Advertisement

ಏಕಾಗ್ರತೆ-ಬುದ್ಧಿಶಕ್ತಿ ವೃದ್ಧಿಗೆ ಕಲೆಯೇ ಸಾಧನ

12:21 PM Nov 03, 2021 | Team Udayavani |

ಬೀದರ: ಕಲೆಯಲ್ಲಿ ಅದ್ಭುತ ಶಕ್ತಿ ಅಡಗಿದ್ದು, ಮಕ್ಕಳಲ್ಲಿಏಕಾಗ್ರತೆ ಜತೆಗೆ ಬುದ್ಧಿಶಕ್ತಿ ಹೆಚ್ಚಿಸುತ್ತದೆ ಎಂದುಪ್ರೊಬೇಷನರಿ ಐಎಎಸ್‌ ಅಧಿಕಾರಿ ಕೀರ್ತನಾ ಎಚ್‌. ಎಸ್‌ ಅಭಿಪ್ರಾಯಪಟ್ಟರು.

Advertisement

ನಗರದ ರಂಗಮಂದಿರದಲ್ಲಿ ನಾಟ್ಯಶ್ರೀ ನೃತ್ಯಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಲಾ ಸಂಭ್ರಮೋತ್ಸವಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜತೆಗೆ ನೃತ್ಯ, ಸಂಗೀತದತರಬೇತಿ ಅಗತ್ಯವಿದೆ. ಭರತ ನಾಟ್ಯದ ಮೂಲಕಗಡಿ ಜಿಲ್ಲೆಯ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ಹಾಗೂಸ್ಮರಣಶಕ್ತಿ ಹೆಚ್ಚಿಸುವ ಕಾರ್ಯ ರಾಣಿ ಸತ್ಯಮೂರ್ತಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ನೃತ್ಯ ಲೋಕದ ರಾಣಿ: ಕಲಬುರಗಿ ಆಕಾಶವಾಣಿ ನಿರ್ವಹಣಾಧಿಕಾರಿ ಡಾ| ಸದಾನಂದ ಪೆರ್ಲ ಉಪನ್ಯಾಸಕರಾಗಿ ಮಾತನಾಡಿ, ಸಮಾಜ ಭಾವೈಕ್ಯತೆ, ಬಂಧುತ್ವದಿಂದ ಶಾಂತಿ-ಪ್ರೀತಿಯಿಂದ ಕಟ್ಟಲು ಸಾಧ್ಯವಿದೆ. ಕಲೆಗೆ ಯಾವ ಜಾತಿ, ಧರ್ಮದ ಭೇದ ಇರುವುದಿಲ್ಲ. ಅದನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಕಲೆ ಯಾರು ಮೆಚ್ಚುಕೊಂಡಿರುತ್ತಾರೋಅವರ ವ್ಯಕ್ತಿತ್ವಕ್ಕೆ ಕಲೆ ದೊಡ್ಡ ಆಯಾಮ ತಂದುಕೊಡುತ್ತದೆ. ಕಳೆದ 19 ವರ್ಷಗಳಿಂದ ಧರಿನಾಡಿನಲ್ಲಿಸಾಂಸ್ಕೃತಿಕ ಮನಸ್ಸು ಜೋಡಿಸಲು ಪ್ರಯತ್ನಿಸುತ್ತಿರುವರಾಣಿ ಸತ್ಯಮೂರ್ತಿ ನೃತ್ಯಲೋಕದ ರಾಣಿಯಾಗಿದ್ದಾರೆ ಎಂದು ಬಣ್ಣಿಸಿದರು.

ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಂಬಿಕೆ ಅಕ್ಕ ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಕಾಯಕ ಹಾಗೂ ದಾಸೋಹ ಕಲೆ ರೂಪವಾಗಿ ಪ್ರೋತ್ಸಾಹಿಸಿದ್ದರು. ಆದ್ದರಿಂದ ಇಂದು ಸಮಾಜದಲ್ಲಿ ಕಲೆ, ಕಾಯಕ ಹಾಗೂ ದಾಸೋಹಕ್ಕೆ ಬಹಳಷ್ಟು ಮಹತ್ವವಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ನಾಟ್ಯಶ್ರೀ ನೃತ್ಯಾಲಯದಿಂದ ಕೊಡಮಾಡುವ ನಾಟ್ಯಶ್ರೀ ಪ್ರಶಸ್ತಿಯನ್ನು ಕಲಬುರಗಿಖ್ಯಾತ ಭರತನಾಟ್ಯ ಕಲಾವಿದರಾದ ವರ್ಣ ಸಿಂಧುನೃತ್ಯಕಲಾ ಕೇಂದ್ರದ ನಿರ್ದೇಶಕ ಗುರು ಅನಂತಚಿಂಚನಸೂರ ಅವರಿಗೆ ಪ್ರದಾನ ಮಾಡಲಾಯಿತು.

ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಜೇಂದ್ರಕುಮಾರ ಗಂದಗೆ, ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ಇತರರಿದ್ದರು.

ಆಯ್ಕೆ ಸಮಿತಿ ಸದಸ್ಯ ಪ್ರೊ| ವೀರಶೆಟ್ಟಿ ಮೈಲುರಕರ್‌ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಕೆ.ಸತ್ಯಮೂರ್ತಿ ಸ್ವಾಗತಿಸಿದರು. ಬಸವರಾಜ ಮೂಲಗೆ ನಿರೂಪಿಸಿದರು.

ಮಕ್ಕಳಿಂದ ಜಾನಪದ ಸಂಭ್ರಮ :

ಜಾನಪದ ಸಂಭ್ರಮ ಜರುಗಿತು. ದೇಶ ಭಕ್ತಿಗೀತೆ, ಕೋಲಾಟ, ವಚನ ನೃತ್ಯ, ಯಕ್ಷಗಾನ ಹಾಡಿಗೆ ನೃತ್ಯ, ಕಥಕ್‌ ನೃತ್ಯ, ಜಾನಪದ ನೃತ್ಯ, ಲಂಬಾಣಿ ನೃತ್ಯ, ದೇವರ ನಾಮ ನೃತ್ಯ, ಅಘೋರಿ ನೃತ್ಯವು ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿತು.ವೈಷ್ಣವಿ ಪಾಟೀಲ, ಸ್ವಾತಿ, ರಾಜೇಶ್ವರಿ ತಂಡದಿಂದ ಪೌರಾಣಿಕ ನೃತ್ಯ ರೂಪಕಗಳು ಜರುಗಿದವು. ಶಿವಾನಿ ಶಿವದಾಸ ಸ್ವಾಮಿಯವರಿಂದ ಆಕರ್ಷಕ ಶಾಸ್ತ್ರೀಯ ಸಂಗೀತ, ಸವಿಗಾನ ಮ್ಯೂಜಿಕ್‌ ಅಕಾಡೆಮಿ ಭಾನುಪ್ರಿಯ ಅರಳಿಯವರನಿರ್ದೇಶನದಲ್ಲಿ ಸಂಗೀತ ಲಹರಿ ಕಾರ್ಯಕ್ರಮ ಜರುಗಿದವು. ಮಹೇಶಕುಮಾರ ಕುಂಬಾರ ಹಾಗೂ ಶಂಭುಲಿಂಗ ವಾಲದೊಡ್ಡಿಯವರಿಂದ ಜನಪದ ಗೀತಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next