Advertisement

ಉದ್ಯೋಗ ಪಡೆಯಲು ಕಂಪ್ಯೂಟರ್‌ ಜ್ಞಾನ ಅಗತ್ಯ

10:28 PM Nov 03, 2019 | Lakshmi GovindaRaju |

ದೇವನಹಳ್ಳಿ: ವಿಧ್ಯಾರ್ಥಿಗಳು ಪಾಠದ ಜೊತೆಗೆ ಕಂಪ್ಯೂಟರ್‌ ಜ್ಞಾನ ಹೊಂದಿದ್ದರೆ ಸುಲಭವಾಗಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗವಕಾಶವನ್ನು ಪಡೆಯುವುದರ ಜೊತೆಗೆ ಹೆಚ್ಚಿನ ಜ್ಞಾನಾರ್ಜನೆಯನ್ನು ಹೊಂದಬಹುದು ಎಂದು ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ತಿಳಿಸಿದರು.

Advertisement

ನಗರದ ವಿಜಯಪುರ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಯೂಟರ್‌ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಇಂಟರ್‌ ನೆಟ್‌ ಸೌಲಭ್ಯಗಳನ್ನು ಒದಗಿಸಿ ವಿಧ್ಯಾರ್ಥಿಗಳಿಗೆ ಕಷ್ಟ ಕರವಾದ ವಿಷಯಗಳನ್ನು ಅಂರ್ತಜಾಲದ ಮೂಲಕ ಸುಲಭವಾಗಿ ಪಡೆಯಬಹುದು.

ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕಂಪ್ಯೂಟರ್‌ ಜ್ಞಾನವನ್ನು ತಿಳಿದರೆ ಮಾತ್ರ ಸುಲಭವಾಗಿ ಉದ್ಯೋಗಾವಕಾಶ ದೊರೆಯಲಿದೆ. ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕಂಪ್ಯೂಟರ್‌ ಗಳನ್ನು ಅಳವಡಿಸಲಾಗುತ್ತಿದ್ದು ಇದರ ಸದುಪಯೋಗವನ್ನು ವಿಧ್ಯಾರ್ಥಿಗಳು ಪಡೆಯಬೇಕು ಎಂದರು.

ಕೇಂದ್ರ ಸರ್ಕಾರದ ರೂಸಾ ಅನುದಾನದಲ್ಲಿ 51 ಕಂಪ್ಯೂಟರ್‌ ಗಳು ಪೂರೈಕೆ ಆಗಿದ್ದು ಪ್ರಸ್ತುತ 20 ಕಂಪ್ಯೂಟರ್‌ ಗಳನ್ನು ಅಳವಡಿಸಿ ವಿಧ್ಯಾರ್ಥಿಗಳ ಕಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ವಿಧ್ಯಾರ್ಥಿಗಳು ಕಷ್ಟ ಪಟ್ಟು ಓದಿದರೆ ಮುಂದಿನ ಜೀವನ ಸುಖಮಯವಾಗಿರುವುದು.

ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ವಿಧ್ಯಾರ್ಥಿಗಳು ಹೆಚ್ಚಿನ ಆಧ್ಯತೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಮಟ್ಟಕ್ಕೆ ಹೋಗಬೇಕು. ಉಳಿಕೆ ಕಂಪ್ಯೂಟರ್‌ ಗಳನ್ನು ಅಳವಡಿಸಲು ಕೊಠಡಿಯ ಸಮಸ್ಯೆ ಇದ್ದು ಶೀಘ್ರದಲ್ಲಿಯೇ ಹೊಸ ಕೊಠಡಿಯ ನಿರ್ಮಾಣಕ್ಕೆ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.

Advertisement

ಕಾಲೇಜು ಪ್ರಾಂಶುಪಾಲ ಶಿವಶಂಕರಪ್ಪ ಮಾತನಾಡಿ, ಕಾಲೇಜಿನ ವಿವಿಧ ಅಭಿವೃದ್ಧಿಗೆ ಎರಡು ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಕಾಲೇಜಿನ ಸರ್ವತೋಮುಕ ಅಭಿವೃದ್ಧಿ ಪಡಿಸಲಾಗುತ್ತಿದೆ. ವಿಶೇಷವಾಗಿ ಮಕ್ಕಳು ಆಸಕ್ತಿಯಿಂದ ಕಂಪ್ಯೂಟರ್‌ ಕಲಿಯಲು ಅದಕ್ಕೆ ಬೇರೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾತನಾಡಿರುವುದಕ್ಕೆ ಮುಂದಿನ ವರ್ಷ ನೀಡುವುದಾಗಿ ಬರವಸೆ ನೀಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಸಕರ ಸಮ್ಮೂಖದಲ್ಲಿ ಎನ್‌.ಸಿ.ಸಿ. ವಿದ್ಯಾರ್ಥಿಗಳಿಗೆ ಟ್ರಾಕ್‌ಶ್ಯೂಟ್‌ ನೀಡಲಾಯಿತು. ಉತ್ತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ವಾಲಿಬಾಲ್‌ ವಿಜೇತರಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ವೇಳೆ ಹಳೇ ವಿದ್ಯಾರ್ಥಿ ಸಂಘದ ಸದಸ್ಯರುಗಳಾದ ನಾಗೇಶ್‌ ಬಾಬು, ವಿಜಯ್‌ಕುಮಾರ್‌, ಗೋಪಾಲ್‌, ಮುತ್ತು, ವಕೀಲ ಸುನೀಲ್‌, ದೆ„ಹಿಕ ಶಿಕ್ಷಣ ಶಿಕ್ಷಕ ರವಿಚಂದ್ರ, ಪ್ರಾಧ್ಯಪಕರಾದ ಕೆಂಪೇಗೌಡ, ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next