Advertisement

ಪ್ಯಾಕ್ಸ್‌ಗಳ ಗಣಕೀಕರಣ: ಜ.1ರಿಂದ ಗ್ರಾಹಕ ಸೇವೆ

01:59 PM Nov 25, 2020 | Mithun PG |

ಕೋಲಾರ: ಪ್ರಾಥಮಿಕ ಕೃಷಿ ಸಹಕಾರ ಸಂಘ(ಪ್ಯಾಕ್ಸ್‌)ಗಳನ್ನು ಸಂಪೂರ್ಣ ಗಣಕೀಕರಣ ಜಾರಿಗೊಳಿಸುತ್ತಿರುವ ಸಹಕಾರ ಬ್ಯಾಂಕ್‌ಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ದಕ್ಷಿಣಭಾರತದಲ್ಲೇ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಜನವರಿ 1 ರಿಂದ ಗ್ರಾಹಕ ಸೇವೆಗೆ ಲೋಕಾರ್ಪಣೆಯಾಗಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

Advertisement

ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿದ ಅವರು, ದೇಶದ ಸಹಕಾರ ಬ್ಯಾಂಕ್‌ಗಳಲ್ಲಿ ಒರಿಸ್ಸಾ ರಾಜ್ಯ ಹೊರತು ಪಡಿಸಿದರೆ ಇಡೀ ದೇಶದಲ್ಲೇ ಪತ್ತಿನ ಸಹಕಾರ ಸಂಘಗಳ ಗಣಕೀಕರಣದ ಸಾಹಸಕ್ಕೆ ಕೈ ಹಾಕಿರುವ ಮೊದಲ ಬ್ಯಾಂಕ್‌ ನಮ್ಮ ಡಿಸಿಸಿ ಬ್ಯಾಂಕ್‌ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಕ್ರೋ ಎಟಿಎಂ ಸೇವೆಯೂ ಲಭ್ಯ: ಕಡತಗಳಿಂದ ಕಂಪ್ಯೂಟರೀಕರಣದ ಕಾಪಿರೈಟ್‌ಮಾಡುವ ಮುನ್ನ ಸಮರ್ಪಕವಾಗಿ ಪರಿಶೀಲಿಸಿ ದಾಖಲು ಮಾಡಲು ಹೆಚ್ಚುವರಿ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ಗಣಕೀಕರಣ ಪೂರ್ಣಗೊಳಿಸಬೇಕೆಂದು ಸೂಚಿಸಿದ ಅವರು, ಜನವರಿಯಲ್ಲಿ ಪರಿಪೂರ್ಣ ಆನ್‌ಲೈನ್‌ ಬ್ಯಾಂಕಿಂಗ್‌ ವ್ಯವಸ್ಥೆಯೊಂದಿಗೆ ಮೈಕ್ರೋ ಎಟಿಎಂ ಸೇವೆಯೂ ಲಭ್ಯವಾಗಲಿದೆ. ಎನ್‌ಪಿಎ ಕಡಿಮೆ ಮಾಡುವುದು ಠೇವಣೆ ಹೆಚ್ಚಳ ಮಾಡುವುದು ನಮ್ಮ ಗುರಿಯಾಗಿದೆ ಎಂದರು.

ಇದನ್ನೂ ಓದಿ:ವಾತ್ಸಲ್ಯ ಸಹಾಯಹಸ್ತ ವಿತರಣಾ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಕೆ.ದಯಾನಂದ್‌, ನಾಗೀರೆಡ್ಡಿ, ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಎಂ.ರವಿ. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪನಿಬಂಧಕರಾದ ಜಿ.ಬಿ. ಶಾಂತ ಕುಮಾರಿ, ಗಣಕೀಕರಣ ಕಾರ್ಯದ ಉಸ್ತುವಾರಿ ವಹಿಸಿರುವ ಸಿಬ್ಬಂದಿಗಳಾದ ವಾಸುದೇವ್‌, ನಾಗೇಶ್‌, ವಿಶ್ವಪ್ರಸಾದ್‌, ಫರ್ನಾಂಡೀಸ್‌ ಇದ್ದರು

