Advertisement

ಮರಾಠ ಮೀಸಲಾತಿಗೆ ಸಂಪೂರ್ಣ ಸಮ್ಮತಿ- ಸರ್ವಪಕ್ಷಗಳ ಸಭೆ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಘೋಷಣೆ

12:27 AM Nov 02, 2023 | Pranav MS |

ಮುಂಬಯಿ: ಮರಾಠಾವಾಡ ಜಿಲ್ಲೆಗಳಲ್ಲಿ ತೀವ್ರವಾಗಿರುವ ಮರಾಠ ಮೀಸಲಾತಿ ವಿವಾದವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರಲು ಮುಂದಾಗಿರುವ ಮಹಾರಾಷ್ಟ್ರ ಸರಕಾರವು ಇತರ ಪಕ್ಷಗಳ ಬೆಂಬಲ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಬುಧವಾರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಸರ್ವಪಕ್ಷಗಳ ಸಭೆ ನಡೆಸಿದ್ದು, ಕುಣಬಿ ಸಮುದಾಯಕ್ಕೆ ಮರಾಠ ಮೀಸಲಾತಿ ನೀಡಲು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌, ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌, ಶಿವಸೇನಾ ಉದ್ಧವ್‌ ಬಣದ ಅಧ್ಯಕ್ಷ ಅನಿಲ್‌ ಪರ, ವಿಧಾನಸಭಾ ವಿಪಕ್ಷ ನಾಯಕ ವಿಜಯ್‌ ವಡೆಟ್ಟಿವರ್‌, ವಿಧಾನಪರಿಷತ್‌ ವಿಪಕ್ಷದ ನಾಯಕ ಅಂಬಾದಾಸ್‌ ದಾನ್ವೆ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.

ಅ. 25ರಿಂದ ಶಿವಬಾ ಸಂಘಟನ ಮುಖ್ಯಸ್ಥ ಮನೋಜ್‌ ಜಾರಂಗೆ ಪೂರ್ಣ ಮೀಸಲಾತಿಗೆ ಆಗ್ರಹಿಸಿ ಉಪವಾಸ ಸತ್ಯಾ ಗ್ರಹ ನಡೆಸುತ್ತಿದ್ದಾರೆ. ಅದನ್ನು ಕೈಬಿಡುವಂತೆ ಮುಖ್ಯಮಂತ್ರಿ ಶಿಂಧೆ ಆಗ್ರಹಿಸಿದ್ದಾರೆ. ಹಾಗೆಯೇ ಮರಾಠವಾಡ ಪ್ರದೇಶಗಳ 5 ಜಿಲ್ಲೆಗಳಲ್ಲಿ ಹಿಂಸಾಚಾರ ನಿಲ್ಲಿಸಬೇಕು, ಅದರಿಂದ ಜನತೆಗೆ ತೊಂದರೆಯಾಗುತ್ತದೆ ಎಂದು ಶಿಂಧೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಹೇಳಿದ್ದೇನು?: ಪೂರ್ಣ ಮೀಸಲಾತಿಗೆ ಆಗ್ರಹಿಸುತ್ತಿರುವ ಕುಣಬಿ ಸಮುದಾಯದ ಬೇಡಿಕೆ ಈಡೇ ರಿಸಲು ಬದ್ಧ. ಅದಕ್ಕೆ ಪೂರಕವಾದ ಕಾನೂನು ಪ್ರಕ್ರಿಯೆ ಮುಗಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಬೇಕು. ಈ ಹಿಂದೆ ದೇವೇಂದ್ರ ಫ‌ಡ್ನವೀಸ್‌ ಮುಖ್ಯಮಂತ್ರಿಯಾಗಿದ್ದಾಗ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಸರ್ವೋತ್ಛ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಈ ಬಾರಿ ಹಿಂದಿನ ಲೋಪಗಳಾಗದಂತೆ ತಡೆಯಲು ನಾವು ಹೊರಟಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.

ಬೀಡ್‌ನ‌ಲ್ಲಿ ಕರ್ಫ್ಯೂ ತೆರವು: ಹಿಂಸಾಚಾರ ತೀವ್ರವಾಗಿದ್ದ ಬೀಡ್‌ ಜಿಲ್ಲೆಯಲ್ಲಿ ಕರ್ಫ್ಯೂ ತೆರವು ಮಾಡಲಾಗಿದೆ. ಆದರೆ ಅಂತ ರ್ಜಾಲ ಸ್ಥಗಿತ ಸಹಿತ ಕೆಲವು ತಡೆಯಾಜ್ಞೆಗಳನ್ನು ಉಳಿಸಿ ಕೊಳ್ಳ ಲಾಗಿದೆ. ಇತರ ಜಿಲ್ಲೆಗಳಲ್ಲೂ ಹಂತಹಂತವಾಗಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸರಕಾರ ನಿರ್ಧರಿಸಿದೆ.

Advertisement

ಏನಿದು ವಿವಾದ?: ಮರಾಠವಾಡ ಪ್ರದೇಶಗಳಲ್ಲಿ ಕುಣಬಿ ಸಮುದಾಯವಿದೆ. ಇದು ಇತರ ಹಿಂದುಳಿದ ವರ್ಗಗಳಲ್ಲಿ ಬರುತ್ತದೆ. ಇದಕ್ಕೆ ಈಗಾಗಲೇ ಶಿಕ್ಷಣ,  ಸರಕಾರಿ ಕೆಲಸಗಳಲ್ಲಿ ಮೀಸಲಾತಿ ಸಿಕ್ಕಿದೆ. ಆದರೆ ಪೂರ್ಣ ಮೀಸಲಾತಿ ಬೇಕು, ಇದು ಸಾಲದು ಎನ್ನುವುದು ಆ ಸಮುದಾಯದ ಆಗ್ರಹ. ಹಾಗಾ ಗಿಯೇ ಎಲ್ಲ ರೀತಿಯ ಹೋರಾಟಗಳನ್ನೂ ಮಾಡಲಾಗುತ್ತಿದೆ. ಪ್ರಸ್ತುತ ಮಹಾರಾಷ್ಟ್ರ ಸರಕಾರ ಹೊಸತಾಗಿ ಕುಣಬಿ ಸಮುದಾಯಕ್ಕೆ ಜಾತಿ ಪ್ರಮಾಣಪತ್ರಗಳನ್ನು ನೀಡಲು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next