Advertisement

ಮೀನುಗಾರಿಕೆ ಸಮಗ್ರ ಅಭಿವೃದ್ಧಿ: ಕೋಟ

08:35 AM Jun 02, 2020 | mahesh |

ಮಂಗಳೂರು: ಕೇಂದ್ರ ಸರಕಾರದ ಪ್ಯಾಕೇಜ್‌ನಲ್ಲಿ ಸುಮಾರು 20,000 ಕೋ. ರೂ. ಮೀನುಗಾರಿಕೆಗೆ ಮೀಸಲಾಗಿದೆ. ಇದರಲ್ಲಿ 3,000 ಕೋಟಿ ರೂ. ರಾಜ್ಯಕ್ಕೆ ಬರುವ ನಿರೀಕ್ಷೆಯಿದ್ದು, ಯೋಜನೆಗಳನ್ನು ರೂಪಿಸಲಾ ಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಪ್ರಧಾನಿಯಾಗಿ ಒಂದು ವರ್ಷ ತುಂಬಿದ್ದು, ಈ ಅವಧಿಯಲ್ಲಿ ತ್ರಿವಳಿ ತಲಾಖ್‌, ಸಂವಿಧಾನದ 370ನೇ ವಿಧಿ ರದ್ದು, ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ಮಹತ್ವದ ನಿರ್ಧಾರಗಳ ಮೂಲಕ ಜನಬೆಂಬಲ ಗಳಿಸಿದ್ದಾರೆ. ಕೊರೊನಾ ನಿಯಂತ್ರಣದಲ್ಲಿ ಜಗತ್ತಿಗೆ ಮಾದರಿಯಾಗುವ ಕ್ರಮಗಳನ್ನು ಪರಿಚಯಿಸಲಾಗಿದೆ ಎಂದರು.

ಆಟೋ ಚಾಲಕರಿಗೆ ಸೇವಾಸಿಂಧುವಿನಲ್ಲಿ ನೋಂದಣಿ ಸಾಧ್ಯವಾಗುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆಟೋ ಚಾಲಕನಾಗಿದ್ದಲ್ಲಿ ಬ್ಯಾಜ್‌ ಇಲ್ಲದೆಯೂ ರಿಕ್ಷಾ ಕೆಸಿ ನಂಬರ್‌ ಹಾಗೂ ವಾಹನ ನಂಬರ್‌ ಮೂಲಕ ನೋಂದಣಿ ಮಾಡಿಕೊಂಡು ನೆರವು ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಲಾಕ್‌ಡೌನ್‌ನಿಂದಾಗಿ ಧಾರ್ಮಿಕ ದತ್ತಿ ಇಲಾಖೆಗೊಳ ಪಡುವ ದೇವಸ್ಥಾನಗಳ ಎರಡು ತಿಂಗಳ ಆರ್ಥಿಕ ಸಂಗ್ರಹದಲ್ಲಿ ಶೇ. 35ರಷ್ಟು ಇಳಿಕೆಯಾಗಿದೆ ಎಂದರು.

ಶಾಸಕರಾದ ಸಂಜೀವ ಮಠಂದೂರು, ರಾಜೇಶ್‌ ನಾಯ್ಕ, ಉಮಾನಾಥ ಕೋಟ್ಯಾನ್‌, ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ, ಪ್ರಮುಖರಾದ ಸುಧೀರ್‌ ಶೆಟ್ಟಿ ಕಣ್ಣೂರು ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

ಮಹಾರಾಷ್ಟ್ರ; ಕೊಂಚ ದಿನ ನಿರ್ಬಂಧ
ಮಹಾರಾಷ್ಟ್ರ ಹಾಗೂ ಗುಜರಾತ್‌ಗಳಲ್ಲಿ ಕೊರೊನಾ ಬಾಧೆ ಅಧಿಕವಿರುವುದರಿಂದ ಸ್ವಲ್ಪ ದಿನಗಳ ಕಾಲ ನಿರ್ಬಂಧಿಸಲಾಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಂದಲೂ ಜಿಲ್ಲೆಗೆ ವಿಮಾನ ಯಾನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು.

“ಸಪ್ತಪದಿ’ಗೆ ಶೀಘ್ರ ಮುಹೂರ್ತ
ಇಲಾಖೆ ನಡೆಸಲುದ್ದೇಶಿಸಿದ್ದ “ಸಪ್ತಪದಿ’ ಸಾಮೂಹಿಕ ವಿವಾಹ ಯೋಜನೆಗೆ ಜೂ. 15ರೊಳಗೆ ಮರು ದಿನಾಂಕ ಪ್ರಕಟಿಸಲಾಗುವುದು. 4,000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು 50 ಜನರಿಗೆ ಸೀಮಿತವಾಗಿರಿಸಿ ವಿವಾಹ ನಡೆಸುವ ಕುರಿತು ನಿರ್ಧರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next