Advertisement

179 ಪ್ಯಾಕ್ಸ್‌ಗಳ ಗಣಕೀಕರಣ ಪೂರ್ಣ

ಬ್ಯಾಂಕ್‌ ಎಜಿಎಂ ಶಿವಕುಮಾರ್‌ ಮಾತನಾಡಿ,ಕೋಲಾರ ಜಿಲ್ಲೆಯ86, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ105 ಪ್ಯಾಕ್ಸ್‌ ‌ ಗಳು ಸೇರಿದಂತೆ ಒಟ್ಟು ಎರಡು ಜಿಲ್ಲೆಯಲ್ಲಿ 191 ಮೈಗ್ರೇಷ್‌ನ್‌ ಹೊಂದಿದೆ. ಕೋಲಾರ ಜಿಲ್ಲೆಯಲ್ಲಿ82 ಮತ್ತು ಚಿಕ್ಕಬಳ್ಳಾಪುರದಲ್ಲಿ97 ಪ್ಯಾಕ್ಸ್‌ ಗಳು ಸೇರಿದಂತೆ ಒಟ್ಟು179 ಗಣಕೀರಣ ಮುಗಿದಿದೆ.ಕೋಲಾರದಲ್ಲಿ4 ಮತ್ತು ಚಿಕ್ಕಬಳ್ಳಾಪುರದಲ್ಲಿ8 ಪ್ಯಾಕ್ಸ್‌ಗಳ ಗಣಕೀಕರಣ ಅಂತಿಮ ಹಂತದಲ್ಲಿದೆ ಎಂದರು.

ಐತಿಹಾಸಿಕ ಕ್ಷಣಕ್ಕೆ ಸಹಕಾರ ಸಚಿವರು

ಸಂಪೂರ್ಣ ಪ್ಯಾಕ್ಸ್‌ ಗಣಕೀಕರಣ ವ್ಯವಸ್ಥೆಯ ಲೋಕಾರ್ಪಣೆಗೆ ರಾಜ್ಯದ ಸಹಕಾರ ಸಚಿವರು, ಸಹಕಾರಿ ದಿಗ್ಗಜರು, ಸಹಕಾರಿಗಳು ಪಾಲ್ಗೊಳ್ಳ ಲಿದ್ದು, ಸಹಕಾರಿ ರಂಗದಲ್ಲಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳ 191 ಪ್ಯಾಕ್ಸ್‌ ಗಳ ಸಂಪೂರ್ಣ ಮಾಹಿತಿ ಗಣಕೀಕರಣ ಗೊಂಡು ಪಾರದರ್ಶಕ ಆಡಳಿತಕ್ಕೆ ಡಿಸಿಸಿ ಬ್ಯಾಂಕ್‌ ದೇಶದಲ್ಲೇ ಮಾದರಿಯಾಗಲಿದೆ ಎಂದರು.

ಬಾಕಿ ಇರುವ ಎಲ್ಲಾ ಪ್ಯಾಕ್ಸ್‌ಗಳ ಗಣಕೀಕರಣವನ್ನು ಡಿಸೆಂಬರ್‌ 15 ರೊಳಗೆ ಮುಗಿಸಲು ಗಡುವು ನೀಡಲಾಗುತ್ತಿದೆ. ಅದರೊಳಗೆ ಈ ಕಾರ್ಯ ಮುಗಿಸಿ, ಜನವರಿ 1ಕ್ಕೆ ಲೋಕಾರ್ಪಣೆ ಮಾಡಲು ಸಿದ್ಧಗೊಂಡಿರಬೇಕು.

-ಸಿದ್ದನಗೌಡ ನೀಲಪ್ಪನವರ್‌, ಸಹಕಾರ ಸಂಘಗಳ ಉಪನಿಬಂಧಕ

 

Advertisement

Udayavani is now on Telegram. Click here to join our channel and stay updated with the latest news.

Next