Advertisement
ಕರ್ನಾಟಕ ಗಮಕ ಕಲಾಪರಿಷತ್ ಕೇರಳ ಘಟಕದ ಅಧ್ಯಕ್ಷರಾದ ಟಿ. ಶಂಕರನಾರಾಯಣ ಭಟ್ ಅವರು ಕೇರಳ ಮಾನವ ಹಕ್ಕುಗಳ ಆಯೋಗ, ಮಕ್ಕಳ ಹಕ್ಕುಗಳ ಆಯೋಗ, ಕೇಂದ್ರ ಭಾಷಾ ಅಲ್ಪಸಂಖ್ಯಾಕ ಆಯೋಗ, ಪಿ.ಎಸ್.ಸಿ. ಚೆಯರ್‌ಮನ್ ಅವರಿಗೆ ದಾಖಲೆಸಹಿತ ದೂರನ್ನು ಸಮರ್ಪಿಸಿದ್ದಾರೆ.
Related Articles
Advertisement
ಇದು ಮೂರನೆಯ ಬಾರಿಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕೋರ್ ಸಬೆjಕ್ಟ್ಗಳಿಗೆ ಕನ್ನಡದ ಗಂಧಗಾಳಿಯಿಲ್ಲದ ಶಿಕ್ಷಕರನ್ನು ನೇಮಿಸುತ್ತಿರುವುದು ಇದು ಮೂರನೇ ಬಾರಿ. ಹಿಂದೆಯೂ ಇದರ ವಿರುದ್ಧ ಕನ್ನಡಿಗರು ಪ್ರಬಲವಾಗಿ ಪ್ರತಿಭಟಿಸಿದ್ದರು. ಹಲವಾರು ಮಂದಿ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘಟನೆಗಳು, ಕನ್ನಡ ಅಧ್ಯಾಪಕ ಸಂಘಟನೆಗಳು, ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಾ ಭಿಮಾನಿಗಳು ಹೋರಾಟ ನಡೆಸಿದ್ದರು. ನ್ಯಾಯಾಲಯದ ಮೊರೆ ಹೋಗಿದ್ದರು. ಸರಕಾರಕ್ಕೆ ಹಲವಾರು ದೂರು ಮನವಿಗಳ ಸಮರ್ಪಣೆಯಾಗಿತ್ತು. ಕೇರಳ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ವಿದ್ಯಾಧಿಕಾರಿಗಳು ಮೊದಲಾದವರ ತನಿಖೆಯಲ್ಲೂ ಕನ್ನಡ ವಿದ್ಯಾರ್ಥಿಗಳಿಗೆ ಬೋಧಿಸಲು ಕನ್ನಡ ಅರಿತ ಶಿಕ್ಷಕರನ್ನೇ ನೇಮಿಸಬೇಕಾದ ಅಗತ್ಯ ಕಂಡುಬಂದಿತ್ತು. ಇವರನ್ನು ಬಿ.ಆರ್.ಸಿ. ಗೆ ಕನ್ನಡ ಕಲಿಯಲು ವರ್ಗಾಯಿಸಿದ್ದೇ ಇವರಿಗೆ ಕನ್ನಡ ಜ್ಞಾನವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು. ಭವಿಷ್ಯದಲ್ಲಿ ಬಹಳ ಜಾಗರೂಕತೆ ವಹಿಸಿ ಕನ್ನಡ ತಿಳಿದ ಶಿಕ್ಷಕರನ್ನೇ ಕನ್ನಡ ಮಾಧ್ಯಮ ಶಾಲೆಗಳಿಗೆ ಆರಿಸಬೇಕೆಂದೂ ಲಿಖೀತ ಪರೀಕ್ಷೆಯ ಮೂಲಕ ಕನ್ನಡ ಭಾಷಾಜ್ಞಾನವನ್ನು ಪರೀಕ್ಷಿಸಬೇಕೆಂದೂ ಬೊಲ್ಪು ಸಂಘಟನೆ ನಡೆಸಿದ ದಾವೆಯ ತೀರ್ಪಿನಲ್ಲಿ ಕೇರಳ ಉಚ್ಚ ನ್ಯಾಯಾಲಯ ಪಿ.