Advertisement
ನೇರವಾಗಿ ರಿಯಲ್ ಎಸ್ಟೇಟ್, ನಿರ್ಮಾಣ ಉದ್ಯಮಕ್ಕೆ ಮೇಲ್ನೋಟಕ್ಕೆ ಯಾವುದೇ ಘೋಷಣೆ ಮಾಡಿಲ್ಲ. ನಿರ್ದಿಷ್ಟ ವಾಗಿ ಅನುದಾನ ಅಥವಾ ಯೋಜನೆ ನೀಡದಿದ್ದರೂ ಕೂಡಾ ಬೇರೆ ಕ್ಷೇತ್ರಗಳು ಅಭಿವೃದ್ಧಿಯಾಗುವಾಗ ಆದರೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಲಾಭವಾಗಲಿದೆ.
Related Articles
ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಜಿಎಸ್‌ಟಿ, ಆದಾಯ ತೆರಿಗೆಗಳು ಸಂಗ್ರಹವಾಗಿದ್ದು, ಅದನ್ನೆಲ್ಲ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಳಕೆ ಮಾಡಲಾಗಿದೆ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇದರಿಂದ ಹಳ್ಳಿಯ ಕೃಷಿಕರೂ ಕೂಡಾ ಆರ್ಥಿಕವಾಗಿ ಸದೃಢರಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬರಲು ಅವಕಾಶವಿದೆ. ದೇಶದ ಜನರು ಅಭಿವೃದ್ಧಿಯಾದರೆ ರಿಯಲ್ ಎಸ್ಟೇಟ್‌ಗೆ ಅದೇ ದೊಡ್ಡ ಕೊಡುಗೆ.
Advertisement
ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಇದರಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿರುವುದರಿಂದ ಕೈಗಾರಿಕೆಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಇದರ ಪರಿಣಾಮ ಖಾಸಗಿ ಕ್ಷೇತ್ರದ ಹೂಡಿಕೆ ಆರಂಭವಾಗುತ್ತದೆ. ಜಾಗದ ಖರೀದಿ- ಮಾರಾಟ, ಫ್ಲ್ಯಾಟ್‌ಗಳ ಖರೀದಿ ಹೆಚ್ಚಾಗುತ್ತದೆ. ಹೆಚ್ಚಿನ ಗುಣಮಟ್ಟದ ನಿರ್ಮಾಣ ಯೋಜನೆಗಳು ಜಾರಿಗೆ ಬರುತ್ತವೆ.
ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿದಾಗ ಕೈಗಾರಿಕೆಗಳಿಗೂ ಲಾಭವಾಗುತ್ತದೆ. ಇದು ಮತ್ತೆ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬಜೆಟನ್ನು ಸಮಗ್ರ ವಾಗಿ ಗಮನಿಸುವುದಾದರೆ ಇದೊಂದು ಧನಾತ್ಮಕ ಅಂಶಗಳನ್ನು ಒಳ ಗೊಂಡಿ ರುವ ಉತ್ತಮ ಬಜೆಟ್ ಎನ್ನುಬಹುದು.-ಪುಷ್ಪರಾಜ್ ಜೈನ್
ಅಧ್ಯಕ್ಷರು, ಕ್ರೆಡೈ, ಮಂಗಳೂರು