Advertisement

ಸೇತುವೆಯ ಕಾಮಗಾರಿ ಶೀಘ್ರದಲ್ಲಿ ಪೂರ್ಣಗೊಳಿಸಿ

10:30 PM Oct 26, 2019 | mahesh |

ರಾ.ಹೆ. 73ರ ಪಡೀಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೊಸ ರೈಲ್ವೇ ಕೆಳ ಸೇತುವೆ ಪಕ್ಕದಲ್ಲೇ ಇರುವ ಹಳೆಯ ಕೆಳ ಸೇತುವೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತೀ ದಿನ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

Advertisement

ರೈಲ್ವೇ ಕೆಳ ಸೇತುವೆಯ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದರೂ, ಉದ್ಘಾಟನೆ ಭಾಗ್ಯ ದೊರಕಿಲ್ಲ. ಇದೇ ಕಾರಣಕ್ಕೆ ಈ ಭಾಗದಲ್ಲಿ ಸಂಚಾರದಟ್ಟಣೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಸಂಜೆ ವೇಳೆ ಅರ್ಧ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಉದ್ಭವಿಸುತ್ತದೆ.

ಈ ಹಿಂದೆ ಪಡೀಲ್‌ನಲ್ಲಿ 16.50 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 62 ಮೀ. ಉದ್ದದ ಹೊಸ ಕೆಳ ಸೇತುವೆ ಕಳೆದ ವರ್ಷ ಉದ್ಘಾಟನೆಗೊಂಡಿತ್ತು. ಈ ಹೊಸ ರೈಲ್ವೇ ಕೆಳ ಸೇತುವೆಯಿಂದ ಮಳೆಗಾಲ ದಲ್ಲಾಗುವ ಅಧ್ವಾನ ಅಷ್ಟಿಷ್ಟಲ್ಲ. ಸಣ್ಣ ಮಳೆ ಬಂದರೆ ಸಾಕು ಅಂಡರ್‌ಪಾಸ್‌ ತುಂಬಾ ನೀರು ತುಂಬಿಕೊಂಡು ಸಂಚಾರಕ್ಕೆ ಕಷ್ಟವಾಗುತ್ತದೆ. ಅಸಮರ್ಪಕವಾದ ರಸ್ತೆ ಕಾಮಗಾರಿಗಳ ವ್ಯವಸ್ಥೆಯಿಂದಾಗಿ ಮಳೆ ನೀರು ನಡು ರಸ್ತೆಯಲ್ಲಿ ಧಾರಾಕಾರವಾಗಿ ಹರಿಯುತ್ತಿದ್ದು, ನೀರಿನೊಂದಿಗೆ ರಸ್ತೆಪಕ್ಕದಲ್ಲಿ ರಾಶಿ ಹಾಕಲಾಗಿರುವ ಮಣ್ಣು ಕೂಡ ಸೇರಿಕೊಂಡು ಪಡೀಲ್‌ ರೈಲ್ವೇ ಅಂಡರ್‌ಪಾಸ್‌ ಸಂಪೂರ್ಣ ಕೆಸರುಮಯವಾಗುತ್ತದೆ. ಹೊಸ ರೈಲ್ವೇ ಕೆಳ ಸೇತುವೆಗೆ ಕೂಡಲೇ ಉದ್ಘಾಟನ ಭಾಗ್ಯ ಸಿಕ್ಕರೆ ಈ ಭಾಗದಲ್ಲಿ ಉಂಟಾಗುವ ಟ್ರಾಫಿಕ್‌ ಜಾಮ್‌ ತುಸು ಕಡಿಮೆಯಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next