Advertisement

2025ರ ವೇಳೆಗೆ ಸಂಪೂರ್ಣ ಕ್ಷಯರೋಗ ಮುಕ್ತಿ

09:52 PM Apr 16, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯನ್ನು 2025 ಒಳಗೆ ಸಂಪೂರ್ಣ ಕ್ಷಯ ಮುಕ್ತ ಜಿಲ್ಲೆಯಾಗಿ ಮಾಡುವ ಗುರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದ್ದು, ಈಗಾಗಲೇ ಮೊದಲ ಹಂತದಲ್ಲಿ ಪ್ರತಿ ತಾಲೂಕಿನಲ್ಲಿ ಒಂದೊಂದು ಗ್ರಾಮವನ್ನು ಕ್ಷಯ ರೋಗ ಮುಕ್ತ ಗ್ರಾಮಗಳಾಗಿ ಗುರುತಿಸಿ ಘೋಷಿಸಲಾಗುತ್ತಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು ತಿಳಿಸಿದರು.

Advertisement

ಜಿಲ್ಲೆಯ ಕೈವಾರ ಹೋಬಳಿಯ, ಸಂತೇಕಲ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ, ಕದಿರಾಪುರ ಗ್ರಾಮದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕ್ಷಯ ಮುಕ್ತ ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕಿತ್ಸೆ: ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 2008 ರಿಂದ 2018 ರ ಅಂತ್ಯದವರೆಗೆ ಒಟ್ಟು 17,203 ಕ್ಷಯ ರೋಗಿಗಳನ್ನು ಇದುವರೆಗೂ ಪತ್ತೆ ಹಚ್ಚಲಾಗಿದೆ. ಅವರಲ್ಲಿ 13,120 ರೋಗಿಗಳು ಡಾಟ್ಸ್‌ ಚಿಕಿತ್ಸೆ ಪಡೆದು ಕ್ಷಯ ರೋಗದಿಂದ ಗುಣಮುಖರಾಗಿದ್ದು, ಆ ಪೈಕಿ 1,018 ಮಂದಿ ರೋಗಿಗಳು ಚಿಕಿತ್ಸೆ ಫ‌ಲಿಸದೇ ನಿಧರಾಗಿದ್ದಾರೆ.

ಇನ್ನೂ 1,113 ರೋಗಿಗಳು ಕ್ಷಯ ರೋಗ ಚಿಕಿತ್ಸೆಯನ್ನು ನಿರಾಕರಿಸಿದ್ದು, ಉಳಿದ 423 ರೋಗಿಗಳಿಗೆ ಚಿಕಿತ್ಸೆ ವಿಫ‌ಲವಾಗಿದೆ. 2018 ರಲ್ಲಿ ಒಟ್ಟು 1,669 ರೋಗಿಗಳನ್ನು ಪತ್ತೆ ಹಚ್ಚಿದ್ದು, ಆ ಪೈಕಿ 1016 ಗುಣಮುಖವಾಗಿದೆ. 91 ರೋಗಿಗಳು ಮರಣಹೊಂದಿದ್ದು ಉಳಿದ 519 ರೋಗಿಗಳು ಹಾಲಿ ಚಿಕಿತ್ಸೆಯ ಪಡೆಯುತ್ತಿದ್ದಾರೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ಎಸ್‌. ರಾಮಚಂದ್ರ ರೆಡ್ಡಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಶೃತಿ ಮತ್ತು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ಎಲ್ಲಾ ಆರೋಗ್ಯ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟಿಬಿ ಮುಕ್ತ ಗ್ರಾಮವನ್ನಾಗಿ ಘೋಷಿಸಿದರು.

Advertisement

ಪ್ರತಿಜ್ಞಾ ವಿಧಿ ಸ್ಪೀಕಾರ: ಕ್ಷಯ ರೋಗ ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಅಂಗನವಾಡಿ ಹಾಗು ಆಶಾ ಕಾರ್ಯಕರ್ತರು ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸ್ಪಂದಿಸಿ ಕೆಲಸ ಮಾಡುತ್ತೇವೆ. ಕ್ಷಯ ರೋಗಿಗಳನ್ನು ಗುಣಮುಖರಾಗುವಂತೆ ನೋಡಿಕೊಳ್ಳುತ್ತೇವೆಂಬ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಪ್ರತಿಜ್ಞಾ ವಿಧಿ ಸ್ಪೀಕರಿಸಲಾಯಿತು.

ಜಿಲ್ಲಾಸ್ಪತ್ರೆಯಲ್ಲಿ ಟಿಬಿ ಪರೀಕ್ಷೆಗೆ ಸಿಬಿನಾಟ್‌: 2018 ಜನವರಿಯಿಂದ ಈಚೆಗೆ ದೃಡಪಡುವ ಎಲ್ಲಾ ಕ್ಷಯರೋಗಿಗಳಿಗೆ ದಿನನಿತ್ಯ ಮಾತ್ರೆಗಳನ್ನು ನುಂಗಿಸುವ ಹೊಸ ವಿಧಾನ ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ. ಏಪ್ರಿಲ್‌-2018 ರಿಂದ ದೃಡಪಡುವ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ., ಗಳನ್ನು ರೋಗಿಯ ಉಳಿತಾಯ ಖಾತೆಗೆ ಇಲಾಖೆ ವತಿಯಿಂದ ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ.

ಕ್ಷಯ ದೃಡಪಟ್ಟ ರೋಗಿಗಳಿಗೆ 6 ತಿಂಗಳು, 9 ತಿಂಗಳು ಮತ್ತು 12 ತಿಂಗಳು ಚಿಕಿತ್ಸೆಯನ್ನು ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಶಂಕಿತ ಕ್ಷಯ ರೋಗಿಗಳು ಕಫ‌ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿನ ಸಿಬಿನಾಟ್‌ ಪ್ರಯೋಗಾಲಯಕ್ಕೆ ನೇರವಾಗಿ ಬಂದು ಪರೀಕ್ಷಿಸಿಕೊಂಡು ಕೇವಲ 2 ಗಂಟೆಯಲ್ಲಿ ಫ‌ಲಿತಾಂಶವನ್ನು ಪಡೆಯಬಹುದಾಗಿದೆ ಎಂದು ಡಾ.ಯಲ್ಲಾ ರಮೇಶ್‌ ಬಾಬು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next