Advertisement

ವಿಜ್ಞಾನ, ತಂತ್ರಜ್ಞಾನದಿಂದ ಸಮಗ್ರ ಅಭಿವೃದ್ಧಿ

12:43 PM Oct 15, 2018 | Team Udayavani |

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಿಂದ ಆಹಾರ ಉತ್ಪಾದನೆ, ವಿದೇಶಿ ರಫ್ತು ಹಾಗೂ ಬಾಹ್ಯಾಕಾಶ ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಐಎಸ್‌ಸಿಎ ಅಧ್ಯಕ್ಷ ಡಾ. ಮನೋಜ್‌ ಕುಮಾರ್‌ ಹೇಳಿದರು. ಆಕ್ಸ್‌ಫ‌ರ್ಡ್‌ ವಿಜ್ಞಾನ ಕಾಲೇಜು ಮತ್ತು ಇಂಡಿಯನ್‌ ಸೈನ್ಸ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ “ಭವಿಷ್ಯದ ಭಾರತ: ವಿಜ್ಞಾನ ತಂತ್ರಜ್ಞಾನದ ಸುಸ್ಥಿರ ಅಭಿವೃದ್ಧಿ’ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Advertisement

ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಿಂದ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಗರಿಷ್ಠ ಮಟ್ಟದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಸೂಪರ್‌ ಕಂಪ್ಯೂಟರ್‌ಗಳ ಬಳಕೆ ಮತ್ತು ತಯಾರಿಕೆ, ವೈದ್ಯಕೀಯ ಹಾಗೂ ಕೈಗಾರಿಕಾ ಕ್ಷೇತ್ರದಲ್ಲೂ ಬೆಳವಣಿಗೆ ಸಾಧಿಸಿದೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಈಗ ಸಾಗುತ್ತಿರುವ ವೇಗವನ್ನೇ ಕಾಯ್ದುಕೊಳ್ಳಬೇಕು. ಸ್ಪರ್ಧಾತ್ಮಕತೆಗೆ ತಕ್ಕಂತೆ ಪರಿವರ್ತನಾಶೀಲರಾಗಬೇಕು. ವಿಜ್ಞಾನದ ಆವಿಷ್ಕಾರಗಳಿಗೆ ಸಂಪನ್ಮೂಲದ ಸದ್ಬಳಕೆಯೂ ಆಗಬೇಕು ಎಂದು ಹೇಳಿದರು. ಐಎಸ್‌ಸಿಎನ ಪ್ರೊ.ಅಶೋಕ್‌ ಕುಮಾರ್‌, ಡಾ.ವಿಜಯಲಕ್ಷ್ಮೀ, ಆಕ್ಸಪರ್ಡ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್‌.ಎನ್‌.ವಿ.ಎಲ್‌. ನರಸಿಂಹರಾಜು ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next