Advertisement

53rd Kerala State Film Awards: ಮಮ್ಮುಟ್ಟಿಗೆ ಅತ್ಯುತ್ತಮ ನಟ.. ಇಲ್ಲಿದೆ ಫುಲ್‌ ಲಿಸ್ಟ್

01:28 PM Jul 22, 2023 | Team Udayavani |

ಕೊಚ್ಚಿ: ಪ್ರತಿಷ್ಠಿತ 53ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ (ಜು.21 ರಂದು) ಅನೌನ್ಸ್‌ ಆಗಿದೆ. ಬಂಗಾಳಿ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಗೌತಮ್ ಘೋಸ್ ನೇತೃತ್ವದ ತೀರ್ಪುಗಾರರ ತಂಡ ವಿಜೇತರನ್ನು ಆಯ್ಕೆ ಮಾಡಿದೆ.

Advertisement

2022 ರ ಸಾಲಿನ 154 ಚಿತ್ರಗಳನ್ನು ಸ್ಕ್ರೀನಿಂಗ್‌ ಗಾಗಿ ಕಳುಹಿಸಲಾಗಿತ್ತು.  ಈ ಪ್ರಶಸ್ತಿಯನ್ನು ಕೇರಳ ರಾಜ್ಯ ಚಲನಚಿತ್ರ ಅಕಾಡೆಮಿ ವತಿಯಿಂದ ನೀಡಲಾಗುತ್ತದೆ.

ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಗೆಲ್ಲುವ ಮೂಲಕ 6ನೇ ಬಾರಿ ಪ್ರತಿಷ್ಠಿತ ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್‌ ಪಡೆದ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಹಿಳಾ ಪ್ರಧಾನ ʼರೇಖಾʼ ಚಿತ್ರದ ಅಭಿನಯಕ್ಕಾಗಿ ಯುವನಟಿ ವಿನ್ಸಿ ಅಲೋಶಿಯಸ್ ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.

ಪ್ರಶಸ್ತಿ ಗೆದ್ದವರ ಪಟ್ಟಿ:

ಅತ್ಯುತ್ತಮ ಚಿತ್ರ – ನನ್ಪಕಲ್ ನೆರತು ಮಾಯಕ್ಕಂ (Nanpakal Nerathu Mayakkam)

Advertisement

ಎರಡನೇ ಅತ್ಯುತ್ತಮ ಚಿತ್ರ  ಆದಿತಟ್ಟು (Adithattu)

ಅತ್ಯುತ್ತಮ ನಟ ಮಮ್ಮುಟ್ಟಿ (Nanpakal Nerathu Mayakkam)

ಅತ್ಯುತ್ತಮ ನಟಿ – ವಿನ್ಸಿ ಅಲೋಶಿಯಸ್ (Rekha)

ಅತ್ಯುತ್ತಮ ನಿರ್ದೇಶಕ – ಮಹೇಶ್ ನಾರಾಯಣನ್ (ಚಿತ್ರ: ಅರಿಯಿಪ್ಪು) (Ariyippu)

ಜ್ಯೂರಿ ವಿಶೇಷ ಉಲ್ಲೇಖ (ನಟನೆ) – ಕುಂಚಕೋ ಬೋಬನ್ (ನನ್ನ ತಾನ್ ಕೇಸ್ ಕೊಡು) ಮತ್ತು  ಅಲೆನ್ಸಿಯರ್ ಲೇ ಲೋಪೆಜ್ (ಅಪ್ಪನ್)

ತೀರ್ಪುಗಾರರ ವಿಶೇಷ ಉಲ್ಲೇಖ (ನಿರ್ದೇಶನ) – ಬಿಸ್ವಜಿತ್ ಎಸ್ ಮತ್ತು ರಾರೀಶ್

ಮಹಿಳೆಯರು/ತೃತೀಯ ಲಿಂಗಿಗಾಗಿ ಯಾವುದೇ ವಿಭಾಗದಲ್ಲಿ ವಿಶೇಷ ಪ್ರಶಸ್ತಿ – ಶ್ರುತಿ ಶರಣ್ಯಮ್ (B 32 Muthal 44 Vare)

