Advertisement

ಆನ್ ಲೈನ್ ಕ್ಲಾಸ್ ಗೂ ಹಾಜರಾತಿ ಕಡ್ಡಾಯ ಮಾಡುವ ಕುರಿತು ನಿರ್ಧಾರ: ಅಶ್ವಥ್ ನಾರಾಯಣ್

03:55 PM Jan 25, 2021 | Team Udayavani |

ಮೈಸೂರು: ಮುಂದಿನ ದಿನಗಳಲ್ಲಿ ಆನ್ ಲೈನ್ ಕ್ಲಾಸ್ ಗೂ ಹಾಜರಾತಿ ಕಡ್ಡಾಯ ಮಾಡುತ್ತೇವೆ. ಮುಂದೆ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಪಾಠ ಮಾಡುವ ಅವಕಾಶ ನೀಡಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಹೇಳಿದರು.

Advertisement

ಮೈಸೂರಿನಲ್ಲಿ ಮಾತನಾಡಿದ ಅವರು, ಸದ್ಯ 50% ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದ್ದೇವೆ. ಮುಂದೆ ರಾಜ್ಯದಲ್ಲಿರುವ ಎಲ್ಲಾ ಉಪನ್ಯಾಸಕರಿಗೂ ಅವಕಾಶ ಕಲ್ಪಿಸುತ್ತೇವೆ ಎಂದರು.

ಸಚಿವ ಸಂಪುಟ ವಿಸ್ತರಣೆಯಲ್ಲಿ ಖಾತೆ ವಿಚಾರದ ಗೊಂದಲದ ಬಗ್ಗೆ ಕೇಳಲಾದ ಪ್ರಶ್ನೆಗೆ, ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದರು.

ಇದನ್ನೂ ಓದಿ:ಮೆಡಿಕಲ್‌ ಸೀಟು ಕೊಡಿಸುವ ಆಮಿಷ: ವಿದ್ಯಾರ್ಥಿಗಳ ಪೋಷಕರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ

ಸಚಿವ ಸಂಪುಟಕ್ಕೆ ತಗೆದುಕೊಳ್ಳುವುದು, ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಅವರಿಗೆ ಪರಮಾಧಿಕಾರವಿದೆ. ಸಿಎಂ ಯಡಿಯೂರಪ್ಪನವರು ಏನು ನಿರ್ಧಾರ ತಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದರು.

Advertisement

ರಾಜಕೀಯದಲ್ಲಿ ಸವಾಲು ಸಮಸ್ಯೆ ಇದ್ದೇ ಇರುತ್ತದೆ. ಎಲ್ಲವನ್ನೂ ಸದ್ಯದಲ್ಲೇ ಬಗೆಹರಿಸಿಕೊಂಡು ಮುಂದೆ ಹೋಗುತ್ತೇವೆ. ಅಸಮಾಧಾನಿತ ಸಚಿವರೂ ನಮ್ಮ‌ ಸ್ನೇಹಿತರೇ. ಅವರ ಜೊತೆ ಪರಸ್ಪರ ಕುಳಿತು ಮಾತನಾಡುತ್ತೇವೆ. ಒಂದು ಪಕ್ಷದಲ್ಲಿ ಎಲ್ಲರೂ ಅಣ್ಣ ತಮ್ಮಂದಿರ ರೀತಿ‌ ಒಗ್ಗಟಿನಿಂದ ಕೆಲಸ ನಿರ್ವಹಿಸುತ್ತೇವೆ ಎಂದರು.

ಇದನ್ನೂ ಓದಿ: ಬಜೆಟ್ ನಲ್ಲಿ ಮೈಸೂರು ಅಭಿವೃದ್ಧಿಗೆ ಒತ್ತು ಕೊಡಲು ಸಿಎಂ ಗಮನಕ್ಕೆ ತರುವೆ: ಸೋಮಶೇಖರ್

ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, ನಾಳೆ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಲಿ. ಕೃಷಿ ಕಾಯಿದೆಗಳು ರೈತರ ಪರವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲವೂ ರೈತರಿಗೆ ಗೊತ್ತಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next