Advertisement

ಮಲ್ಟಿಪ್ಲೆಕ್ಸ್ ವಿರುದ್ಧ ‘ಕೌಸಲ್ಯ ಸುಪ್ರಜಾ ರಾಮ’ ತಂಡದ ದೂರು

01:31 PM Aug 08, 2023 | Team Udayavani |

ಸದ್ಯ ಕನ್ನಡದ ಕೆಲವು ಸಿನಿಮಾಗಳು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರುವತ್ತಾ ದಾಪುಗಾಲು ಹಾಕುತ್ತಿವೆ. ಅದರಲ್ಲಿ ಶಶಾಂಕ್‌ ನಿರ್ದೇಶನದ “ಕೌಸಲ್ಯ ಸುಪ್ರಜಾ ರಾಮ’ ಕೂಡಾ ಒಂದು. ಈ ಖುಷಿಯಲ್ಲಿ ಚಿತ್ರತಂಡ ಪ್ರಮೋಶನ್‌ನಲ್ಲಿ ಬಿಝಿಯಾಗಿರುವ ಚಿತ್ರತಂಡಕ್ಕೆ ಈಗ ತಲೆನೋವೊಂದು ಬಂದಿರೆಗಗಿದೆ. ಅದು ಮಲ್ಟಿಪ್ಲೆಕ್ಸ್‌ಗಳಿಂದ. ಅದಕ್ಕೆ ಕಾರಣ ಪರಭಾಷಾ ಚಿತ್ರಗಳ ಬಿಡುಗಡೆ.

Advertisement

ಮುಂದಿನ ವಾರ (ಆ.11)ರಂದು ರಜನಿಕಾಂತ್‌ “ಜೈಲರ್‌’ ಸೇರಿ 4 ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಸಿನಿಮಾಗಳಿಗೆ ಶೋ ಕಾಯ್ದಿರಿಸಲು ಮಲ್ಟಿಪ್ಲೆಕ್ಸ್‌ಗಳು ಹೆಚ್ಚು ಉತ್ಸುಕವಾಗಿದ್ದು, ಅದಕ್ಕಾಗಿ ವಾರದ ಮುಂಚೆಯೇ ಚೆನ್ನಾಗಿ ಪ್ರದರ್ಶನ ಕಾಣುತ್ತಿರುವ ಸಿನಿಮಾಗಳ ಶೋ ಕಡಿತ ಮಾಡಲು ಮಲ್ಟಿಪ್ಲೆಕ್ಸ್‌ಗಳು ಮುಂದಾಗಿವೆಯಂತೆ. ಈ ವಿಚಾರ “ಕೌಸಲ್ಯ ಸುಪ್ರಜಾ ರಾಮ’ ತಂಡಕ್ಕೆ ತಿಳಿಯುತ್ತಿದ್ದಂತೆ ಸಿನಿಮಾದ ವಿತರಣೆ ಹಕ್ಕು ಪಡೆದ ಕೆವಿಎನ್‌ ಸಂಸ್ಥೆ ಹಾಗೂ ನಿರ್ಮಾಣ ಸಂಸ್ಥೆಯಾದ ಶಶಾಂಕ್‌ ಸಿನಿಮಾಸ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡುವಂತೆ ಮಲ್ಟಿಪ್ಲೆಕ್ಸ್‌ ಆಡಳಿತ ಮಂಡಳಿ ಜೊತೆ ಮಾತನಾಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next