Advertisement

ಅಧಿಕಾರ ಹಿಡಿಯಲು ರಾಜಿ ಅನಿವಾರ್ಯ: ಮಾಧುಸ್ವಾಮಿ

08:26 PM Nov 13, 2019 | Team Udayavani |

ಬೆಳಗಾವಿ: ರಾಜ್ಯದಲ್ಲಿ ಅಧಿಕಾರ ಹಿಡಿಯಲು ಮತ್ತು ಪಕ್ಷ ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕಾಗುತ್ತದೆ. ಇದಕ್ಕಾಗಿ ರಾಜಿ ಅನಿವಾರ್ಯ. ಅದನ್ನು ಅಸಮಾಧಾನಗೊಂಡವರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಭಾವನೆ ನನ್ನದು ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದರಿಂದಾಗಿ ನಮ್ಮ ಪಕ್ಷಕ್ಕೆ ತೊಂದರೆ ಆಗುವುದಿಲ್ಲ. ಈ ಸರಕಾರ ಮುಂದುವರಿಯಬೇಕು ಮತ್ತು ಉಳಿಸಬೇಕು ಎನ್ನುವುದು ಮತದಾರರ ಅಭಿಮತ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ನಮ್ಮವರನ್ನು ಗೆಲ್ಲಿಸುತ್ತಾರೆ. ಸ್ಪೀಕರ್‌ ಹುದ್ದೆಯ ಗೌರವವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತ ಮಾಡಲೇಬೇಕಾಗುತ್ತದೆ. ತೀರ್ಪು ವಿಳಂಬ ಆಗಿದ್ದರಿಂದ ಅನರ್ಹ ಶಾಸಕರಿಗೆ 2-3 ತಿಂಗಳು ಆತಂಕ ಆಗಿತ್ತು. ಆಗಲೇ ತೀರ್ಪು ಬಂದಿದ್ದರೆ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಬಿಜೆಪಿಯಿಂದ ಬಿ ಫಾರಂ ಕೊಟ್ಟ ಕೂಡಲೇ ಅನರ್ಹ ಶಾಸಕರೆಲ್ಲರೂ ಪಕ್ಷ ಸೇರುತ್ತಾರೆ. ಅದನ್ನು ಕೊಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಬೇರೆಯವರಿಗೆ ಟಿಕೆಟ್‌ ಕೊಟ್ಟರೆ, ನಮ್ಮ ಪಕ್ಷ ಬೆಳೆಸಿದವರಿಗೆ ಅಸಮಾಧಾನ ಇರುವುದು ಸಹಜ. ಪಕ್ಷದ ಟಿಕೆಟ್‌ ಸಿಗದವರಿಗೆ ಬೇರೆ ಸ್ಥಾನಮಾನ ಕೊಟ್ಟು ಸಮಾಧಾನ ಮಾಡಲು ಪ್ರಯತ್ನಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next