Advertisement

ಬಾಕಿ ಅರ್ಜಿ 2 ತಿಂಗಳೊಳಗೆ ಪೂರ್ಣಗೊಳಿಸಿ

04:18 PM Aug 19, 2021 | Team Udayavani |

ಕೋಲಾರ: ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ವಿವಿಧ ಹಂತಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು 2 ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ ರಾಜ್‌ ಸಿಂಗ್‌ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭೂಮಿ ತಂತ್ರಾಂಶದಲ್ಲಿ ವಿವಿಧ ಅಧಿಕಾರಿಗಳ ಬಳಿಬಾಕಿಇರುವ ಪ್ರಕರಣ,ಕಾವೇರಿ ತಂತ್ರಾಂಶದಲ್ಲಿ ತಹಶೀಲ್ದಾರ್‌ ಹಂತದಲ್ಲಿ ಬಾಕಿ ಇರುವ ಪ್ರಕರಣ ಪರಿಶೀಲನೆ ನಡೆಸಿ ಬಂಗಾರಪೇಟೆ ತಾಲೂಕಿನಲ್ಲಿ 80 ಪ್ರಕರಣ ಬಾಕಿ ಇದ್ದು, ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಅರೆ ನ್ಯಾಯಿಕ ಪ್ರಕರಣಗಳಲ್ಲಿ ಮೊದಲು 2 ವರ್ಷದಿಂದ 5 ವರ್ಷಗಳೊಳಗೆ ಬಾಕಿ ಇರುವ ಪ್ರಕರಣ ತೆಗೆದುಕೊಂಡು 2 ತಿಂಗಳೊಳಗೆ ಇತ್ಯರ್ಥ
ಪಡೆಸುವಂತೆ ತಹಶೀಲ್ದಾರ್‌ಗಳಿಗೆ ಸೂಚಿಸಿದರು. ಪಹಣಿ ಕಾಲಂ 3 ಮತ್ತು 9ಕ್ಕೆ ವ್ಯತ್ಯಾಸವಿರುವ ಪ್ರಕರಣಗಳ ತಿದ್ದುಪಡಿ, ಭೂ ಮಂಜೂರಾತಿ
ನಮೂನೆ, 53ರ ಪ್ರಕರಣಗಳ ವಿಲೇವಾರಿ, 94 ಸಿ, 94 ಸಿಸಿ ಹಾಗೂ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ತಿಂಗಳಿಗೆ 23 ಸರ್ವೆ ಪ್ರಕರಣ ಇತ್ಯರ್ಥಪಡಿಸಿ:
ಸರ್ವೆ ಇಲಾಖೆ ಆಯುಕ್ತರಾದ ಮನಿಷ್‌ ಮುದ್ಗಿಲ್‌ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಸಾರ್ವಜನಿಕರು ಸರ್ವೆ ಮಾಡಲು ಅರ್ಜಿ ಸಲ್ಲಿಸಿದ್ದು,
ಹೆಚ್ಚಿನ ಪ್ರಕರಣಗಳು ತಹಶೀಲ್ದಾರ್‌ ಹಂತದಲ್ಲಿ ಬಾಕಿ ಉಳಿದಿವೆ. ಕಾರಣ 3-9 ಮಿಸ್‌ ಮ್ಯಾಚ್‌, ಆರ್‌ಟಿಸಿ ಮಿಸ್‌ ಮ್ಯಾಚ್‌ ಮುಂತಾದ ಕಾರಣಗಳಿಂದ ಬಾಕಿ ಇದ್ದು, ಟಾರ್ಗೆಟ್‌ ತೆಗೆದುಕೊಂಡು ತಹಶೀಲ್ದಾರರು ಪ್ರತಿ ವಾರ ಇತ್ಯರ್ಥ ಪಡಿಸಬೇಕು. ಪ್ರತಿ ಸರ್ವೆಯರ್‌ಗಳು ತಿಂಗಳಿಗೆ ಕನಿಷ್ಠ 23 ಸರ್ವೆ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಸೂಚಿಸಿದರು.

Advertisement

ವಾರದಲ್ಲಿ ದಿನಾಂಕ ನಿಗದಿಪಡಿಸಿ: ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಮಾತನಾಡಿ, ಗ್ರಾಮವಾರು ಪಿ.ನಂಬರ್‌ ಪಟ್ಟಿ ಮಾಡಿ ಬಾಕಿ ಪಿ ನಂಬರ್‌
ಇತ್ಯರ್ಥ ಪಡಿಸಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು. 2 ವರ್ಷಗಳಿಗಿಂತ ಹೆಚ್ಚು ಅವಧಿಯಿಂದಬಾಕಿ ಇರುವ ಅರೆ ನ್ಯಾಯಿಕ ಪ್ರಕರಣಗಳನ್ನು
ವಾರದಲ್ಲಿ ದಿನಾಂಕಗಳನ್ನು ನಿಗದಿಪಡಿಸಿ ಇತ್ಯರ್ಥಪಡಿಸಿ. ಅರೆ ನ್ಯಾಯಿಕ ಪ್ರಕರಣಗಳೆಲ್ಲಾ ರಿಜಿಸ್ಟರ್‌ ಡ್ಯಾಕುಮೆಂಟ್‌ ಮೇಲೆ ಇದ್ದು, ತಾಲೂಕುವಾರು ಅದಾಲತ್‌ ನಡೆಸಿ ಇತ್ಯರ್ಥಪಡಿಸುವಂತೆ ತಹ ಶೀಲ್ದಾರ್‌ಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಇಸಾವುದ್ದೀನ್‌ ಜೆ.ಗದ್ಯಾಳ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ಉಪವಿ
ಭಾಗಾಧಿಕಾರಿ ಆನಂದ್‌ ಪ್ರಕಾಶ್‌ ಮೀನಾ, ಯೋಜನಾ ನಿರ್ದೇಶಕ ಸೋಮಶೇಖರ್‌, ತಹಶೀಲ್ದಾ ರರು,ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಹೈವೆಕಾರಿಡಾರ್‌ಯೋಜನೆಗೆ ಭೂಮಿ ಪಡೆದುಕೊಳ್ಳಲು ಇರುವ ತೊಡಕುಗಳನ್ನುಕಾನೂನು ರೀತಿ ಶೀಘ್ರ
ಪರಿಹರಿಸಿಕೊಳ್ಳಿ. ರೈತರಿಗೆ ಮನವರಿಕೆ ಮಾಡಿ ಮಾಲ್ಕಿಂಗ್‌ ಮತ್ತು ಲ್ಯಾಂಡ್‌ ಪಡೆಯುವುದನ್ನು ಸೆ.30 ರೊಳಗೆ ಪೂರ್ಣಗೊಳಿಸಿ.
– ನವೀನ್‌ ರಾಜ್‌ ಸಿಂಗ್‌, ಬೆಂಗಳೂರು
ವಿಭಾಗದ ಪ್ರಾದೇಶಿಕ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next