Advertisement

ಶವಪೆಟ್ಟಿಗೆ ನಿರ್ಮಾಣದಲ್ಲಿ ಅವ್ಯವಹಾರ: ಆರೋಪ

09:15 PM May 16, 2019 | sudhir |

ಕುಂಬಳೆ : ಪೈವಳಿಕೆ ಗ್ರಾಮ ಪಂಚಾಯತ್‌ನ ಕಳೆದ ಆರ್ಥಿಕ ವರ್ಷದ ಜನಪರ ಯೋಜನೆಯಲ್ಲಿ ಸಾರ್ವಜನಿಕ ಕ್ಷೇಮ ವಲಯದಲ್ಲಿ ಶವ ದಹನಕ್ಕಾಗಿ 4 ಶವ ಪೆಟ್ಟಿಗೆಗಳನ್ನು ಗುತ್ತಿಗೆ ಆಧಾರದಲ್ಲಿ ನಿರ್ಮಿಸಿ ನಾಲ್ಕು ಕಡೆಗಳಲ್ಲಿ ಇರಿಸಲಾಗಿದೆ. ಈ ಶವ ಪೆಟ್ಟಿಗೆಯ ಮೂಲಕ ತೆಂಗಿನ ಗೆರಟೆಯಲ್ಲಿ ಶವ ದಹಿಸಬಹುದಾಗಿದೆ. ಕಾಞಂಗಾಡಿನ ಗುತ್ತಿಗೆದಾರರು ಒಂದೊಂದು ಪೆಟ್ಟಿಗೆಗೆ 75 ಸಹಸ್ರ ರೂ. ಪಡೆದು ಪೆಟ್ಟಿಗೆಗಳನ್ನು ಗ್ರಾ. ಪಂ.ಗೆ ನೀಡಿದ್ದರು. ಪಂಚಾಯತ್‌ ವ್ಯಾಪ್ತಿಯಲ್ಲಿ ಕುಡಾಲುಮೇರ್ಕಳ, ಬಾಯಾರು, ಚಿಪ್ಪಾರು ಮತ್ತು ಸಜಂಕಿಲ ಎಂಬಲ್ಲಿ ಶವ ದಹನಕ್ಕಾಗಿ ಪೆಟ್ಟಿಗೆಗಳನ್ನು ಇರಿಸಲಾಗಿದೆ. ಆದರೆ ಪೆಟ್ಟಿಗೆಯನ್ನು ಸಮರ್ಪಕವಾಗಿ ನಿರ್ಮಿಸದೆ ಇದರಲ್ಲಿ ಶವ ದಹಿಸಲು ಆಗದೆ ಇದರಿಂದ ಸಂಕಷ್ಟಪಡುವಂತಾಗಿದೆ.

Advertisement

ಗ್ರಾಮ ಪಂಚಾಯತ್‌ ಆಡಳಿತದ ಸಭೆಯಲ್ಲಿ ಪ್ರತಿಪಕ್ಷದ ಸದಸ್ಯರ ಅವ್ಯವಹಾರದ ಆರೋಪದಿಂದ ಪ್ರಕೃತ ಶವ ಪೆಟ್ಟಿಗೆಗಳನ್ನು ದುರಸ್ತಿಗಾಗಿ ಮತ್ತೆ ಗುತ್ತಿಗೆದಾರರು ಒಯ್ದಿದ್ದಾರೆ. ಪೆಟ್ಟಿಗೆಯು ಗಾತ್ರದಲ್ಲಿ ಉದ್ದ ಕಡಿಮೆಯಾಗಿ ಉದ್ದದ ಮೃತದೇಹಗಳನ್ನು ದ‌ಹಿಸಲು ಅಸಾಧ್ಯವಾಗುವುದಲ್ಲದೆ ಈ ಭಾರವಾದ ಪೆಟ್ಟಿಗೆಯನ್ನು ಎತ್ತಲು ಪೆಟ್ಟಿಗೆಗಳಿಗೆ ಹ್ಯಾಂಡಲ್‌ಗ‌ಳನ್ನು ಅಳವಡಿಸದೆ ಇರುವುರಿಂದ ಹೆಣ ದಹಿಸಲು ತೊಂದರೆಯಾಗಿದೆ.

