Advertisement
ಸಂಸತ್ ಸದಸ್ಯರ ಹಾಗೂ ರಾಜ್ಯ ಸರಕಾರದ ಅನುದಾನದಲ್ಲಿ ಈ ಕೆರೆಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. ಕೆರೆ ಹೂಳು ತೆಗಯುವುದು, ದಂಡೆ ನಿರ್ಮಾಣ, ಕೊಳಚೆ ನೀರು ತಿರುವುಗಾಲುವೆ ಸೇರಿದಂತೆ ಮತ್ತಿತರರ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತಂತೆ ಸ್ಥಳದಲ್ಲಿದ್ದ ಪಾಲಿಕೆಯ ಹಿರಿಯ ಅಧಿಕಾರಿಗಳಿಂದ ನಿರ್ಮಲಾ ಸೀತಾರಾಮನ್ ಅವರು ಮಾಹಿತಿ ಪಡೆದರು. ಕೆರೆಗಳ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಚಿವೆ ಹೇಳಿದರು.
ಕಾಳೇನ ಅಗ್ರಹಾರ ಕೆರೆಯನ್ನು ಸಂಸತ್ ಸದಸ್ಯರ ಯೋಜನೆಯಡಿ 75 ಲಕ್ಷ ರೂ. ರಾಜ್ಯ ಸರ್ಕಾರದ 2017-18ನೇ ಸಾಲಿನ ಅನುದಾನ 75 ಲಕ್ಷ ರೂ., ರಾಜ್ಯ ಸರ್ಕಾರದ 2018-19ನೇ ಸಾಲಿನ ಅನುದಾನ 1.5 ಕೋಟಿ ರೂ. ಸೇರಿ 3 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಬೇಗೂರು ವಾರ್ಡ್-192 ವ್ಯಾಪ್ತಿಯ ಸರ್ವೇ ಸಂಖ್ಯೆ 43ರಲ್ಲಿ 7 ಎಕರೆ 30 ಗುಂಟೆ ಪ್ರದೇಶದವನ್ನು ಕಾಳೇನ ಅಗ್ರಹಾರ ಕೆರೆೆ ವ್ಯಾಪಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೃಷ್ಣಪ್ಪ, ವಲಯ ಮುಖ್ಯ ಇಂಜಿನಿಯರ್ ಶಶಿಕುಮಾರ್, ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Related Articles
ಸಂಸದರ ಮತ್ತು ರಾಜ್ಯ ಸರಕಾರದ ಅನುದಾನದಲ್ಲಿ ಕಾಳೇನ ಅಗ್ರಹಾರ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕೆರೆ ಹೂಳು ತೆಗಯುವುದು, ದಂಡೆ ನಿರ್ಮಾಣ, ಕೊಳಚೆ ನೀರು ತಿರುವುಗಾಲುವೆ ನಿರ್ಮಾಣ ಕಾರ್ಯ ಕೂಡ ನಡೆದಿದೆ. ಜತೆಗೆ ಕೆರೆಯ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಲಾಗಿದ್ದು ವಾಯು ವಿಹಾರಿಗಳಿಗಾಗಿಯೇ 15 ಆಸಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಶೌಚಾಲಯ ವ್ಯವಸ್ಥೆಯನ್ನು ಅಳವಡಿ ಮಾಡಲಾಗಿದೆ.
Advertisement