Advertisement
ಅಲ್ಲದೇ, ಹೆಚ್ಚಿನ ಹಣವನ್ನುಪ್ರಯಾಣಿಕರಿಂದ ವಸೂಲಿ ಮಾಡುವುದು ಮುಂದುವರಿದಿದೆ.ಅಧಿಕ ಹಣವನ್ನು ವಸೂಲಿ ಮಾಡುತ್ತಿರುವ ಆರೋಪಗಳುದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.ಈ ನಿಟ್ಟಿನಲ್ಲಿ ಸಾರ್ವಜನಿಕರ ಪ್ರಯಾಣಕ್ಕಾಗಿ ಬಳಸುತ್ತಿರುವಮ್ಯಾಕ್ಸಿಕ್ಯಾಬ್, ಕಾಂಟ್ರಾÂಕ್ಟ್ ಕ್ಯಾರೇಜ್ ಬಸ್, ಶಾಲಾ ಬಸ್‌ಮತ್ತು ಪಿಎಸ್‌ವಿ ಬಸ್‌ಗಳಲ್ಲಿ ನಿಗದಿತ ಪ್ರಯಾಣ ದರಕ್ಕಿಂತಹೆಚ್ಚು ದರ ವಸೂಲಿ ಮಾಡಿದಲ್ಲಿ ಪ್ರಯಾಣಿಕರು ವಾಹನ ಸಂಖ್ಯೆಸಮೇತ ಆರ್‌ಟಿಒ ಕಚೇರಿಗೆ ದೂರು ಕೊಡಿ ಎಂದು ಸಾರಿಗೆಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಗುರುವಾರ 725 ಬಸ್‌ಗಳು ಮತ್ತು ಶುಕ್ರವಾರ 1154 ಬಸ್‌ಗಳು ಕಾರ್ಯಾಚರಣೆನಡೆಸಿದ್ದರೆ, ಶನಿವಾರ ಸಂಜೆಯೊಳಗೆ 1291 ಸಾರಿಗೆ ಬಸ್‌ಗಳುಕಾರ್ಯಾಚರಣೆ ಮಾಡಿವೆ.ಹೊಸದಾಗಿ 880 ಸಿಬ್ಬಂದಿಗೆ ವೇತನ: ಮುಷ್ಕರ ಬಿಟ್ಟುಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ಸಂಖ್ಯೆ ಅಧಿಕವಾಗುತ್ತಿದ್ದು,ಏ.12ರಂದು 7335 ನೌಕರರು ಮತ್ತು ಏ.15ರಂದು 1927ನೌಕರರಿಗೆ ಮಾರ್ಚ್ ತಿಂಗಳ ವೇತನ ಪಾವತಿಸಲಾಗಿತ್ತು.
ಈಗಮತ್ತೆ 880 ನೌಕರರಿಗೆ ವೇತನ ಬಿಡುಗಡೆ ಮಾಡಲಾಗಿದೆ. ಈಮೂಲಕ ಇದು ವರೆಗೆ 10142 ಸಾರಿಗೆ ನೌಕರರಿಗೆ 19.63ಕೋಟಿ ರೂ. ವೇತನವನ್ನು ಈಶಾನ್ಯ ಸಾರಿಗೆ ಸಂಸ್ಥೆ ನೀಡಿದೆ.ಖಾಸಗಿ ವಾಹನಗಳ ಕಡಿತ: ಸಾರ್ವಜನಿಕರ ಅನುಕೂಲಕ್ಕಾಗಿಸಾರಿಗೆ ಬಸ್ ನಿಲ್ದಾಣದಿಂದಲೇ ಖಾಸಗಿ ಬಸ್ ಮತ್ತು ಇನ್ನಿತರವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಳೆದಎರಡು ದಿನ ಗಮನಿಸಿದರೆ, ಖಾಸಗಿ ವಾಹನಗಳ ಸಂಖ್ಯೆ ಕೊಂಚಇಳಿಮುಖವಾಗುತ್ತಿದೆ.ಈಶಾನ್ಯ ಸಾರಿಗೆ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿಶುಕ್ರವಾರ 386 ಖಾಸಗಿ ಬಸ್‌ಗಳು ಸಂಚರಿಸಿದ್ದವು. ಆದರೆ,ಶನಿವಾರ ಖಾಸಗಿ ಬಸ್‌ಗಳ ಕಾರ್ಯಾಚರಣೆ ಸಂಖ್ಯೆ 286ಕ್ಕೆಇಳಿಕೆಯಾಗಿದೆ. ಅಂತಾರಾಜ್ಯಗಳ ಸಾರಿಗೆ ಬಸ್‌ಗಳು ಶುಕ್ರವಾರ220 ಸಂಚರಿಸಿದ್ದರೆ, ಶನಿವಾರ 187 ಕಾರ್ಯಾಚರಣೆ ಮಾಡಿವೆ.ಅದೇ ರೀತಿ ಕ್ರಮವಾಗಿ 2,497 ಮತ್ತು 2,141 ಜೀಪ್, ಕ್ರೂಸರ್‌ಮತ್ತಿತರ ವಾಹನಗಳು ಸಂಚರಿಸಿವೆ.