವೆ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಕಲಾವಿದರಾಗಿದ್ದು, ನಿತ್ಯ ನಿರಂತರ ಒಂದಿಲ್ಲೊಂದು ಪಾತ್ರ ನಿರ್ವಹಿಸುತ್ತಲೇ ಇರುತ್ತೇವೆ. ಅದಕ್ಕೆ ಗುರುತಿಸುವಿಕೆ ಸೂಕ್ಷ ್ಮ ಮನಸ್ಥಿತಿ ಬೇಕು. ಅಂತಹ ಮನಸ್ಥಿತಿಯನ್ನು ರಂಗ ತರಬೇತಿ ನೀಡುತ್ತದೆ. ರಂಗ ತರಬೇತಿಯಲ್ಲಿ ಕಲಿತ ವಿದ್ಯಾರಂಗದ ಕಲೆಯನ್ನು ಉಳಿಸಿಬೆಳೆಸಿಕೊಂಡು ಹೋಗಬೇಕು ಎಂದರು. ಪ್ರೊ| ಸಾಯಿಲತಾ ಮಡಿವಾಳರ ಮತ್ತು ಶಿಬಿರದ ನಿರ್ದೇಶಕ ವೆಂಕಟೇಶ ಈಡಿಗರ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷೆ ಎ.ಬಿ.ರತ್ನಮ್ಮ ಅಧ್ಯಕ್ಷತೆ ವಹಿಸಿದ್ದರು. ದೇವರಾಜ ಹುಣಸಿಕಟ್ಟಿ, ಮಂಜುನಾಥ ಕೊರವರ, ಆಂಜನೇಯ ಡಿ.ಕೆ., ಪ್ರಭಾಕರ ಶಿಗ್ಲಿ, ಸೀತಾರಾಮ ಕಣೇಕಲ್ಲ, ಚಂದ್ರಶೇಖರ ಮಡಿವಾಳರ, ಸುಮಂಗಲ, ಮೇಘನಾ ವೆಂಕಟೇಶ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next