Advertisement

ರಾಜಕೀಯ ದ್ವೇಷ : ಚರಂಡಿ ಕಾಮಗಾರಿ ಮಾಡುವ ನೆಪದಲ್ಲಿ ಕಾಂಪೌಂಡ್‌ ಧ್ವಂಸ

03:59 PM Jan 07, 2021 | Team Udayavani |

ಆನೇಕಲ್‌: ಚರಂಡಿ ಕಾಮಗಾರಿ ಮಾಡುವ ನೆಪದಲ್ಲಿ ರಾಜಕೀಯ ದ್ವೇಷಕ್ಕಾಗಿ ಮನೆ ಕಾಂಪೌಂಡ್‌ ಹಾಗೂ ಮನೆ ಎದುರು ಹಾಕಿದ ಸಿಮೆಂಟ್‌ ರಸ್ತೆಯನ್ನು ಜೆಸಿಬಿ ಮೂಲಕ ಕಿತ್ತು ಹಾಕಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಆನೇಕಲ್‌ ಪುರಸಭಾ ವ್ಯಾಪ್ತಿಯ ವಾರ್ಡ್‌ ನಂಬರ್‌ 25 ಸೌಭಾಗ್ಯ ಕಲ್ಯಾಣ ಮಂಟಪದ ರಸ್ತೆಯಲ್ಲಿ ಪುರಸಭೆಯಿಂದ ಚರಂಡಿಯ ಸ್ವತ್ಛತೆ ಮಾಡುವ ಕಾಮಗಾರಿ ನಡೆಯುತ್ತಿತ್ತು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯ ಬಳಿ ಹಾಕಿದ್ದ ಹಾಸುಗಲ್ಲುಗಳನ್ನು ಕಿತ್ತು ಹಾಕುವ ನೆಪದಲ್ಲಿ ಮನೆಯ ಕಾಂಪೌಂಡ್‌ಗೆ ಹಾಗೂ ಪೈಪ್‌ಲೈನ್‌ಗಳನ್ನು ಜೆಸಿಬಿ ಮೂಲಕ
ಧ್ವಂಸ ಮಾಡಲಾಗಿದೆ.

ಬೆಳಗ್ಗೆ ಮನೆಯಲ್ಲಿ ಮಹಿಳೆಯೊಬ್ಬರೇ ಇದ್ದಾಗ ಪುರಸಭಾ ಸದಸ್ಯ ಕಾಮಗಾರಿಯನ್ನು ಪ್ರಾರಂಭಿಸಿದ್ದು ಇದೇ ಸಂದರ್ಭದಲ್ಲಿ ಕೇಳಲು ಹೋದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಹಿಳೆ ದೂರಿದ್ದಾರೆ.

ಇದನ್ನೂ ಓದಿ:ಹಕಿಜ್ವರ ಭೀತಿ: ಪಕ್ಷಿಧಾಮಗಳಲ್ಲಿ ಪರಿಶೀಲನೆ : ಹಕ್ಕಿ ತ್ಯಾಜ್ಯ ಸಂಗ್ರಹಿಸಿ ಪರೀಕ್ಷೆಗೆ ರವಾನೆ

ಕಾಮಗಾರಿ ಪ್ರಾರಂಭಿಸಲು ನಮ್ಮ ಸಹಕಾರವೂ ಇತ್ತು, ಒಂದು ಮಾತು ಹೇಳಿದರೆ ನಾವು ಎಲ್ಲಾರೀತಿಯಲ್ಲಿಯೂ ಕೆಲಸ ಮಾಡಲು ಸಹಾಯ ಮಾಡುತ್ತಿದ್ದೆವು, ಆದರೆ ಏಕಾಏಕಿ ಜೆಸಿಬಿ ತಂದು ಮನೆ ಎದುರು ಹಾಕಿದ್ದ ಸಿಮೆಂಟ್‌ ರಸ್ತೆ ಹಾಗೂ
ಕಾಂಪೌಂಡಿಗೆ ಹಾನಿ ಮಾಡುವುದು ಎಷ್ಟು ಸರಿ ಈ ರೀತಿಯ ರಾಜಕೀಯ ದ್ವೇಷವನ್ನು ಯಾರು ಕೂಡ ಮಾಡಬಾರದು ಎಂದು ಪುರಸಭಾ ಮಾಜಿ ಉಪಾಧ್ಯಕ್ಷ ರಾಮಕೃಷ್ಣ ಹೇಳಿದ್ದಾರೆ.

Advertisement

ಹಿಂದೆ ಪುರಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದೆ, ಇದನ್ನೇ ದ್ವೇಷವಾಗಿಟ್ಟು ಕೊಂಡು ಪುರಸಭಾ ಸದಸ್ಯ
ಕೃಷ್ಣ ಕಾಮಗಾರಿ ನೆಪದಲ್ಲಿ ಮನೆಗೆ ಹಾನಿ ಮಾಡಿದ್ದಾರೆ ಎಂದು ಮನೆಯ ಮಾಲಿಕ ಪ್ರಕಾಶ್‌ರೆಡ್ಡಿ ದೂರಿದ್ದಾರೆ.

ಈ ಬಗ್ಗೆ ಉದಯವಾಣಿ ಜತೆ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ನಿಸಾರ್‌ಅಹಮದ್‌, ಚರಂಡಿ ಸ್ವತ್ಛ ಮಾಡಲಾಗುತ್ತಿತ್ತು. ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದಾರೆ, ಪುರಸಭಾ ಸದಸ್ಯರು ಏನು ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next