ಅತ್ಯುತ್ತಮ ಪಾತ್ರ: ನಟ – ಪಿ ಪಿ ಕುಂಜಿಕೃಷ್ಣನ್ (ನನ್ನ ತಾನ್ ಕೇಸ್ ಕೊಡು)

ಅತ್ಯುತ್ತಮ ಪಾತ್ರ: ನಟಿ – ದೇವಿ ವರ್ಮಾ (ಸೌದಿ ವೆಲ್ಲಕ್ಕ)

ಜನಪ್ರಿಯ ಮನವಿ ಮತ್ತು ಸೌಂದರ್ಯದ ಮೌಲ್ಯದೊಂದಿಗೆ ಅತ್ಯುತ್ತಮ ಚಲನಚಿತ್ರ (Best Film with Popular Appeal and Aesthetic Value) ಎನ್ನ ತಾನ್ ಕೇಸ್ ಕೊಡು

ಅತ್ಯುತ್ತಮ ಮಕ್ಕಳ ಚಿತ್ರ – ಪಲ್ಲೊಟ್ಟಿ 90 ರ ಕಿಡ್ಸ್

ಅತ್ಯುತ್ತಮ ಕಥೆಗಾರ (Best Story Writer) – ಕಮಲ್ ಕೆಎಂ (ಪದ)

ಅತ್ಯುತ್ತಮ ಚಿತ್ರಕಥೆ (ಮೂಲ) – ರತೀಶ್ ಬಾಲಕೃಷ್ಣನ್ ಪೊದುವಾಲ್ (ನನ್ನ ತಾನ್ ಕೇಸ್ ಕೊಡು)

ಅತ್ಯುತ್ತಮ ಚಿತ್ರಕಥೆ (ಅಳವಡಿಕೆ) – ರಾಜೇಶ್ ಪಿನ್ನಾಡನ್ (ಒರು ತೆಕ್ಕನ್ ತಲ್ಲು ಕೇಸ್)

ಅತ್ಯುತ್ತಮ ಬಾಲ ನಟ – ಮಾಸ್ಟರ್ ಡಾ ವಿನ್ಸಿ (ಪಲ್ಲೊಟ್ಟಿ 90 ರ ಕಿಡ್ಸ್)

ಅತ್ಯುತ್ತಮ ಬಾಲನಟಿ – ತನ್ಮಯ (ವಜಕ್ಕು)

ಅತ್ಯುತ್ತಮ ಸಂಗೀತ ನಿರ್ದೇಶಕ (ಹಾಡುಗಳು) – ಎಂ ಜಯಚಂದ್ರನ್ (ಪಥೋನ್ಪಥಂ ನೂಟ್ಟಾಂಡು ಮತ್ತು ಆಯಿಷಾ)

ಅತ್ಯುತ್ತಮ ಗಾಯಕ – ಕಪಿಲ್ ಕಪಿಲನ್ (ಪಲ್ಲೊಟ್ಟಿ 90 ರ ಕಿಡ್ಸ್ ಚಿತ್ರದ “ಕನವೇ” ಹಾಡಿಗೆ)

ಅತ್ಯುತ್ತಮ ಗಾಯಕಿ – ಮೃದುಲಾ ವಾರಿಯರ್ (ಪಾಠೋನ್ಪಥಂ ನೋಡಾಂಡು ಚಿತ್ರದ “ಮಾಯಿಲ್ಪೀಲಿ ಇಳಕುನ್ನು ಕಣ್ಣ” ಹಾಡಿಗೆ)

ಅತ್ಯುತ್ತಮ ಸಂಗೀತ ನಿರ್ದೇಶಕ (ಹಿನ್ನೆಲೆ) – ಡಾನ್ ವಿನ್ಸೆಂಟ್ (ನನ್ನ ತಾನ್ ಕೇಸ್ ಕೊಡು)

