Advertisement

ಇತಿಹಾಸ ಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಂಪೂರ್ಣ ರದ್ದು

05:42 PM Jan 13, 2022 | Team Udayavani |

ಕೊಪ್ಪಳ: ಶತಮಾನಗಳಿಂದ ನಡೆದುಕೊಂಡು ಬಂದ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು  ಕೋವಿಡ್ ಕಾರಣದಿಂದ  ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

Advertisement

ಪೂಜ್ಯರು , ಶ್ರೀಮಠದ ಸದ್ಭಕ್ತರು , ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನಾಡಿನ ಸದ್ಭಭಕ್ತರ ಆರೋಗ್ಯ ದೃಷ್ಟಿಯಿಂದ ಜಾತ್ರಾ ಮಹೋತ್ಸವ ರದ್ದು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ . ಸಂಪ್ರದಾಯ ಮುರಿಯದಂತೆ ಸರಳವಾಗಿ ಕೇವಲ ಶ್ರೀಮಠದ ಧಾರ್ಮಿಕ ವಿಧಿ ವಿಧಾನಗಳನ್ನು ಮಾತ್ರ ಆಚರಿಸಿ ಹಾಗೂ ಕೃರ್ತು ಗದ್ದುಗೆಯ ದರ್ಶನಕ್ಕೆ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ಒಂದು ವೇಳೆ ಸೊಂಕು ಉಲ್ಬಣಗೊಂಡಲ್ಲಿ ಶ್ರೀಮಠದ ಪ್ರವೇಶವನ್ನು ಸಹ ನಿರ್ಬಂಧಿಸಲಾಗುವುದು. ಜಾಗತಿಕವಾಗಿ ಹರಡಿರುವ ಕೋವಿಡ್ / ಒ ಮಿಕ್ರಾನ್ ಸಾಂಕ್ರಾಮಿಕ ಕಾಯಿಲೆ ಕೊನೆಗೊಂಡು ಸಮಾಜದಲ್ಲಿ ಸ್ವಸ್ಥ ವಾತಾವರಣ ನಿರ್ಮಾಣವಾಗಿ ಸರ್ವರಿಗೂ ಶ್ರೀ ಗವಿಸಿದ್ಧೇಶ್ವರನು ಆರೋಗ್ಯ , ಆಯುಷ್ಯ , ಆನಂದ ಸದಾ ಕರುಣಿಸಲೆಂದು ಪ್ರಾರ್ಥಿಸೋಣ .ಈ ಅಧಿಕೃತ ಪ್ರಕಟಣೆಗೆ ಸದ್ಭಕ್ತರೆಲ್ಲರೂ ಸಹಕರಿಸಬೇಕೆಂದು ಶ್ರೀಮಠ ವಿನಂತಿ ಮಾಡಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next