Advertisement
ಸುಮಾರು 10 ವರ್ಷಗಳ ಹಿಂದೆ ರಸ್ತೆಗೆ ಡಾಮರು ಹಾಕಲಾಗಿದ್ದು ಇದೀಗ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಆವೃತವಾಗಿ ಜಲ್ಲಿಕಲ್ಲುಗಳ ರಾಶಿ ಬಿದ್ದಿವೆ. ಪಡಿಬೆಟ್ಟುವಿನಿಂದ ಸುಮಾರು 1 ಕಿ.ಮೀ. ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದರೆ ಅನಂತರದ 1.5 ಕಿ.ಮೀ ರಸ್ತೆ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ.
ರಸ್ತೆಯ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ವಾಹನ ಸಂಚಾರರಿಗೆ ಇದು ಅಪಾಯ ಕಾರಿಯಾಗಿ ಪರಿಣಮಿಸಿದೆ. ರಸ್ತೆಯಲ್ಲಿರುವ ಬೃಹತ್ ಹೊಂಡಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ನಿರಂತರ ವಾಗಿ ಅಪಘಾತಗಳು ನಡೆಯುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆ ಗಿಡಗಂಟಿಗಳಿಂದ ಆವೃತವಾಗಿದ್ದು ಸಂಚಾರ ಕಷ್ಟಸಾಧ್ಯವಾಗಿದೆ. ಮಳೆಗಾಲಕ್ಕೂ ಮುನ್ನ ರಸ್ತೆಯ ಇಕ್ಕೆಲಗಳನ್ನು ಸ್ವತ್ಛ ಮಾಡದೇ ಇರುವುದರಿಂದ ಮಳೆಗಾಲದಲ್ಲಿ ಸಮಸ್ಯೆ ಉಲ½ಣಿಸಿದೆ. ಸೂಕ್ತ ನಿರ್ವಹಣೆ ಇಲ್ಲದೇ ಇರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕಳೆದ 5 ವರ್ಷಗಳಿಂದ ತೇಪೆ ಕಾರ್ಯವೂ ನಡೆದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಸುತ್ತು ಬಳಸಿ ತೆರಳಬೇಕು
ಪಡಿಬೆಟ್ಟು-ಮುಂಡ್ಲಿ ಸಂಪರ್ಕ ರಸ್ತೆಯು ಕಾರ್ಕಳ ತಾಲೂಕು ಕೇಂದ್ರ ಸಂಪರ್ಕಿಸಲು ಅತೀ ಹತ್ತಿರದ ರಸ್ತೆ. ಇದೀಗ ರಸ್ತೆ ತೀವ್ರ ಹದಗೆಟ್ಟಿರುವುದರಿಂದ ಸುತ್ತುಬಳಸಿ ಅಜೆಕಾರು ಮಾರ್ಗವಾಗಿ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.
-ಭೋಜ ಪೂಜಾರಿ,ಸ್ಥಳೀಯರು
Related Articles
ಅಭಿವೃದ್ಧಿ ಕಾಮಗಾರಿ
ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ರಸ್ತೆ ವಿಷಯವನ್ನು ಸೇರಿಸಲಾಗುವುದು.ಜಿ.ಪಂ.ಅನುದಾನದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುತ್ತೇವೆ.
-ಉದಯ್ ಕೋಟ್ಯಾನ್,
ಜಿ.ಪಂ. ಸದಸ್ಯರು
Advertisement