ಹೊಸದಿಲ್ಲಿ/ಲಖೀಂಪುರ್‌ಖೇರಿ: ಲಖೀಂಪುರಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಚಿವ ಅಜಯ ಕುಮಾರ್ ಮಿಶ್ರಾರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕು ಎಂದು ಸಂಸದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದೆ.
ಈ ಬಗ್ಗೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿ, ಮನವಿ ಸಲ್ಲಿಸಿತು. ಜತೆಗೆ ಸುಪ್ರೀಂಕೋರ್ಟ್‌ನ ಹಾಲಿ ಇಬ್ಬರು ನ್ಯಾಯಮೂರ್ತಿ ಗಳ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸ ಬೇಕು ಎಂದೂ ಒತ್ತಾಯಿಸಿತು.
ಅಜಯ ಕುಮಾರ್ ಮಿಶ್ರಾ ಸ್ಥಾನದಲ್ಲೇ ಮುಂದುವರಿದರೆ ಪ್ರಕರಣದ ತನಿಖೆ ನ್ಯಾಯಯುತವಾಗಿರುವುದಿಲ್ಲವೆಂದು ಮೃತ ರೈತರ ಕುಟುಂಬಗಳು ನಂಬಿವೆ ಎಂದು ಪ್ರತಿಪಾದಿ ಸಿತು ನಿಯೋಗ. ಮನವಿ ಸ್ವೀಕರಿಸಿದ ರಾಷ್ಟ್ರಪತಿ ಕೋವಿಂದ್ ಈ ನಿಟ್ಟಿನಲ್ಲಿ ಸರಕಾರದ ಜತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ದುಷ್ಕರ್ಮಿಗಳ ತಂಡದಿಂದ ವ್ಯಕ್ತಿಗೆ ಚೂರಿ ಇರಿತ
ಅರ್ಜಿ ವಜಾ: ಇದೇ ವೇಳೆ, ಅ.3ರ ಘಟನೆಗೆ ಸಂಬಂಧಿಸಿದಂತೆ ಬಂಧನದಲ್ಲಿ ರುವ ಆಶಿಶ್ ಮಿಶ್ರಾ ಜಾಮೀನು ಅರ್ಜಿ ಯನ್ನು ಲಖೀಂಪುರದ ಕೋರ್ಟ್ ತಿರಸ್ಕರಿ ಸಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರ ಪುತ್ರನ ಇನ್ನಿಬ್ಬರು ಸ್ನೇಹಿತ ರನ್ನು ಬಂಧಿಸಲಾಗಿದೆ.