Advertisement

ಕಂಪ್ಯೂಟರ್‌ ಆಪರೇಟರ್‌ ವಜಾಕ್ಕೆ ಆಗ್ರಹಿಸಿ ಮನವಿ

03:43 PM May 01, 2022 | Team Udayavani |

ಗುರುಮಠಕಲ್‌: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ಆಪರೇಟರ್‌ನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ತಾಲೂಕು ಗೊಲ್ಲ ಸಮಾಜದ ವತಿಯಿಂದ ಆಗ್ರಹಿಸಲಾಯಿತು.

Advertisement

ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷ ಯಲ್ಲಪ್ಪ ಯಾದವ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೀಭಾಯಿ ಅವರಿಗೆ ಮನವಿ ನೀಡಿ ಮಾತನಾಡಿ, ಕಂಪ್ಯೂಟರ್‌ ಅಪರೇಟರ್‌ ಶ್ರೀನಿವಾಸ್‌ ಅವರು ಲಂಚ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದರು.

ಪಟ್ಟಣದ ಪುರಸಭೆ ವಾರ್ಡ್‌ ಸಂಖ್ಯೆ 8ರಲ್ಲಿ ಅಲೆಮಾರಿ, ಅರೇ ಅಲೇಮಾರಿ ಜನಾಂಗದ ಸುಮಾರು 100-150 ಮನೆಗಳಿದ್ದು, ರಾಜ್ಯ ಸರಕಾರದಿಂದ 2017-18ನೇ ಸಾಲಿನಲ್ಲಿ 45 ಮನೆಗಳು ಮಂಜೂರು ಆಗಿವೆ. ಪುರಸಭೆ ಕಾರ್ಯಾಲಯದ ಶ್ರೀನಿವಾಸ ಎಂಬುವವರು ಜಿಪಿಎಸ್‌ ಮಾಡುವುದಕ್ಕಾಗಿ ಒಬ್ಬೊಬ್ಬರಿಂದ 2000 ದಿಂದ 5000 ರೂ. ವರೆಗೆ ಹಣ ಪಡೆದಿದ್ದು, ಇದುವರೆಗೆ ಕೇವಲ ನಾಲ್ಕು ಮನೆಗಳಿಗೆ ಮಾತ್ರ ಜಿಪಿಎಸ್‌ ಮಾಡಿದ್ದಾರೆ. ಉಳಿದ ಮನೆಗಳಿಗೆ ಮಾಡಿಲ್ಲ. ಈ ಬಗ್ಗೆ ವಿಚಾರಿಸಿದಾಗ ಫಲಾನುಭವಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ ದರ್ಪ ತೋರಿಸುತ್ತಿದ್ದಾನೆ. ಇಂತಹ ಲಂಚಗೊಳಿತನ ಪೌರ ಕಾರ್ಮಿಕನಿಂದ ಪುರಸಭೆಗೆ ಕೆಟ್ಟ ಹೆಸರು ಬರುತ್ತಿದೆ. ತಕ್ಷಣ ಅವರನ್ನು ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಸಂಘದ ಪದಾಧಿಕಾರಿಗಳಾದ ಆಶಮ್ಮ ಗೊಲ್ಲ, ಚನ್ನಮ್ಮ, ಸಾವಿತ್ರಮ್ಮ, ನಾರಾಯಣಮ್ಮ, ಬಸಮ್ಮ, ಮಾನ್ಯಮ್ಮ, ಕಿಷ್ಟಮ್ಮ, ಲಕ್ಷ್ಮಮ್ಮ, ಚಂದ್ರಮ್ಮ, ರಾಜಮ್ಮ, ನಾಗಮ್ಮ, ಸರೋಜಮ್ಮ, ಶಿವಮ್ಮ, ಆನಂತಮ್ಮ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next