Advertisement
ಮುಂಡೂರು ನಿವಾಸಿ ಸಂತೋಷ್ ಬಿ.ಕೆ. ಅವರು ನೀಡಿರುವ ದೂರಿನ ಮೇರೆಗೆ ಕೇಶವ, ಧನಂಜಯ, ಜಗದೀಶ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತೋಷ್ ಸೋಮವಾರ ರಾತ್ರಿ ತಮ್ಮ ತೋಟದ ಹತ್ತಿರ ಬಂದು ವಾಹನ ನಿಲ್ಲಿಸಿ, ಅಲ್ಲಿಂದ ತಮ್ಮ ತೋಟದಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿರುವಾಗ ಕೇಶವ, ಧನಂಜಯ, ಜಗದೀಶ್ ಅವರು ತಡೆದು ನಿಲ್ಲಿಸಿ, ಹಲ್ಲೆ ನಡೆಸಿದ್ದರು. ಸಂತೋಷ್ ಅವರ ತಾಯಿ ಸ್ಥಳಕ್ಕೆ ಬಂದಾಗ ಕೇಶವ ಅವರಿಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುಂಡೂರು ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ಪ್ರಕರಣ ಘಟನೆ ದಾರಿ ವಿವಾದಕ್ಕೆ ಹೊರತು ಅಕ್ಷತೆ ವಿಚಾರಕ್ಕೆ ಅಲ್ಲ ಎಂದು ದ.ಕ. ಜಿಲ್ಲಾ ಎಸ್ಪಿ ಸಿ.ಬಿ. ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳಿಗೆ ಅವರು ಮಾಹಿತಿ ನೀಡಿ, ಹಲ್ಲೆಗೂ ರಾಮ ಅಕ್ಷತೆ ವಿತರಣೆಗೂ ಯಾವುದೇ ಸಂಬಂಧವಿಲ್ಲ. ಅದು ಜಾಗದ ವಿಚಾರಕ್ಕೆ ನಡೆದ ಗಲಾಟೆ ಆಗಿದೆ. ಹಲ್ಲೆ ನಡೆಸಿದವರಿಗೂ, ಹಲ್ಲೆಗೊಳಗಾದ ಸಂತೋಷ್ ಕುಟುಂಬದ ಮಧ್ಯೆ ದಾರಿ ವಿಚಾರವಾಗಿ ವಿವಾದವಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಗಲಾಟೆ ನಡೆದಿದೆ ಎಂದರು. ಸುಳ್ಳು ಅಪವಾದ ಖಂಡನೀಯ
ಮುಂಡೂರು ಗ್ರಾಮದಲ್ಲಿ ನಡೆದ ಜಾಗದ ತಕರಾರಿಗೆ ಪುತ್ತಿಲ ಪರಿವಾರ ಅದರಲ್ಲೂ ಶ್ರೀರಾಮಮಂದಿರದ ಮಂತ್ರಾಕ್ಷತೆಯನ್ನು ಬಳಸಿಕೊಂಡು ಸುಳ್ಳು ಅಪವಾದ ಮಾಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ಪುತ್ತಿಲ ಪರಿವಾರ ಹೇಳಿದೆ. ಜಾಗದ ಗಲಾಟೆಗೆ ನಡೆದ ಘಟನೆ ಎಂದು ಪೊಲೀಸ್ ಎಫ್‌ಐಆರ್‌ನಲ್ಲೇ ಉಲ್ಲೇಖ ಆಗಿದೆ. ತತ್‌ಕ್ಷಣ ಸ್ಪಷ್ಟಿಕರಣ ಕೊಟ್ಟು ಗೊಂದಲ ನಿವಾರಿಸಿದ ದ.ಕ. ಎಸ್ಪಿ ರಿಷ್ಯಂತ್ ಅವರಿಗೆ ಕೃತಜ್ಞತೆಗಳು ಎಂದವರು ತಿಳಿಸಿದ್ದಾರೆ.