ಎಸ್.ಸಿ.ಗೆ ಸೂಚಿಸಿತ್ತು. ಕನ್ನಡ ತಿಳಿಯದ ಶಿಕ್ಷಕರು ನೇಮಕಗೊಂಡು ಹಲವು ವರ್ಷಗಳ ಬಳಿಕವೂ ಕನ್ನಡ ಕಲಿಯದೆ ಮಲಯಾಳದಲ್ಲೇ ಪಾಠ ಮಾಡುತ್ತಿದ್ದಾರೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆ ಯಾಗಿದ್ದು ತನ್ನ ತೀರ್ಪಿನಲ್ಲೂ ಇದನ್ನು ಉಲ್ಲೇಖೀಸಿತ್ತು. ಇದರ ಫಲವಾಗಿ ಹಾಗೂ ಕನ್ನಡಿಗರ ಪ್ರಯತ್ನದ ಕಾರಣದಿಂದ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಮೊದಲಾದ ವಿಷಯಗಳನ್ನು ಬೋಧಿಸುವ ಕನ್ನಡ ಹಾಗೂ ತಮಿಳು ಮಾಧ್ಯಮ ಪ್ರೌಢಶಾಲಾ ಶಿಕ್ಷಕರ ಮೂಲ ಅರ್ಹತೆಯಲ್ಲಿ ಕ್ರಮವಾಗಿ ಕನ್ನಡ ಹಾಗೂ ತಮಿಳು ಕಲಿಕೆಯನ್ನು ಕಡ್ಡಾಯಗೊಳಿಸಿದ ಸರಕಾರಿ ಆದೇಶ G.O(P)No.166/16 G Edn Dt.Tvm 30-9-2016 ಪ್ರಕಟವಾದುದರಿಂದ ಇನ್ನು ಮುಂದೆ ಕನ್ನಡಬಾರದವರ ಆಯ್ಕೆ ನಡೆಯಲಾರದೆಂದು ಕನ್ನಡಿಗರು ಸಮಾಧಾನಪಟ್ಟಿದ್ದರು. ಆ ಆದೇಶದ ಪ್ರಕಾರ ಕನ್ನಡ ಪ್ರೌಢಶಾಲೆಗಳಲ್ಲಿ ವಿಜ್ಞಾನ ಮೊದಲಾದ ವಿಷಯಗಳನ್ನು ಬೋಧಿಸಲು ನಿಯುಕ್ತರಾಗುವ ಶಿಕ್ಷಕರು ತಮ್ಮ ಎಸ್‌ಎಸ್‌ಎಲ್‌ಸಿ ಅಥವಾ ಪ್ಲಸ್ ಟು ಅಥವಾ ಪದವಿಪೂರ್ವ ತರಗತಿಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿ ತೇರ್ಗಡೆಗೊಂಡವರಾಗಿರಬೇಕು ಅಥವಾ ಪದವಿ ಇಲ್ಲವೇ ಸ್ನಾತಕೋತ್ತರ ಪದವಿಯಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿತಿರಬೇಕು ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು. ಇದೇ ನಿಯಮ ತಮಿಳು ಮಾಧ್ಯಮ ಪ್ರೌಢಶಾಲಾ ಶಿಕ್ಷಕರಿಗೆ ತಮ್ಮ ಶೈಕ್ಷಣಿಕ ಹಂತಗಳಲ್ಲಿ ತಮಿಳು ಕಲಿಕೆಯನ್ನೂ ಕಡ್ಡಾಯಗೊಳಿಸಿತ್ತು. ಆದರೆ ಮೇಲಿನ ಆದೇಶ ಪ್ರಕಟ ವಾಗುವುದಕ್ಕಿಂತ ಹಿಂದಿನ ವಿಜ್ಞಾಪನೆ ಯಾದುದರಿಂದ ಈಚೆಗೆ ನಡೆದ ಫಿಸಿಕಲ್ ಸಯನ್ಸ್ ಕನ್ನಡ ಮಾಧ್ಯಮ ಶಿಕ್ಷಕರ ಪರೀಕ್ಷೆಯಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡವನ್ನು ಕಲಿತಿರಬೇಕು ಎಂಬ ಅರ್ಹತೆ ಯನ್ನು ಪರಿಗಣಿಸದೆ ಸಂದರ್ಶನ ಸಮಯಲ್ಲಿ ಕನ್ನಡ ಭಾಷಾಜ್ಞಾನ ಪರೀಕ್ಷಿ ಸುವ ಹಳೆಯ ವಿಧಾನದ ಮೂಲಕವೇ ಆಯ್ಕೆ ನಡೆದಿದೆ. ಮಾತೃಭಾಷೆ ಶಿಕ್ಷಕರ ನೇಮಕ ನಿಯಮ ರೂಪಿಸಲು ಮನವಿ
ಕನ್ನಡ ಶಾಲೆಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಬಾರದು, ಕನ್ನಡ ಮಾಧ್ಯಮಕ್ಕೆ ಯಾವುದೇ ವಿಷಯವನ್ನು ಬೋಧಿಸಲು ನೇಮಕವಾಗುವ ಶಾಲೆ ಯಲ್ಲಿ ಶಿಕ್ಷಕರು ಕನ್ನಡ ಕಲಿತವರಾಗ ಬೇಕೆಂದು ನಿಯಮ ಮಾಡಬೇಕೆಂದು ಟಿ. ಶಂಕರನಾರಾಯಣ ಭಟ್ ಸಂಬಂಧಪಟ್ಟವರನ್ನು ವಿನಂತಿಸಿದ್ದಾರೆ. ಕನ್ನಡ ಭಾಷಾತಜ್ಞರ ಉಪಸ್ಥಿತಿಯಲ್ಲೇ ಆಯ್ಕೆ?
ಸಂದರ್ಶನ ಸಮಿತಿ ಯಲ್ಲಿ ಕನ್ನಡ ಭಾಷಾತಜ್ಞರು ಪಾಲ್ಗೊಂಡಿದ್ದರೂ ಕನ್ನಡ ತಿಳಿಯದ ಅಭ್ಯರ್ಥಿಗಳ ಆಯ್ಕೆಯನ್ನು ವಿರೋಧಿಸ ದಿರುವುದರಿಂದ ಮಲಯಾಳಿ ಅಭ್ಯರ್ಥಿಗಳ ಆಯ್ಕೆ ನಡೆಯಿತೆನ್ನಲಾಗಿದೆ. ಕನ್ನಡ ಭಾಷಾತಜ್ಞರ ಉಪಸ್ಥಿತಿಯಲ್ಲೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎಂದು ಪಿಎಸ್‌ಸಿ ಮಾನವಹಕ್ಕು ಆಯೋಗ ಹಾಗೂ ಕೇರಳ ಉಚ್ಚ ನ್ಯಾಯಾಲಯದೆದುರು ಹಿಂದೆ ಕೂಡ ಹೇಳಿಕೆ ನೀಡಿದ್ದರಿಂದ ಇಂತಹ ಸಂದರ್ಭಗಳಲ್ಲಿ ಕನ್ನಡ ಭಾಷಾತಜ್ಞರ ಪಾತ್ರ ಎಷ್ಟು ಮಹತ್ವದ್ದು ಎಂಬುದು ಮನದಟ್ಟಾಗುತ್ತದೆ. ಎಸ್.