Advertisement
ಗುರುವಾರ, ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇನು ಕೈಯಿಂದ ದುಡ್ಡು ಹಾಕುವುದಿಲ್ಲ. ಸರ್ಕಾರ ಅನುದಾನ ಕೊಡುತ್ತದೆ. ನೀವು ಕೆಲಸ ಮಾಡಿ, ಏನಾದರೂ ಸಮಸ್ಯೆ ಎದುರಾದರೆ ನನಗೆ ತಿಳಿಸಿ. ಮಂತ್ರಿಗಳಿಗೆ ಹೇಳಿ ಮಂಜೂರು ಮಾಡಿಸಿ ಕೊಡುತ್ತೇನೆ. ಒಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ತ್ವರಿತವಾಗಿ ಕಾಮಗಾರಿ ಮುಗಿಯಬೇಕು ಎಂದರು. ಷಟ್ಪಥ ಹೆದ್ದಾರಿ ಕಾಮಗಾರಿ ವೇಳೆ ಹಳ್ಳಿಗಳ ಬಳಿ ಸಾರ್ವಜನಿಕರು ಕೆಲಸಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಕಾಮಗಾರಿ ವೇಗವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಿಂದ ಕಾಮಗಾರಿ ಚುರುಕಾಗಿ ನಡೆಯುತ್ತಿಲ್ಲ ಎಂದ ಪ್ರಾಧಿಕಾರದ ಅಧಿಕಾರಿಗಳು ಸಂಸದ ಗಮನಕ್ಕೆ ತಂದರು.
Related Articles
Advertisement
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನೀರು ಹರಿದುಹೋಗಲು ಪೈಪ್‌ಗ್ಳನ್ನು ಹಾಕಿದ್ದಾರೆ. ಅದರ ಬದಲಾಗಿ ಕಲ್ವರ್ಟ್ ನಿರ್ಮಿಸಿದರೆ ಮಾತ್ರ ರಾಚಪ್ಪನ ಬೀಳು ಬಡಾವಣೆಯ ನಾಗರಿಕರ ಸಮಸ್ಯೆ ಪರಿಹಾರ ಆಗುತ್ತದೆ ಎಂದು ನಗರಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ತಿಳಿಸಿದರು. ಪ್ರಾಧಿಕಾರದವರು ಕಲ್ವರ್ಟ್ ನಿರ್ಮಾಣ ಮಾಡಿಕೊಡಬೇಕು ಎಂದು ಸಿದ್ದೇಶ್ವರ್ ಸೂಚನೆಗೆ ಅಧಿಕಾರಿಗಳು ಸಮ್ಮತಿಸಿದರು. ಶಾಮನೂರು, ಬನಶಂಕರಿ ಬಡಾವಣೆ ಮತ್ತು ಹಳೇಬಾತಿ ಬಳಿ ಭೂ-ಸ್ವಾಧೀನದ ಸಮಸ್ಯೆ ಇದೆ.
ಅನುದಾನ ಇದೆ. ವಿಶೇಷ ಭೂ-ಸ್ವಾಧೀನಾ ಧಿಕಾರಿಗಳು ನೋಟಿಫಿಕೇಷನ್ ಹೊರಡಿಸಿದರೆ ಕಾರ್ಯ ಸುಗುಮವಾಗುತ್ತದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.
ವಿಶೇಷ ಭೂಸ್ವಾಧೀನಾಧಿ ಕಾರಿಗಳನ್ನು ಸ್ಥಳಕ್ಕೆ ಕರೆಯಿಸಿದ ಸಂಸದರು, ಇನ್ನೆರಡು ದಿನಗಳ ಒಳಗೆ ಭೂ-ಸ್ವಾ ಧೀನಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಅಧಿಕಾರಿಗಳ ಕಾರಣದಿಂದ ಸರ್ಕಾರಗಳಿಗೆ ಕೆಟ್ಟ ಹೆಸರು ಬರುತ್ತದೆ. ಯಾವುದೇ ರಣಕ್ಕೂ ಸಬೂಬು ಹೇಳಬೇಡಿ, ತ್ವರಿತವಾಗಿ ಕೆಲಸ ಆಗಬೇಕು ಎಂದು ತಾಕೀತು ಮಾಡಿದರು. ಚಿತ್ರದುರ್ಗದಿಂದ ದಾವಣಗೆರೆಯ ಹದಡಿ ಸೇತುವೆಯವರೆಗೆ ಪಿಎನ್‌ಸಿ ಕಂಪನಿಯವರಿಗೆ ಗುತ್ತಿಗೆ ನೀಡಲಾಗಿದೆ. ಹುಣಸೆಕಟ್ಟೆ, ಹಾಲುವರ್ತಿ, ಮಲ್ಲಶೆಟ್ಟಿಹಳ್ಳಿ, ಎಚ್. ಕಲ್ಪನಹಳ್ಳಿ, ಆನಗೋಡು ಬಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇತುವೆ ಕಾಮಗಾರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಸಿದ್ದೇಶ್ವರ್ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀನಿವಾಸ್ ನಾಯ್ಡು, ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ಅಧಿಕಾರಿಗಳಾದ ಅಣಜಿ ನಾಗರಾಜ್, ಮಂಜುನಾಥ್. ವಿಶೇಷ ಭೂ-ಸ್ವಾ ಧೀನಾಧಿಕಾರಿ ಬಾಲಕೃಷ್ಣ ಇತರ ಅಧಿಕಾರಿಗಳು ಇದ್ದರು.