Advertisement

Threat to life; ಮಾಜಿ ಸಚಿವ ಹಾಲಪ್ಪ ವಿರುದ್ಧ ದೂರು ದಾಖಲು

12:45 AM Nov 09, 2023 | Vishnudas Patil |

ಸಾಗರ: ನಗರದ ಜನತಾ ಶಾಲೆ ಎದುರಿನ ನಿವೇಶನಕ್ಕೆ ಸಂಬಂಧಿಸಿದಂತೆ ಜುಲೈ 10ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾಜಿ ಸಚಿವ ಎಚ್. ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ನಗರಸಭೆ ಮಾಜಿ ಅಧ್ಯಕ್ಷೆ ಮಧುರಾ ಶಿವಾನಂದ್ ಅವರೂ ಸೇರಿದಂತೆ 43 ಜನರ ವಿರುದ್ಧ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಎಫ್‌ಐಆರ್ ದಾಖಲಾಗಿದೆ.

Advertisement

ನಗರದ ವಿಜಯಕುಮಾರ್ ಪಾಟೀಲ್ ಎಂಬುವವರು ದೂರು ನೀಡಿದ್ದು, ಕೊತ್ವಾಲಕಟ್ಟೆ ಗ್ರಾಮದ ಸರ್ವೆ ನಂ.5/3 ಕ್ಕೆ ಸಂಬಂಧಿಸಿದಂತೆ 13.12 ಗುಂಟೆ ಜಮೀನನ್ನು ಕೃಷ್ಣಮೂರ್ತಿ ಎಂಬುವವರಿಂದ 2019 ರ ಜೂನ್‌ನಲ್ಲಿ ಖರೀದಿಸಿದ್ದೆ. ಅದು ಪಕ್ಕಾಪೋಡಿಯಾಗಿ ಸರ್ವೆ ನಂ. 5/4 ಆಗಿ ಪರಿವರ್ತನೆಯಾದ ನಿವೇಶನದ ವಿಚಾರವಾಗಿ ಆರೋಪಿಗಳು ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ2022 ರಲ್ಲಿ ನ್ಯಾಯಾಲಯದಿಂದ ಪ್ರತಿಬಂಧಕಾದೇಶ ಪಡೆದಿದ್ದೆ. ಈ ವರ್ಷದ ಜುಲೈ 10 ರಂದು ಭೂ ಮಾಪನ ಅಧಿಕಾರಿಗಳು ಬಂದಾಗ ಆರೋಪಿಗಳಾದ ಪ್ರಕಾಶ್ ಕಲಾಲ್, ಅಭಿಷೇಕ್ ಕಲಾಲ್, ರಾಘು ಕಲಾಲ್, ನಿಖಿಲ್ ಕಲಾಲ್ ಸದರಿ ಸ್ವತ್ತಿನಲ್ಲಿ ಅಕ್ರಮ ಪ್ರವೇಶ ಮಾಡಿ, ಬೇಲಿ ಮುರಿದು ದಾಂಧಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮಾಜಿ ಶಾಸಕ ಹಾಲಪ್ಪ ಜೀವ ಬೆದರಿಕೆ ಹಾಕಿದ್ದಾರೆ, ಮಾಧ್ಯಮಗಳ ಎದುರು ಸುಳ್ಳು ಭಾಷಣ ಮಾಡಿದ್ದಾರೆ. ಈ ಎಲ್ಲ 43 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಾಗರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದ ಪ್ರಕಾರ ಪೊಲೀಸರು ನ.7 ರಂದು ನ್ಯಾಯಾಲಯಕ್ಕೆ ಎಫ್‌ಐಆರ್ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next