ಬೆಂಗಳೂರು: ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಬೆಳೆ ಸಮೀಕ್ಷೆಯನ್ನು ಸಕಾಲದಲ್ಲಿ ಪ್ರಾರಂಭಿಸಿ ಪೂರ್ಣಗೊಳಿಸಲು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.
ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ಮುಂಗಾರು ಹಂಗಾಮಿನ 2ನೇ ದಿನದ ಕಾರ್ಯಗಾರ ಸಭೆಯಲ್ಲಿ ಬೆಳೆ ಸಮೀಕ್ಷೆಯನ್ನು 30 ದಿನಗಳಲ್ಲಿ ಹಾಗೂ ಮೇಲ್ವಿಚಾರಣೆಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಯಿತು. ಜತೆಗೆ ಸಮೀಕ್ಷೆಗೆ ಸಂಬಂಧಿಸಿದ ಆಕ್ಷೇಪಣೆಗಳಿಗೆ ದಿನಾಂಕದಿನಾಂಕವನ್ನು ನಿಗದಿ ಪಡಿಸಲು ಹಾಗೂ ಮುಕ್ತಯಗೊಳಿಸಲು ನಿರ್ಧರಿಸಲಾಯಿತು.
ಬೆಳೆ ಸಮೀಕ್ಷೆಯ ನಿಖರವಾದ ಮಾಹಿತಿಯನ್ನು ಸಕಾಲದಲ್ಲಿ ಭೂಮಿ ಕೋಶಕ್ಕೆ ಒದಗಿಸಿದಲ್ಲಿ ಪಹಣಿಗಳಲ್ಲಿ ಬೆಳೆಯ ವಿವರಗಳನ್ನು ಕಾಲೋಚಿತಗೊಳಿಸುವ ಮತ್ತು ಪಹಣಿಗಳಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮುಗಳ ಜತೆಗೆ ಪೂರ್ವ ಮುಂಗಾರಿನ ಬೆಳೆಗಳ ವಿವರಗಳನ್ನು ಸಹ ನಮೂದಿಸಲು ಅವಕಾಶ ಕಲ್ಪಿಸಿಕೊಡುವ ಹಾಗೂ ಬೆಳೆ ಸಮೀಕ್ಷೆಯನ್ನು ಉತ್ತಮ ಪಡಿಸಲು ಹಿಸ್ಸಾವಾರು ಡಿಜಿಟಲೀಕರಣ ಮಾಡುವುದು ಸೇರಿದಂತೆ ಇತರೆ ವಿಷಯಗಳ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಕಾರ್ಯದರ್ಶಿ ಶಿವಯೋಗಿ ಕಳಸದ, ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಪೊನ್ನುರಾಜು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಪರಪ್ಪಸ್ವಾಮಿ, ಭೂಮಿ ಉಸ್ತುವಾರಿ ಕೋಶದ ವಿಶೇಷ ಅಧಿಕಾರಿ ನವೀನ್ ಕುಮಾರ್, ಕೃಷಿ ನಿರ್ದೇಶಕ ನಂದಿನಿಕುಮಾರಿ.ಸಿ.ಎನ್., ಕೃಷಿ ಇಲಾಖೆಯ ಆಯುಕ್ತಬ್ರಿಜೇಶ್ ಕುಮಾರ್‌ದೀಕ್ಷಿತ ಉಪಸ್ಥಿತರಿದ್ದರು.
.