ಪೆಟ್ಟಿಗೆಯೊಳಗಿಂದ ಹೊಗೆ ಹೊರಹೋಗಲು ಕೊರೆದ ರಂಧ್ರ ಚಿಕ್ಕದಾಗಿ ಹೆಣ ಪೆಟ್ಟಿಗೆಯೊಳಗೆ ಸರಿಯಾಗಿ ದಹನವಾಗುತ್ತಿಲ್ಲವೆಂಬ ಎಂಬ ಆರೋಪ ಕೇಳಿ ಬರುತ್ತಿದೆ. ಇದನ್ನು ಸರಿ ಪಡಿಸಲು ಗುತ್ತಿಗೆದಾರರು 3 ತಿಂಗಳ ಹಿಂದೆ ಒಯ್ದಿರುವುದರಿಂದ ಇದೀಗ ಪಂಚಾಯತ್‌ ವ್ಯಾಪ್ತಿಯಲ್ಲಿ ಶವ ದಹನಕ್ಕೆ ತೊಂದರೆಯಾಗಿದೆ. ಇತೀ¤ಚೆಗೆ ಚಿಪ್ಪಾರಿನಲ್ಲಿ ನಿಧನ ಹೊಂದಿದ ಬಡ ವ್ಯಕ್ತಿಯೋರ್ವರ ಮೃತದೇಹವನ್ನು ದೂರದ ಮಂಗಲ್ಪಾಡಿ ಗ್ರಾ.ಪಂ.ನ ಸಾರ್ವಜನಿಕ ಶ‌¾ಶಾನಕ್ಕೆ ಆ್ಯಂಬುಲೆನ್ಸ್‌ ಮೂಲಕ ಒಯ್ಯಬೇಕಾಯಿತು.

ಪಂಚಾಯತ್‌ನ ಯೋಜನಾ ಮೊತ್ತದ 3 ಲಕ್ಷ ರೂ. ನಿಧಿ ಬಳಸಿ ಮಾಡಿದ ಪೆಟ್ಟಿಗೆಯನ್ನು ವಿತರಿಸಿದ ಗುತ್ತಿಗೆದಾರರು ಗ್ರಾಮ ಪಂಚಾಯತ್‌ ಆಡಳಿತದೊಂದಿಗೆ ಶಾಮೀಲಾಗಿ ಭ್ರಷ್ಟಾಚಾರ ನಡೆಸಿರುವುದಾಗಿ ವಿಪಕ್ಷ ಬಿ.ಜೆ.ಪಿ. ಸದಸ್ಯರ ಮತ್ತು ಸಾರ್ವಜನಿಕರ ಆರೋಪ ಬಲವಾಗಿದೆ. ಹಿಂದಿನ ಕೇಂದ್ರ ಸರಕಾರದ ಆಡಳಿತ ಕಾಲದಲ್ಲಿ ಸೈನಿಕರ ಶವಪೆಟ್ಟಿಗೆ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಂತೆ ಭ್ರಷ್ಟಾಚಾರವೆಂಬ ಬೇತಾಳ ಸ್ಥಳೀಯಾಡಳಿತದ ಶವದಹನದ ಪೆಟ್ಟಿಗೆಯನ್ನೂ ಬೆಂಬತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕರದು.

ದುರಸ್ತಿಗೊಳಿಸಿ ಹಿಂದಿರುಗಿಸಿ
ಕೊಂಡೊಯ್ದ ಶವ ಪೆಟ್ಟಿಗೆಯನ್ನು ದುರಸ್ತಿಪಡಿಸಿ ತತ್‌ಕ್ಷಣ ಹಿಂದಿರುಗಿಸ ಬೇಕೆಂಬುದಾಗಿ ಹಲವು ಬಾರಿ ದೂರವಾಣಿ ಮೂಲಕ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಆದರೆ ಕೆಲವೊಂದು ಕಾರಣ ತಿಳಿಸಿ ಇನೂ ° ಪೆಟ್ಟಿಗೆ ಹಿಂದಿರುಗಿಸಿಲ್ಲ. ಪೆಟ್ಟಿಗೆಗಳನ್ನು ತತ್‌ಕ್ಷಣ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು.
-ಭಾರತಿ ಜೆ. ಶೆಟ್ಟಿ, ಗ್ರಾಮ ಪಂಚಾಯತ್‌ ಅಧ್ಯಕ್ಷೆ

Advertisement

ಗ್ರಾ.ಪಂ. ಉತ್ತರಿಸಲಿ
ಶವ ಪೆಟ್ಟಿಗೆ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ.ಪೆಟ್ಟಿಗೆ ಸಮರ್ಪಕವಾಗಿರದೆ ಇದನ್ನು ಸರಿಪಡಿಸಬೇಕೆಂಬುದಾಗಿ ಗುತ್ತಿಗೆದಾರರನ್ನು ಕರೆಸಿ ಮಾದರಿ ಪೆಟ್ಟಿಗೆ ತೋರಿಸಲಾಗಿದೆ. ಆದರೂ ಪೆಟ್ಟಿಗೆಯನ್ನು ಇನ್ನೂ ಮರಳಿಸದೆ ತೊಂದರೆಯಾಗಿದೆ. ಗ್ರಾ.ಪಂ.ಆಡಳಿತ ಇದಕ್ಕೆ ಉತ್ತರಿಸಬೇಕಿದೆ.
– ಎಸ್‌.ಸುಬ್ರಹ್ಮಣ್ಯ ಭಟ್‌, ವಿಪಕ್ಷ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next