Advertisement

“ಸಂಪೂರ್ಣ ಅಭಿವೃದ್ಧಿ ಅನುಷ್ಠಾನವೇ ಸಂಸದರ ಆದರ್ಶ ಗ್ರಾಮ’

08:35 AM Jul 04, 2017 | |

ಕನಕಪುರ: ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಸಂಪೂರ್ಣ ಅಭಿವೃದ್ಧಿ ಅನುಷ್ಠಾನವೇ ಸಂಸದ ಆದರ್ಶ ಗ್ರಾಮದ ಮೂಲ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಆರ್‌. ಮಮತಾ ಹೇಳಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ “ಸಂಸದರ ಆದರ್ಶ ಗ್ರಾಮ ಯೋಜನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯಲಚವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 41 ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ತೋಟಗಾರಿಕೆ, ಕೃಷಿ, ರೇಷ್ಮೆ,  ಪಶು ಸಂಗೋಪನೆ, ಇಂಧನ ಇಲಾಖೆ, ಸ್ವತ್ಛ ಭಾರತ್‌ ಅಭಿಯಾನ ಸೇರಿದಂತೆ  ಎಲ್ಲಾ ಇಲಾಖೆಗಳಿಂದ ವೈಯಕ್ತಿಕಫ‌ಲಾನುಭವಿಗಳನ್ನು ಗುರುತಿಸಿ ಆರ್ಥಿಕವಾಗಿ
ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಬುಧವಾರದಿಂದಲೇ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ
ಕಲೆ ಹಾಕಲಿದ್ದಾರೆ. ಪ್ರತಿ ಕುಟುಂಬದ ಸದಸ್ಯರು ಅಧಿಕಾರಿಗಳು ಕೇಳಿದ ಮಾಹಿತಿ ನೀಡುವಂತೆ ತಿಳಿಸಿದರು.

ಜಿಪಂ ಸದಸ್ಯ ಎಚ್‌.ಕೆ.ನಾಗರಾಜು ಮಾತನಾಡಿ, ರಾಜ್ಯದಲ್ಲೇ ಜಿಲ್ಲೆ ನರೇಗಾದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಂಸದರು ಹೆಚ್ಚು  ಒತ್ತು ಕೊಟ್ಟು ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕೆಂಬ ಉದ್ದೇಶದಿಂದ ನರೇಗಾದಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು. ಮರಳವಾಡಿ ಜಿಪಂ ಸದಸ್ಯ ಎಂ.ಎನ್‌. 
ನಾಗರಾಜು ಮಾತನಾಡಿ, ಯಲಚವಾಡಿ ಗ್ರಾಪಂ ಆರ್ಥಿಕವಾಗಿ ಹಿಂದುಳಿದ ಗ್ರಾಪಂ ಆಗಿದೆ. ನೀರಿನ ಮಟ್ಟ ತೀರಾ ಕುಸಿದಿದ್ದು ವ್ಯವಸಾಯ ಮಾಡುವುದೇ ಕಷ್ಟವಾಗಿದೆ. ಪ್ರತಿ ಕುಟುಂಬ ಸರ್ವೆ ಮಾಡುವ ಮೂಲಕ ಅಂಥ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬಬೇಕೆಂದರು.

ಈ ಸಂದರ್ಭದಲ್ಲಿ ಕಂದಾಯ, ಕೈಗಾರಿಕೆ, ಕೃಷಿ, ತೋಟಗಾರಿಕೆ, ಬೆಸ್ಕಾಂ, ಪಶುಪಾಲನೆ, ಅಬಕಾರಿ, ಸ್ವತ್ಛಭಾರತ್‌ ಮಿಷನ್‌, ಸಮಾಜ ಕಲ್ಯಾಣ ಇಲಾಖೆ, ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜಿಪಂ ಸಿಇಒ ಸಿ.ಪಿ.ಶೈಲಜಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ  ರಾಮಕೃಷ್ಣಪ್ಪ, ಯಲಚವಾಡಿ ಗ್ರಾಪಂ ಅಧ್ಯಕ್ಷ ಮಹಮದ್‌ ಅಬ್ದುಲ್‌, ಸದಸ್ಯರಾದ ಜಯರಾಮೇಗೌಡ, ನರಸಿಂಹಯ್ಯ, ಬಸವರಾಜು, ಕರಿಯಪ್ಪ ಸೇರಿದಂತೆ ತಾಲೂಕು ಹಾಗೂ ಗ್ರಾಪಂ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next