Advertisement
ತೃತೀಯ ಭಾಷೆಯಾದ ಹಿಂದಿ, ಕನ್ನಡ, ಸಂಸ್ಕೃತ, ತುಳು, ಕೊಂಕಣಿ, ಉರ್ದು ಪರೀಕ್ಷೆ ಗುರುವಾರ ನಡೆಯಿತು. ಕರಾವಳಿ ಜಿಲ್ಲೆಗಳಲ್ಲಿ ಯಾವುದೇ ದಿನವೂ ಪರೀಕ್ಷೆ ವೇಳೆ ಅಕ್ರಮಗಳು ನಡೆಯದಿಲ್ಲ. ಎಲ್ಲ ಕಡೆಗಳಲ್ಲಿ ಸುಸೂತ್ರವಾಗಿ ನಡೆದಿದ್ದು, ಪರೀಕ್ಷಾ ಪಾವಿತ್ರÂಕ್ಕೆ ಸಾಕ್ಷಿಯಾಯಿತು.
ಪರೀಕ್ಷಾ ಕೇಂದ್ರಗಳಿಂದ ಗುರುವಾರ ಹೊರಬರುತ್ತಿದ್ದ ವಿದ್ಯಾರ್ಥಿ – ವಿದ್ಯಾರ್ಥಿನಿಯರಲ್ಲಿ ಕೊನೆಯ ಪರೀಕ್ಷೆ ಮುಗಿದ ಖುಷಿ ಕಾಣುತ್ತಿತ್ತು. ಕೆಲವರಲ್ಲಿ ಪರೀಕ್ಷೆ ಮುಗಿಯುವುದರೊಂದಿಗೆ ತಮ್ಮ ಪ್ರೌಢಶಾಲಾ ವಿದ್ಯಾರ್ಥಿ ಜೀವನವು ಕೊನೆಗೊಂಡ ಬೇಸರದ ಛಾಯೆಯಿತ್ತು.
Related Articles
ಮಂಗಳೂರು/ ಉಡುಪಿ: ಎಸೆಸೆಲ್ಸಿಗೆ ಗುರುವಾರ ತೃತೀಯ ಭಾಷಾ ಪರೀಕ್ಷೆ ನಡೆದಿದ್ದು, ಒಟ್ಟು 627 ಮಂದಿ ಗೈರು ಹಾಜರಾಗಿದ್ದಾರೆ.
Advertisement
ದಕ್ಷಿಣ ಕನ್ನಡದಲ್ಲಿ ಒಟ್ಟು ನೋಂದಣಿ ಮಾಡಿಕೊಂಡ 28,990 ಮಂದಿ ವಿದ್ಯಾರ್ಥಿಗಳ ಪೈಕಿ 28,545 ಮಂದಿ ಪರೀಕ್ಷೆ ಬರೆದಿದ್ದಾರೆ. 445 ಮಂದಿ ಗೈರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 13,314 ಮಂದಿ ಪರೀಕ್ಷೆ ಬರೆದಿದ್ದಾರೆ. 13,486 ಮಂದಿ ನೊಂದಾಯಿಸಿದ್ದು, ಇದರಲ್ಲಿ 172 ಮಂದಿ ಗೈರು ಹಾಜರಾಗಿದ್ದಾರೆ.