Advertisement
70 ಮನೆಗಳಿದ್ದು 400 ಮಂದಿ ವಾಸ್ತವ್ಯಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾಕರು ವಾಸವಾಗಿರುವ ಈ ಭಾಗದಲ್ಲಿ 70 ಮನೆಗಳಿದ್ದು, ಸುಮಾರು 400 ಮಂದಿ ವಾಸ್ತವ್ಯ ವಿದ್ದಾರೆ. ಇಷ್ಟೆಲ್ಲ ಮಂದಿ ಇದ್ದರೂ ಕೂಡ ಇಲ್ಲಿನ ಮುಖ್ಯ ರಸ್ತೆಗೆ ಈ ವರೆಗೆ ಡಾಮರು ಕಾಣುವ ಭಾಗ್ಯ ಲಭಿಸಿಲ್ಲ. ನೌಕರರು, ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ವಾಸವಾಗಿರುವ ಇಲ್ಲಿ ಅಭಯಾರಣ್ಯದ ಕಾನೂನು ಮೂಲ ಸೌಕರ್ಯಗಳಿಗೆ ತೊಡಕಾಗಿದೆ.
ಲಕ್ಷಾಂತರ ರೂ. ವೆಚ್ಚದ ಡಾಮರು ಕಾಮಗಾರಿಗೆ ಕೊಲ್ಲೂರು ಗ್ರಾ.ಪಂ.ನಲ್ಲಿ ಆರ್ಥಿಕ ವ್ಯವಸ್ಥೆಯ ಕೊರತೆ ಇದೆ. ಹಾಗಾಗಿ ಬೇಸಗೆಯಲ್ಲಿ ಕೇವಲ ಮಣ್ಣು ತುಂಬಿ ಹೊಂಡ ಮುಚ್ಚುವ ಕಾರ್ಯಕ್ಕೆ ಸೀಮಿತವಾಗಿರುವ ಗ್ರಾ.ಪಂ.ಗೆ ಕೈಚೆಲ್ಲಿ ಕುಳಿತು ಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ. ರಿವಿಟ್‌ಮೆಂಟ್ ಇಲ್ಲದ ಸೇತುವೆ
ಸುಮಾರು 4 ವರ್ಷಗಳ ಹಿಂದೆ ಮಾವಿನಕಾರು- ಕಂಬಳಗದ್ದೆ ಎಸ್.ಟಿ. ಕಾಲನಿಗೆ ಹೋಗುವ ಮಾರ್ಗವಾಗಿ ಗಾಡಿಜೆಡ್ಡು ಎಂಬಲ್ಲಿನ ಬಾವಡಿ ಹೊಳೆಗೆ 65 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿತ್ತು ಆದರೆ ಎರಡೂ ಬದಿಗಳ ಸಂಪರ್ಕ ರಸ್ತೆಗೆ ರಿವಿಟ್ ಮೆಂಟ್ ಕಾಮಗಾರಿ ಇನ್ನೂ° ಪೂರ್ಣಗೊಳ್ಳದಿರುವುದು ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ.
Related Articles
ದುಃಸ್ಥಿತಿಯಲ್ಲಿರುವ ರಸ್ತೆಯಿಂದಾಗಿ ಪ್ರಯಾಣ ದುಸ್ತರವಾಗಿದೆ. ಕುಂದಾಪುರ, ಕೊಲ್ಲೂರು ಮುಂತಾದೆಡೆ ಕಾರ್ಯನಿಮಿತ್ತ ತೆರಳಿ ರಾತ್ರಿ ವೇಳೆ ಹಿಂದಿರುಗುವವರಿಗೆ ಈ ಮಾರ್ಗವು ಪ್ರಯಾಸದ ಪ್ರಯಾಣದ ದಾರಿ ಆಗಿದೆ. ಇದಕ್ಕೊಂದು ಪರಿಹಾರ ಒದಗಿಸುವಲ್ಲಿ ಜನಪ್ರತಿನಿ ಧಿಗಳು ಕ್ರಮ ಕೈಗೊಳ್ಳಬೇಕು.
-ಜಯಪ್ರಕಾಶ ಶೆಟ್ಟಿ, ಗ್ರಾಮಸ್ಥರು
Advertisement
ಸರಕಾರದ ನೆರವು ಅಗತ್ಯಮಾವಿನಕಾರು-ಬಾವಡಿ ರಸ್ತೆ ಡಾಮರು ಕಾಮಗಾರಿಗೆ ಸರಕಾರ ಕೈಜೋಡಿಸಿದಲ್ಲಿ ಆ ಭಾಗದ ನಿವಾಸಿಗಳ ಬಹುಕಾಲದ ಬೇಡಿಕೆ ಈಡೇರಿಸಬಹುದು. ಪಂ.ನಲ್ಲಿ ಅಷ್ಟೊಂದು ಮೊತ್ತ ವಿನಿಯೋಗಿಸುವುದು ಕಷ್ಟ ಸಾಧ್ಯ.
-ಎಸ್. ಕುಮಾರ್, ಅಧ್ಯಕ್ಷರು ಗ್ರಾ.ಪಂ. ಕೊಲ್ಲೂರು. ಡಾ| ಸುಧಾಕರ ನಂಬಿಯಾರ್