ಶಿವಮೊಗ್ಗ: ಮಾರ್ಚ್, ಏಪ್ರಿಲ್ ಒಳಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಪೂರ್ಣಗೊಳ್ಳುವಂತೆ ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಹೇಳಿದರು.
ಶಿವಮೊಗ್ಗದ ಗೋಪಾಲಗೌಡ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರಸಂಜೆ ಸ್ಮಾರ್ಟ್ ಸಿಟಿ ಯೋಜನೆಯಡಿನಿರ್ಮಿಸಲಾಗುವ ಯೋಗಭವನ ಸೇರಿದಂತೆ ಹತ್ತಾರು ಹೊಸಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶಿವಮೊಗ್ಗ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಸ್ಮಾರ್ಟ್ ಸಿಟಿಯೋಜನೆಯಡಿ ವಿವಿಧ ಕಾಮಗಾರಿಕೈಗೊಳ್ಳಲಾಗಿದೆ. ಕೋವಿಡ್ ಮತ್ತುಮಳೆಗಾಲದಿಂದಾಗಿ ಕಾಮಗಾರಿಗೆಹಿನ್ನಡೆಯಾಗಿತ್ತು. ಆದರೆ ಮುಂದಿನನಾಲ್ಕೈದು ತಿಂಗಳಲ್ಲಿ ಅಧಿಕಾರಿಗಳು ಕೈಗೆತ್ತಿಕೊಂಡಿರುವ ಎಲ್ಲ ಕಾಮಗಾರಿಗಳನ್ನು ಮುಗಿಸಬೇಕೆಂದು ಸೂಚಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿ ಹೊರತಾಗಿ ನಗರದ ಕೆಲವು ಬಡಾವಣೆಗಳಲ್ಲಿ ಒಳಚರಂಡಿ ಮತ್ತು ಕುಡಿಯುವನೀರಿನ ಸಮರ್ಪಕ ವ್ಯವಸ್ಥೆ ಇಲ್ಲ ಎಂಬ ಮನವಿ ಹಿನ್ನೆಲೆಯಲ್ಲಿ ಇದಕ್ಕೆ ಸುಮಾರು250 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ. ಈ ಬಗ್ಗೆ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರಿದ್ದೇನೆ. ಮುಂಬರುವಬಜೆಟ್‌ನಲ್ಲಿ ಈ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ನಗರದೊಳಗಿನ ಕೆಲವು ಕೆರೆಗಳ ಅಭಿವೃದ್ಧಿಮತ್ತು ಸಂರಕ್ಷಣೆ ಮಾಡಲಾಗುವುದು.ತುಂಗಾ ನದಿಗೆ ಮಲಿನ ನೀರುಬಿಡದಂತೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ನಗರ ಸುಂದರವಾಗಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಸಚಿವ ಬೈರತಿ ಬಸವರಾಜ್ ಹೇಳಿದರು.
ಸಚಿವ ಕೆ.ಎಸ್. ಈಶ್ವರಪ್ಪ, ಎಂಎಲ್‌ಸಿ ಆರ್. ಪ್ರಸನ್ನಕುಮಾರ್, ರುದ್ರೇಗೌಡ, ಮೇಯರ್ ಸುವರ್ಣಾ ಶಂಕರ್, ಡಿ.ಎಸ್. ಅರುಣ್, ಜ್ಯೋತಿಪ್ರಕಾಶ್ ಮೊದಲಾದವರಿದ್ದರು.