Advertisement
ದೊಂಡೇರಂಗಡಿ ಪೇಟೆಯಿಂದ – ಮೂಡ ಬೆಟ್ಟುವರೆಗೆ ದಶಕಗಳ ಹಿಂದೆ ಡಾಮಾರು ಹಾಕಲಾಗಿದ್ದು ಅನಂತರ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಸಂಕಷ್ಟಪಡುವಂತಾಗಿದೆ.
Related Articles
Advertisement
ಪ್ರಮುಖ ರಸ್ತೆ
ಈ ರಸ್ತೆ ಮೂಡಬೆಟ್ಟು, ಹಾಲಕ್ಕಿ, ಶೀರೂರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು ಪ್ರತೀನಿತ್ಯ ಕುಕ್ಕುಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಜೆ ಸರಕಾರಿ ಪ್ರೌಢ ಶಾಲೆ, ಮೂಡಬೆಟ್ಟು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಕ್ಕುಜೆ ಸ.ಪ.ಪೂ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ಕಾಲ್ನಡಿಗೆಯಲ್ಲಿ ತೆರಳುವುದೂ ಕಷ್ಟಸಾಧ್ಯವಾಗಿದೆ.
ಹಲವು ವರ್ಷಗಳಿಂದ ರಸ್ತೆ ದುರಸ್ತಿಪಡಿಸುವಂತೆ ಇಲಾಖಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ರಸ್ತೆ ಅಭಿವೃದ್ಧಿಗೊಳ್ಳದೆ ಪ್ರತೀ ವರ್ಷ ಮಳೆಗಾಲದಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆಯಲ್ಲೇ ಹರಿಯುವ ನೀರು
ಮಳೆ ನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿ ತೋಡು ಇಲ್ಲದೆ ಇರುವುದರಿಂದ ರಸ್ತೆಯಲ್ಲಿಯೇ ನೀರು ಹರಿಯುತ್ತಿದ್ದು ರಸ್ತೆಯಲ್ಲಿ ಇನ್ನಷ್ಟು ಹೊಂಡಗುಂಡಿಗಳು ನಿರ್ಮಾಣಗೊಂಡು ಅಪಘಾತ ಉಂಟಾಗುತ್ತಿದೆ.
ಕೂಡಲೇ ರಸ್ತೆ ದುರಸ್ತಿ
ಈ ರಸ್ತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಶಾಸಕ ಸುನಿಲ್ ಕುಮಾರ್‌ರವರು ಕಳೆದ ವರ್ಷ 2 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ರಾಜ್ಯ ಸರಕಾರ ಟೆಂಡರ್ ಪ್ರಕ್ರಿಯೆ ನಡೆಸದ ಕಾರಣ ರಸ್ತೆ ಅಭಿವೃದ್ಧಿಗೊಂಡಿಲ್ಲ. ಇದೀಗ ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2.6 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕೂಡಲೇ ರಸ್ತೆ ದುರಸ್ತಿಪಡಿಸಲಾಗುವುದು. -ಜ್ಯೋತಿಹರೀಶ್, ಜಿ.ಪಂ. ಸದಸ್ಯರು