ಸಿ. ವಿಭಾಗದಲ್ಲಿ ಕನ್ನಡಬಲ್ಲ ಅಭ್ಯರ್ಥಿಗಳೇ ಇದ್ದುದರಿಂದ ಅವರಿಬ್ಬರೂ ಆಯ್ಕೆಯಾದರು. ಮುಸ್ಲಿಂ ವಿಭಾಗದಲ್ಲಿ ಕನ್ನಡಿಗರು ಇಲ್ಲದೆ ಇಬ್ಬರು ಮಲಯಾಳಿಗಳ ಆಯ್ಕೆಯಾಯಿತು, ನಾಡಾರ್, ಒ.ಎಕ್ಸ್, ದೀವಾರ ಸಮುದಾಯಗಳಲ್ಲಿ ಕನ್ನಡ ಕಲಿತವರಿಲ್ಲದ ಕಾರಣ ತಲಾ ಒಬ್ಬರಂತೆ ಮೂವರು ಹೀಗೆ ಒಟ್ಟು ಐದು ಮಂದಿ ಕನ್ನಡ ತಿಳಿಯದವರ ಆಯ್ಕೆ ನಡೆದಿದೆ. ಇವರಲ್ಲಿ ಮೊದಲ ಮೂರು ಮಂದಿಗೆ ತತ್‌ಕ್ಷಣ ನೇಮಕಾತಿ ದೊರೆಯಬಹುದು ಎನ್ನಲಾಗುತ್ತಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಬಾರದ ಶಿಕ್ಷಕರನ್ನು ನೇಮಿಸಿದರೆ ಕನ್ನಡ ವಿದ್ಯಾರ್ಥಿಗಳು ಹಾಗೂ ಪೋಷಕರು ಹೋರಾಟ ನಡೆಸಲು ಸಿದ್ಧವಾಗಿದ್ದಾರೆ. ಕನ್ನಡಿಗರ ಉದ್ಯೋಗ ಅವಕಾಶಕ್ಕೆ ಕುತ್ತು
ಭೌತಿಕ ವಿಜ್ಞಾನ (ಫಿಸಿಕಲ್ ಸಯನ್ಸ್) ಕನ್ನಡ ಮಾಧ್ಯಮ ಪ್ರೌಢಶಾಲಾ ಅಧ್ಯಾಪಕ ಎನ್.ಸಿ.ಎ. (ಎಸ್.ಸಿ, ಒ.ಎಕ್ಸ್, ನಾಡಾರ್, ದೀವಾರ, ಮುಸ್ಲಿಂ ಸಮುದಾಯಗಳಿಗೆ ಮೀಸಲು) ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಪಿ.ಎಸ್.ಸಿ. ಸಂದರ್ಶನ ನಡೆದಿದ್ದು ಎಸ್. ಸಿ. ವಿಭಾಗದಲ್ಲಿ ಇಬ್ಬರು ಕನ್ನಡ ಬಲ್ಲ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಒ.ಎಕ್ಸ್, ನಾಡಾರ್, ದೀವಾರ ವಿಭಾಗಗಳಲ್ಲಿ ತಲಾ ಒಂದು ಹಾಗೂ ಮುಸ್ಲಿಂ ವಿಭಾಗದಲ್ಲಿ ಇಬ್ಬರು ಹೀಗೆ ಒಟ್ಟು ಐದು ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಅವರಿಗೆ ಕನ್ನಡ ಭಾಷೆಯ ಪ್ರಾಥಮಿಕ ಜ್ಞಾನವೂ ಇಲ್ಲ. ಇಂತಹ ಅನರ್ಹರನ್ನು ಆರಿಸಿದರೆ ಸಮರ್ಪಕವಾಗಿ ಕನ್ನಡ ಬಲ್ಲವರಾದ ತಮ್ಮ ಉದ್ಯೋಗ ಅವಕಾಶಕ್ಕೆ ಕುತ್ತಾಗುತ್ತದೆ ಎಂಬುದು ಕನ್ನಡಿಗ ಉದ್ಯೋಗಾರ್ಥಿಗಳ ದೂರು.