ಅತ್ಯುತ್ತಮ ಗೀತರಚನೆಕಾರ (Best Lyricist) – ರಫೀಕ್ ಅಹಮ್ಮದ್ (ವಿಡ್ಡಿಗಳು ಮಾಶ್ ಚಿತ್ರದ “ತಿರಮಲಯಾನು ನೀ” ಹಾಡಿಗೆ)

ಅತ್ಯುತ್ತಮ ಎಡಿಟರ್  (Best Film Editor ) – ನಿಶಾದ್ ಯೂಸುಫ್ (ತಳ್ಳುಮಾಲ)

ಅತ್ಯುತ್ತಮ ಛಾಯಾಗ್ರಾಹಕ (Best Choreographer) – ಮನೇಶ್ ಮಾಧವನ್ (ಎಲಾ ವೀಝಾ ಪೂಂಚಿರ) ಮತ್ತು ಚಂದ್ರು ಸೆಲ್ವರಾಜ್ (ವಾಝಕ್ಕು)

ಅತ್ಯುತ್ತಮ ಧ್ವನಿ ವಿನ್ಯಾಸ (Best Sound Design)- ಅಜಯನ್ ಅದತ್ (ಎಲಾ ವೀಝಾ ಪೂಂಚಿರ)

ಅತ್ಯುತ್ತಮ ಧ್ವನಿ ಮಿಶ್ರಣ (Best Sound Mixing) ವಿಪಿನ್ ನಾಯರ್ (ನನ್ನ ಥಾನ್ ಕೇಸ್ ಕೊಡು)

ಅತ್ಯುತ್ತಮ ಸಿಂಕ್ ಸೌಂಡ್ – ವೈಶಾಖ್ ವಿವಿ (ಅರಿಯಿಪ್ಪು)

ಅತ್ಯುತ್ತಮ ನೃತ್ಯ ನಿರ್ದೇಶಕ – ಶೋಬಿ ಪಾಲ್ ರಾಜ್ (ತಳ್ಳುಮಾಲ)

ಅತ್ಯುತ್ತಮ ಡಬ್ಬಿಂಗ್ ಕಲಾವಿದೆ – ಪಾಲಿ ವಲ್ಸನ್ (ಸೌದಿ ವೆಲ್ಲಕ್ಕ)

ಅತ್ಯುತ್ತಮ ಡಬ್ಬಿಂಗ್ ಕಲಾವಿದ – ಶೋಬಿ ತಿಲಕನ್ (ಪಥೋನ್ಪಥಂ ನೂಟ್ಟಂದು)

ಅತ್ಯುತ್ತಮ ಮೇಕಪ್ ಕಲಾವಿದ – ರೋನೆಕ್ಸ್ ಕ್ಸೇವಿಯರ್ (ಭೀಷ್ಮಪರ್ವಂ)

ಅತ್ಯುತ್ತಮ ವಸ್ತ್ರ ವಿನ್ಯಾಸಕಿ – ಮಂಜುಷಾ ರಾಧಾಕೃಷ್ಣನ್ (ಸೌದಿ ವೆಲ್ಲಕ್ಕ)

ಅತ್ಯುತ್ತಮ ಕಲಾ ನಿರ್ದೇಶಕ – ಜ್ಯೋತಿಶ್ ಶಂಕರ್ (ನನ್ನ ತಾನ್ ಕೇಸ್ ಕೊಡು)

ಅತ್ಯುತ್ತಮ ವಿಷುಯಲ್ ಎಫೆಕ್ಟ್ಸ್ – ಅನೀಶ್ ಟಿ, ಸುಮೇಶ್ ಗೋಪಾಲ್ (ವಜಕ್ಕು)

 

Advertisement

Udayavani is now on Telegram. Click here to join our channel and stay updated with the latest news.

Next