Advertisement

ಕೋಲು ಮಂಡೆ ಹಾಡು ವಿವಾದ; ಚಂದನ್‌ ಶೆಟ್ಟಿ ವಿರುದ್ಧ ದೂರು

11:13 PM Aug 26, 2020 | mahesh |

ಬೆಂಗಳೂರು: ನೀಲಗಾರ ಪರಂಪರೆಯ ಜಾನಪದ ಗೀತೆಗೆ ಸಂಬಂಧಿಸಿದ ಆಲ್ಬಂ ಗೀತೆಯಲ್ಲಿ ಶರಣೆಯೊಬ್ಬರನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಆರೋಪಿಸಿ ರ್ಯಾಪರ್‌ ಚಂದನ್‌ ಶೆಟ್ಟಿ ಅವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಬೆಂಗಳೂರಿನ ನಿವಾಸಿಯೊಬ್ಬರು ನೀಡಿದ ದೂರಿನ ಅನ್ವಯ ಚಂದನ್‌ ಶೆಟ್ಟಿ ವಿರುದ್ಧ ಎನ್‌ಸಿಆರ್‌ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

Advertisement

ಇತ್ತೀಚೆಗೆ ಚಂದನ್‌ ಶೆಟ್ಟಿ ನೀಲಗಾರ ಪರಂಪರೆಯ ಕೋಲು ಮಂಡೆ ಜಾನಪದ ಹಾಡಿನ ಆಲ್ಬಮ್‌ ವೀಡಿಯೋ ಬಿಡುಗಡೆ ಮಾಡಿದ್ದು. ಅದರಲ್ಲಿ ಭಕ್ತೆಯನ್ನು ಅಶ್ಲೀಲವಾಗಿ ತೋರಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಜರಗಿಸಿ ಎಂದು ದೂರುದಾರರು ಕೋರಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next